ಲಖನೌ ಹೈಕೋರ್ಟ್​ ಛಾವಣಿ ಏರಿ ಅತ್ಮಹತ್ಯೆ ಬೆದರಿಕೆ ಒಡ್ಡಿದ ಯುವತಿ  
ದೇಶ

ಲಖನೌನಲ್ಲಿ ಲವ್​ ಜಿಹಾದ್​: ಮಗುವಿನೊಂದಿಗೆ ಕಟ್ಟಡ ಏರಿ ಪ್ರಾಣ ಬಿಡಲು ಮುಂದಾದ ಮಹಿಳೆ; ವಿಡಿಯೋ ವೈರಲ್! Viral Video

ಪ್ರಮುಖ ಮುಖ್ಯಾಂಶಗಳು

  • ಲಖನೌನಲ್ಲಿ ಲವ್​ ಜಿಹಾದ್​ ಪ್ರಕರಣ
  • ಲಖನೌ ಹೈಕೋರ್ಟ್​ ಛಾವಣಿ ಏರಿ ಅತ್ಮಹತ್ಯೆ ಬೆದರಿಕೆ ಒಡ್ಡಿದ ಯುವತಿ
  • ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​
ಲಖನೌ: ಮಹಿಳೆಯೊಬ್ಬಳು ಮಡಿಲಲ್ಲಿ ಕಂದಮ್ಮನನ್ನು ಹಿಡಿದು ಕಟ್ಟಡದ ಮೇಲಿಂದ ಬೀಳುವುದಾಗಿ ಬೆದರಿಕೆ ಹಾಕಿದ ಘಟನೆ ಲಖನೌ ಹೈಕೋರ್ಟ್​ ಆವರಣದಲ್ಲಿ ನಡೆದಿದೆ. ಲಖನೌ ಹೈಕೋರ್ಟ್​ನ ಛಾವಣಿಯನ್ನು ಏರಿದ ಮಹಿಳೆ ನನಗೆ ನ್ಯಾಯ ದೊರಕಿಸಿ ಕೊಡಿ ಇಲ್ಲದಿದ್ದರೆ ಮಗುವಿನ ಸಮೇತ ಪ್ರಾಣ ತ್ಯಾಗ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಈ ಹೈಡ್ರಾಮಾ ನ್ಯಾಯಾಲಯದ ಆವರಣದಲ್ಲಿ ಭಯದ ವಾತಾವರಣವನ್ನು ಹುಟ್ಟು ಹಾಕಿದ್ದು, ಸುಮಾರು ಒಂದು ಗಂಟೆವರೆಗೆ ಈ ಡ್ರಾಮಾ ಮುಂದುವರೆದಿದೆ. ನಂತರ ಕೋರ್ಟ್​ ಸಿಬ್ಬಂದಿ ಆಕೆಯನ್ನು ಸಮಾಧಾನ ಪಡಿಸಿ ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ.

ಯಾರಿ ಮಹಿಳೆ? ಏನಿದು ಪ್ರಕರಣ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ (Viral Video) ವನ್ನು ಸೃಷ್ಟಿಸಿದ್ದು ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋನಲ್ಲಿರುವ ಮಹಿಳೆಯನ್ನು ಉತ್ತರ ಪ್ರದೇಶದ ಗೊಂಡಾ ನಿವಾಸಿ ರೂಪಾಲಿ ಶರ್ಮಾ ಎಂದು ಗುರುತಿಸಲಾಗಿದೆ.
ಈ ರೂಪಾಲಿ ಎರಡು ವರ್ಷಗಳ ಹಿಂದೆ ಮೊಹಮ್ಮದ್ ಸಬೀರ್ ಎನ್ನುವವನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ಈ ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಇರಲಿಲ್ಲ. ಕೆಲ ದಿನಗಳ ನಂತರ ಪತಿ-ಪತ್ನಿಯರಲ್ಲಿ ಕಲಹ ಉಂಟಾಗಿದೆ, ಅಷ್ಟರಲ್ಲಿ ರೂಪಾಲಿ ಒಂದು ಮಗವಿನ ತಾಯಿಯಾಗಿದ್ದಳು.
ಆದರೂ ಸಹ ವಿಚ್ಛೇದನವನ್ನು ಪಡೆಯ ಬಯಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಕೆಳ ಹಂತದ ನ್ಯಾಯಾಲಯದಲ್ಲಿ ವಿಚ್ಛೇದನವ ಮಾನ್ಯವಾಗಿದೆ, ಆದರೆ ಪತಿಯಿಂದ ಯಾವುದೇ ಪರಿಹಾರ ದೊರೆಯದ ಹಿನ್ನಲೆ ಹೈಕೋರ್ಟ್​ಗೆ ರೂಪಾಲಿ ಮೇಲ್ಮನವಿ ಸಲ್ಲಿಸಿದ್ದಾಳೆ. ಆದರೆ ಕಳೆದ ಮೂರು ಬಾರಿ ಪತಿ ಮೊಹಮ್ಮದ್ ಸಬೀರ್​ಗೆ ನೋಟಿಸ್​ ನೀಡಿದರೂ ನ್ಯಾಯಾಲಕ್ಕೆ ಹಾಜರಾಗದ ಹಿನ್ನಲೆ ರೂಪಾಲಿ ಈ ನಿರ್ಧಾರವನ್ನು ಕೈಗೊಂಡಿದ್ದಾಳೆ ಎಂದು ತಿಳಿದು ಬಂದಿದೆ, (ಏಜನ್ಸೀಸ್​).