ಪ್ರಿಯಾಂಕಾ ಮೋಹನ್ 
ದೇಶ

ಮೇಡ್​ ಇನ್ ಕೊರಿಯಾ ವೆಬ್ ಸರಣಿ ಯಶಸ್ಸು; ಕೊರಿಯಾ ಪ್ರವಾಸೋದ್ಯಮ ರಾಯಭಾರಿಯಾದ ಪ್ರಿಯಾಂಕಾ ಮೋಹನ್ | Priyanka Mohan

ಚೆನ್ನೈ: ಸೌತ್ ಸಿನಿರಂಗದಲ್ಲಿ ತನ್ನ ನಟನೆ ಮೂಲಕ ಚಾಪು ಮೂಡಿಸಿ ಉತ್ತಮ ನಟಿಯಾಗಿ ಹೆಸರು ಗಳಿಸಿರುವ ಬೆಂಗಳೂರು ಮೂಲದ ತಮಿಳು ನಟಿ ಪ್ರಿಯಾಂಕಾ ಮೋಹನ್(Priyanka Mohan)​ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಂದಿದ್ದು, ಕೊರಿಯಾ ಪ್ರವಾಸೋದ್ಯಮದ ಗೌರವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಇತ್ತೀಚಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಅವರ 'ಮೇಡ್ ಇನ್ ಕೊರಿಯಾ' ವೆಬ್​ ಸರಣಿ ಜಾಗತಿಕವಾಗಿ ಭಾರಿ ಯಶಸ್ಸನ್ನು ಕಂಡಿದ್ದು, ಸೂಪರ ಹಿಟ್ ಆದ ಬಳಿಕ ಕೊರಿಯಾ ಪ್ರವಾಸೋದ್ಯಮ ಸಂಸ್ಥೆ(ಕೆಟಿಒ), ಅವರನ್ನು ತನ್ನ ಅಧಿಕೃತ ರಾಯಭಾರಿಯಾಗಿ ನೇಮಿಸಿಕೊಂಡಿದೆ.
ವೆಬ್​ ಸರಣಿಯ ಯಶಸ್ಸಿ ಪರಿಣಾಮ ಪ್ರಿಯಾಂಕಾ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೊರಹೊಮ್ಮಿದ್ದು, ಈ ಹಿನ್ನೆಲೆ ಕೊರಿಯನ್ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ, ವಿಶೇಷವಾಗಿ ಭಾರತೀಯರಿಗೆ ಪರಿಚಯಿಸುವ ಸಲುವಾಗಿ ಕೊರಿಯನ್ ಸರ್ಕಾರ ಅವರನ್ನು ಈ ಗೌರವ ಹುದ್ದೆಗೆ ಆಯ್ಕೆ ಮಾಡಿದೆ.
ಇನ್ನೂ ತನ್ನನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವ ಪ್ರಿಯಾಂಕಾ, ಕೆಟಿಎ ಕಚೇರಿಗೆ ಭೇಟಿ ಈ ಅವಕಾಶ ನೀಡಿದ್ದಕ್ಕಾಗಿ ಕೊರಿಯನ್ ಸರ್ಕಾರ ಮತ್ತು ಕೊರಿಯಾ ಪ್ರವಾಸೋದ್ಯಮ ಸಂಸ್ಥೆಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಿಯಾಂಕಾ ನಟಿಸಿರುವ ಮೇಡ್ ಇನ್ ಕೊರಿಯಾ ವೆಬ್​ ಸರಣಿಯೂ ಹಿಂದಿ/ತಮಿಳು ಭಾಷೆಯಲ್ಲಿದ್ದಿ, ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸುವ ಭಾರತೀಯ ಹುಡುಗಿಯೊಬ್ಬಳ ಕನಸು ಮತ್ತು ಅಲ್ಲಿನ ಕಷ್ಟಗಳನ್ನು ಚಿತ್ರವೂ ಬಿಂಬಿಸುತ್ತದೆ (ಏಜೆನ್ಸೀಸ್).