- ಜನರಿಗೆ ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ
- ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬರೋಬ್ಬರಿ 111ರೂ. ಹೆಚ್ಚಳವಾಗಿದೆ
- ಮನೆಗೆ ಬಳಸುವ 14 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗಿಲ್ಲ
LPG cylinder: ಹೊಸ ವರ್ಷದ ಆಚರಣೆ ಒಂದು ಕಡೆ ಸಂಭ್ರಮವಾದರೆ ಇನ್ನೊಂದು ಕಡೆ, ಜನರಿಗೆ ತೈಲ ಮಾರುಕಟ್ಟೆ ಕಂಪನಿಗಳು ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ. ನೀವು ತಿಳಿದಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬರೋಬ್ಬರಿ 111ರೂ. ಹೆಚ್ಚಳವಾಗಿದೆ.
ಆದಾಗ್ಯೂ, ಸಾಮಾನ್ಯ ಜನರಿಗೆ ಸಮಾಧಾನಕರ ವಿಷಯವೆಂದರೆ, ಮನೆಗೆ ಬಳಸುವ 14 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗಿರದಿರುವುದು ಕಂಡುಬಂದಿದೆ.
ಜನವರಿ 1 ರಿಂದಲೇ ಹೊಸ ಪರಿಷ್ಕೃತ ದರಗಳು
ಈ ವರ್ಷದಲ್ಲಿ ಮೊದಲ ದಿನದಿಂದಲೇ (ಜ.01) ಜಾರಿಗೆ ಬರುವಂತೆ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳನ್ನು ಕಂಪನಿಗಳು ತಿಳಿಸಿವೆ. ಇದರರ್ಥ ದೆಹಲಿಯಲ್ಲಿ ಈ ಹಿಂದೆ 1580.50 ರೂ.ಗೆ ಲಭ್ಯವಿದ್ದ 19 ಕೆಜಿ ವಾಣಿಜ್ಯ ಸಿಲಿಂಡರ್ ಈಗ 1691.50 ರೂ.ಗೆ ಲಭ್ಯವಾಗಲಿದೆ. ಏತನ್ಮಧ್ಯೆ, ಕೋಲ್ಕತ್ತಾದಲ್ಲಿ ಇದರ ಬೆಲೆ 1,684 ರೂ.ಗಳಿಂದ 1795 ರೂ.ಗಳಿಗೆ ಏರಿಕೆಯಾಗಿದೆ.
ಇದಲ್ಲದೆ, ಮುಂಬೈನಲ್ಲಿ 1531.50 ರೂ.ಗೆ ಲಭ್ಯವಿದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 1642.50 ರೂ.ಗೆ ತಲುಪಿದೆ. ಚೆನ್ನೈನಲ್ಲಿ 1739.5 ರೂ.ನಿಂದ 1849.50 ರೂ.ಗೆ ಏರಿಕೆಯಾಗಿದ್ದು ಇದೀಗ ಕೊಳ್ಳುವ ಜನರ ಕೈ ಸುಡುತ್ತಿದೆ.
ಡಿಸೆಂಬರ್‌ನಲ್ಲಿ ಸಿಲಿಂಡರ್‌ಗಳ ಬೆಲೆಯಲ್ಲಿ ವ್ಯತ್ಯಾಸ
ಇದಕ್ಕೂ ಮುನ್ನ ಡಿಸೆಂಬರ್ 1 ರಂದು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ದೆಹಲಿ ಹಾಗೂ ಕೋಲ್ಕತ್ತಾದಲ್ಲಿ 10 ರೂ. ಕಡಿಮೆಯಾದರೆ, ಮುಂಬೈ ಮತ್ತು ಚೆನ್ನೈನಲ್ಲಿ 11 ರೂ. ಕಡಿಮೆಯಾಗಿತ್ತು.
ಡಿಸೆಂಬರ್‌ನಲ್ಲಿ ಮಾತ್ರವಲ್ಲದೇ, ನವೆಂಬರ್ನಲ್ಲೂ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಏತನ್ಮಧ್ಯೆ, ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 1595.50 ರೂ.ಗಳಿಂದ 1590 ರೂ.ಗಳಿಗೆ, ಕೋಲ್ಕತ್ತಾದಲ್ಲಿ 1700.50 ರೂ.ಗಳಿಂದ 1694 ರೂ.ಗಳಿಗೆ, ಮುಂಬೈನಲ್ಲಿ 1547 ರೂ.ಗಳಿಂದ 1542 ರೂ.ಗಳಿಗೆ ಇಳಿಸಲಾಗಿತ್ತು. ಇದು ಗ್ರಾಹಕರಿಗೆ ಅಗ್ಗವಾಗಿತ್ತು.
ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಅನಿಲಗಳು ಆಗ್ಗಾಗೆ ಬದಲಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಹೆಚ್ಚಾದರೆ, ಕೆಲವೊಮ್ಮೆ ಕಡಿಮೆಯಾಗುತ್ತವೆ. ಸಿಲಿಂಡರ್ ಬೆಲೆಗಳು ಜಾಸ್ತಿಯಾದಂತೆ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಬಳಸುವುರಿಂದ ಹೋಟೆಲ್ ಆಹಾರ ಪದಾರ್ಥಗಳ ಮೇಲೂ ಈ ಏರಿಕೆಗಳು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ (ಏಜೆನ್ಸೀಸ್).