Farmer Injustice (ಸಾಂದರ್ಭಿಕ ಚಿತ್ರ)
- ಮಧ್ಯಪ್ರದೇಶದ ಗುಣ ಜಿಲ್ಲೆಯ ಪ್ರಸಿದ್ಧ ನಾನಾಖೇಡಿ ಕೃಷಿ ಉಪಜ್ ಮಂಡಿ ಸದಾ ಗದ್ದಲಕ್ಕೆ ಹೆಸರುವಾಸಿ
- ರೈತರೊಬ್ಬರು ಹೊಸದಾಗಿ ಕೊಯ್ಲು ಮಾಡಿದ ಕೊತ್ತುಂಬರಿ ಮತ್ತು ಸಾಸಿವೆ ಚೀಲಗಳ ರಾಶಿಯ ಪಕ್ಕದಲ್ಲಿ ಕೈಕಟ್ಟಿ ನಿಂತು ಅಳುತ್ತಿದ್ದಾರೆ
- ಮಾರುಕಟ್ಟೆ ನಿರೀಕ್ಷಕರ ನಡುವಿನ ವಿವಾದದ ನಂತರ ಮಂಡಿ ಹರಾಜು ಪ್ರಕ್ರಿಯೆಯು ಸ್ಥಗಿತಗೊಂಡಿತು
- ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಮದ್ಯ ಸೇವಿಸಿದ್ದರಿಂದ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿದ್ದರು
ಮಧ್ಯಪ್ರದೇಶ: ಮಧ್ಯಪ್ರದೇಶದ ಗುಣ ಜಿಲ್ಲೆಯ ಪ್ರಸಿದ್ಧ ನಾನಾಖೇಡಿ ಕೃಷಿ ಉಪಜ್ ಮಂಡಿ ಸದಾ ಗದ್ದಲಕ್ಕೆ ಹೆಸರುವಾಸಿ. ಆದರೆ, ಆ ಗದ್ದಲದ ನಡುವೆಯೂ ರೈತರೊಬ್ಬರು ಹೊಸದಾಗಿ ಕೊಯ್ಲು ಮಾಡಿದ ಕೊತ್ತುಂಬರಿ ಮತ್ತು ಸಾಸಿವೆ ಚೀಲಗಳ ರಾಶಿಯ ಪಕ್ಕದಲ್ಲಿ ಕೈಕಟ್ಟಿ ನಿಂತು "ನಾಳೆ ನನ್ನ ಮಗಳ ಮದುವೆ ದಯವಿಟ್ಟು ನನ್ನ ಬೆಳೆ ಖರೀದಿಸಿ" ಎಂದು ಬೇಡಿಕೊಳ್ಳುತ್ತಿರುವ ದೃಶ್ಯ ನೋಡುಗರನ್ನು ತಲ್ಲಣಗೊಳಿಸಿದೆ.
ಆದಾಗ್ಯೂ, ಮಂಗಳವಾರ (ಮಾ.11) ಮಾರುಕಟ್ಟೆ ನಿರೀಕ್ಷಕರ ನಡುವಿನ ವಿವಾದದ ನಂತರ ಮಂಡಿ ಹರಾಜು ಪ್ರಕ್ರಿಯೆಯು ಸ್ಥಗಿತಗೊಂಡಿತು. ಈ ವೇಳೆ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಶರ್ಮಾ ವಿಪರೀತ ಮದ್ಯ ಸೇವಿಸಿದ್ದರಿಂದ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿದ್ದರು ಎಂದು ರೈತರು ಆರೋಪಿಸಿದ್ದಾರೆ.
ಘಟನೆ ಏನು?
ರೈತನೊಬ್ಬನ ಕೊತ್ತಂಬರಿ ಪ್ರತಿ ಕ್ವಿಂಟಲ್‌ಗೆ 5,700 ರೂ.ಗಳ ಅತ್ಯಧಿಕ ಬಿಡ್ ಪಡೆದಾಗ ವಿವಾದ ಪ್ರಾರಂಭವಾಯಿತು. ಆದರೆ, ಇನ್ಸ್‌ಪೆಕ್ಟರ್ ಶರ್ಮಾ ಚೀಟಿಯಲ್ಲಿ 5,400 ರೂ.ಗಳನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.
ಪ್ರತಿ ಕ್ವಿಂಟಲ್‌ಗೆ 300 ರೂ.ಗಳಂತೆ ನೂರಾರು ಚೀಲಗಳಿಗೆ ಸಾವಿರಾರು ರೂಪಾಯಿಗಳ ನಷ್ಟವನ್ನು ಅನುಭವಿಸುವುದಾಗಿ ಅರಿತುಕೊಂಡ ರೈತ ನ್ಯಾಯ ಕೇಳಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ನಿಂದನೀಯವಾಗಿ ವರ್ತಿಸಿದ್ದು, ಇದು ವ್ಯಾಪಾರಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಸಿಟ್ಟಿಗೆದ್ದ ವ್ಯಾಪಾರಸ್ಥರು ಬಿಡ್ಡಿಂಗ್ನ್ನು ಸಂಪೂರ್ಣವಾಗಿ ನಿಲ್ಲಿಸಿದರು.
ಮಂಡಿಗೆ ಶ್ರೀಪುರ್ಚಕ್ ಗ್ರಾಮದ ರೈತರೊಬ್ಬರು ಮಗಳ ಮದುವೆಗೆ ಹಣ ಹೊಂದಿಸುವ ಸಲುವಾಗಿ ಆಗಷ್ಟೇ ಬೆಳೆದಿದ್ದ ಕೊತ್ತುಂಬರಿ ಬೆಳೆಯನ್ನು ತಂದಿದ್ದರು. ಮಂಡಿಯಲ್ಲಿ ವ್ಯಾಪಾರ ಸ್ಥಗಿತಗೊಂಡ ಕಾರಣ ಅಲ್ಲೇ ನಿಂತು ಅಧಿಕಾರಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಕೈಮುಗಿದು ನಾಳೆ ನನ್ನ ಮಗಳ ಮದುವೆ ಆಚರಣೆಗಳಿಗೆ ಹಣ ಬೇಕು. ನನ್ನ ಬೆಳೆ ಇಂದು ಮಾರಾಟವಾಗದಿದ್ದರೆ, ಮದುವೆ ಹಾಳಾಗುತ್ತದೆ ಎಂದು ಅಳುತ್ತಾ ನಿಂತಿದ್ದರು.
ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡ ಹಿನ್ನಲೆ ಅಲ್ಲಿಗೆ ಬಂದಿದ್ದ ರೈತರು ಬೀದಿಗಿಳಿದು ಪ್ರತಿಭಟಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಕಂಟೋನ್ಮೆಂಟ್ ಠಾಣೆಯ ಪೊಲೀಸರು ರೈತರನ್ನು ರಸ್ತೆ ತೆರವುಗೊಳಿಸುವಂತೆ ಮನವೊಲಿಸುವ ಪ್ರಯತ್ನಿಸಿದರು.
ಮಂಡಿ ಮುಚ್ಚಿರುವುದರಿಂದ ನಮಗೆ ತೊಂದರೆಯಾಗಿದೆ!
ಈ ಅವಸ್ಥೆಯಿಂದಾಗಿ ಟ್ರಾಕ್ಟರ್ ಸಾಗಣೆಗೆ ಎರಡು ಬಾರಿ ಖರ್ಚು ಮಾಡಲಾಗಿದೆ. ಬೆಳಿಗ್ಗೆ ಸುಮಾರು 7 ಗಂಟೆಗೆ ಇಲ್ಲಿಗೆ ಬಂದಿದ್ದೆ ಬಿಡ್ 5,700 ರೂ. ಆಗಿತ್ತು. ಆದರೆ, ಅದನ್ನು 300 ರೂ. ಕಡಿಮೆ ಮಾಡಲಾಗಿದೆ. ಇದರ ಬಗ್ಗೆ ಆಡಳಿತ ಯಾವುದೇ ಗಮನ ಹರಿಸುತ್ತಿಲ್ಲ ಎಲ್ಲವೂ ಅನಿಯಂತ್ರಿತವಾಗಿದೆ ಎಂದು ರೈತ ಗಿರಿರಾಜ್ ಯಾದವ್ ತಮ್ಮ ಅಳಲು ತೋಡಿಕೊಂಡರು.
ಮಾಜಿ ಸಚಿವ ಜೈವರ್ಧನ್ ಸಿಂಗ್ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಸ್ವಂತ ಬೆಳೆಯನ್ನು ಮಾರಾಟ ಮಾಡಲು ಮಂಡಿಯಲ್ಲಿ ಅಳುತ್ತಿರುವ ರೈತನ ಚಿತ್ರಣವು ತೀವ್ರವಾಗಿ ತೊಂದರೆದಾಯಕವಾಗಿದೆ.
ಆದಾಗ್ಯೂ, ನಾಳೆ ಅವರ ಮಗಳ ಮದುವೆ ಇದೆ, ಮತ್ತು ರೈತ ತನ್ನ ಧಾನ್ಯವನ್ನು ಖರೀದಿಸಲು ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದಾನೆ. ಈ ದೃಶ್ಯ ದೇಶದ ಆಹಾರ ಪೂರೈಕೆದಾರರನ್ನು ಅವಮಾನಿಸಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು (ಏಜೆನ್ಸೀಸ್).