ಸಾಂದರ್ಭಿಕ ಚಿತ್ರ 
ದೇಶ

ನಿಲ್ದಾಣದ ಬಳಿ ಅಂಟಿಸಿದ್ದ ಜಾಹಿರಾತು ತೆಗೆದ ವ್ಯಕ್ತಿಗೆ ಅಭಿನಂದನೆ ಸಲ್ಲಿಸಿದ ಮೆಟ್ರೋ.. Metro

ಪ್ರಮುಖ ಮುಖ್ಯಾಂಶಗಳು

  • ಜನರ ಗಮನ ಸೆಳೆಯುವ ಸಲುವಾಗಿ ಮೆಟ್ರೋ ಬಳಿ ಜಾಹಿರಾತು ಅಂಟಿಸಿದ ಮೆಟ್ರೋ
  • ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಸಲೂನ್​ಗೆ ದಂಡ ವಿಧಿಸಿದೆ
  • ಮುಂಬೈ ನಿವಾಸಿಯೊಬ್ಬರು ಸ್ವತಃ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಪೋಸ್ಟರ್ ಅನ್ನು ತೆಗೆದುಹಾಕಿದ್ದಾರೆ.
  • ಅಲ್ಲಿನ ಸೌಂದರ್ಯವನ್ನು ಹಾಳು ಮಾಡಲು ನನಗೆ ಇಷ್ಟವಿರಲಿಲ್ಲ: ಕಾರ್ತಿಕ್ ನಾಡರ್
ಮುಂಬೈ: ಸಲೂನ್​ ಒಂದು ಜನರ ಗಮನ ಸೆಳೆಯುವ ಸಲುವಾಗಿ ಮೆಟ್ರೋ (metro) ಲೈನ್ 2B ಪಿಲ್ಲರ್ ಮೇಲೆ ಜಾಹೀರಾತಿನ ಪೋಸ್ಟರ್​ನ್ನು ಅಂಟಿಸಿದ್ದಕ್ಕಾಗಿ ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಸಲೂನ್​ಗೆ ದಂಡ ವಿಧಿಸಿರುವ ಘಟನೆ ಮುಂಬೈನಲ್ಲಿ ಗುರುವಾರ (ನ.06) ನಡೆದಿದೆ.
ಮುಂಬೈ ನಿವಾಸಿಯೊಬ್ಬರು ಸ್ವತಃ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಪೋಸ್ಟರ್ ಅನ್ನು ತೆಗೆದುಹಾಕಿದ್ದಾರೆ. ಈ ಘಟನೆಯು ನಾಗರಿಕ ಜವಾಬ್ದಾರಿಯನ್ನು ಪ್ರಶಂಸಿಸಲು ಮತ್ತು ಸಾರ್ವಜನಿಕ ಆಸ್ತಿಯನ್ನು ನಿರ್ವಹಿಸುವ ಬಗ್ಗೆ ಜಾಗೃತಿ ಮೂಡಿಸಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರ ಕಾರ್ತಿಕ್ ನಾಡರ್ (@runkarthikrun) ಎಂಬುವವರು ಡಿಎನ್ ನಗರ ಮತ್ತು ಮಂಡಲೆ ನಡುವೆ ಚಲಿಸುವ ನಿರ್ಮಾಣ ಹಂತದಲ್ಲಿರುವ ಮುಂಬೈ ಮೆಟ್ರೋ ಲೈನ್ 2B ಯಲ್ಲಿ ಹೊಸದಾಗಿ ಅಲಂಕೃತಗೊಂಡಿದ್ದ ಕಂಬದ ಮೇಲೆ ಸಲೂನಿನ ಜಾಹಿರಾತನ್ನು ಅಂಟಿಸಿದ್ದರು. ಇದನ್ನು ಗಮನಿಸಿದ ಪ್ರಯಾಣಿಕ ನಾಡರ್ ಸ್ವತಃ ಅವರೇ ಪೋಸ್ಟರ್​ನ್ನು ತೆಗೆಯಲು ನಿರ್ಧರಿಸಿದ್ದರು.
ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ "ಯಾರೋ ಮೂರ್ಖರು ಮುಂಬೈ ಮೆಟ್ರೋ ಲೈನ್ 2B ಯ ಕಂಬದ ಮೇಲೆ ತನ್ನ ವ್ಯಾಪಾರ ಜಾಹೀರಾತನ್ನು ಅಂಟಿಸಿದ್ದರು. ನಾನು ಇದನ್ನು ಅಲ್ಲಿಂದ ತೆಗೆಯಲು ಬಯಸಿದೆ. ಏಕೆಂದರೆ, ಅಲ್ಲಿನ ಸೌಂದರ್ಯವನ್ನು ಹಾಳು ಮಾಡಲು ನನಗೆ ಇಷ್ಟವಿರಲಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ನ್ನು ಹಂಚಿಕೊಂಡಿದ್ದರು.
ವೈರಲ್​ ಆದ ಪೋಸ್ಟ್​ಗೆ MMMOCL ಪ್ರತಿಕ್ರಿಯಿಸಿದ್ದು, ನಾದರ್​ ಅವರ ಸಾರ್ವಜನಿಕವಾಗಿ ಶ್ಲಾಘಿಸಿದ್ದು, ಮೆಟ್ರೋ ಕಂಬಗಳ ಮೇಲೆ ಜಾಹೀರಾತುಗಳ ಯುದ್ಧಗಳು ನಡೆಯುತ್ತಿವೆ. ಇದನ್ನು ತೆಗೆದುಹಾಕಿದ ನಾಗರಿಕ ನಾಯಕ ಕಾರ್ತಿಕ್ ನಾಡರ್ ಅವರಿಗೆ ದೊಡ್ಡ ಅಭಿನಂದನೆಗಳು ಎಂದು ಸಂಸ್ಥೆಯು ಬರೆದಿತ್ತು. (ಏಜೆನ್ಸೀಸ್​)
ಮೆಟ್ರೋ ಆವರಣದಲ್ಲಿ ಅಕ್ರಮ ಪೋಸ್ಟರ್‌ಗಳು ಅಥವಾ ಜಾಹೀರಾತು ಫಲಕಗಳನ್ನು ಹಾಕುವುದು ಗಂಭೀರ ತಪ್ಪಾಗಿದ್ದು, 2002 ರ ಸೆಕ್ಷನ್ 62(2) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಸಲೂನ್​ಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)