ಪ್ರೇಯಸಿಗೆ ಪಾನಿಪುರಿ ಕೊಟ್ಟು ಪ್ರಪೋಸ್ ಮಾಡುತ್ತಿರುವ ಯುವಕ
- ಆರಂಭವಾಗಿರುವ ವ್ಯಾಲನ್ಟೈರ್ ವಾರ
- ಪ್ರತಿದಿನ ಒಂದೊಂದು ವಿಶೇಷತೆಯಿಂದ ಕೂಡಿರುವ ವಾರ ಇದಾಗಿದೆ
- ಪ್ರಪೋಸ್ ದಿನದ ನಡೆದ ವಿಡಿಯೋ ಸಖತ್ ವೈರಲ್
- ದುಬಾರಿ ಉಂಗುರದ ಬದಲು ಪಾನಿಪುರಿ ಕೊಟ್ಟು ಪ್ರೇಯಸಿಯ ಮನಗೆದ್ದ ಚೋರ
Valentine Week: ಈದೀಗ ವ್ಯಾಲನ್ಟೈನ್ ವಾರ ಪ್ರಾರಂಭವಾಗಿದ್ದು ಪ್ರತಿ ಪ್ರೇಮಿಗಳು ಈ ವಾರಕ್ಕಾಗಿ ತುದಿಗಾಲಲ್ಲಿ ಕಾಯುತ್ತಾ ಕುಳಿತಿರುತ್ತಾರೆ. ವಾರದ ಒಂದೊಂದು ದಿನವು ಒಂದೊಂದು ವಿಶೇಷತೆಗಳನ್ನು ಒಳಗೊಂಡಿರುತ್ತದೆ.
ಅದರಂತಯೇ ಭಾನುವಾರ (ಫೆ.8) ರಂದು ಪ್ರೀತಿಯನ್ನು ವ್ಯಕ್ತಪಡಿಸುವ ಅಂದರೆ ಪ್ರಪೋಸ್ ದಿನವಾಗಿತ್ತು. ಈ ದಿನದಂದು ತಮ್ಮ ಪ್ರೀತಿ ಪಾತ್ರರಲ್ಲಿ, ಪ್ರೀತಿಯನ್ನು ವ್ಯಕ್ತಪಡಿಸಲು ಒಂದೊಂದು ಜೋಡಿ ಒಂದೊಂದು ದಾರಿ ಹುಡುಕುತ್ತಾರೆ. ಕೆಲವರು ಕ್ಯಾಂಡಲ್‌ಲೈಟ್ ಡಿನ್ನರ್ ಆರಿಸಿಕೊಂಡರೆ, ಇನ್ನು ಕೆಲವರು ಐಷಾರಾಮಿ ವಿದೇಶಿ ತಾಣಗಳಲ್ಲಿ ಪ್ರಪೋಸ್ ಮಾಡುತ್ತಾರೆ.
ಆದರೆ ಇಲ್ಲೊಬ್ಬ ದೇಸಿ ಪ್ರೇಮಿ ಮಾಡಿರುವ ಕೆಲಸ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಸಿದೆ. ಏಕೆಂದರೆ ಈತ ಹುಡುಗಿಯ ಮನ ಗೆಲ್ಲಲು ದುಬಾರಿ ವಜ್ರದ ಉಂಗುರದ ಬದಲಾಗಿ ಮಸಾಲೆಯುಕ್ತ ಪಾನಿ ಪುರಿ (Pani Puri) ಯ ಮೊರೆ ಹೋಗಿದ್ದಾನೆ.
ವಿಡಿಯೋದಲ್ಲಿ ಏನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ರಸ್ತೆ ಬದಿಯ ಪಾನಿ ಪುರಿ ಗಾಡಿಯ ಮುಂದೆ ನಿಂತಿರುವ ಯುವಕ, ಒಂದು ಕೈಯಲ್ಲಿ ಗರಿಗರಿಯಾದ ಪಾನಿ ಪುರಿಯನ್ನು ಹಿಡಿದು ಮೊಣಕಾಲೂರಿ ಕುಳಿತು ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ.
ಈ ವಿಡಿಯೋದಲ್ಲಿ ಯುವಕ ಪಾನಿ ಪುರಿಯನ್ನು ಎಷ್ಟು ಜಾಗರೂಕತೆಯಿಂದ ಹಿಡಿದಿದ್ದಾನೆ ಎಂದರೆ, ಅದು ಪ್ರಪಂಚದ ಅತ್ಯಂತ ದುಬಾರಿ ವಜ್ರದ ಉಂಗುರದಂತೆ ಕಾಣುತ್ತಿದೆ. ಈ ವಿಚಿತ್ರ ಸನ್ನಿವೇಶ ನೋಡಿ ಆ ಹುಡುಗಿ ಮೊದಲು ಆಶ್ಚರ್ಯಚಕಿತಳಾಗುತ್ತಾಳೆ. ಆದರೆ ಆತನ ಮುಗ್ಧತೆ ಮತ್ತು ಆತನ ಪ್ರೀತಿಗೆ ಮನಸೋತ ಆಕೆ ಮನಸಾರೆ ನಕ್ಕಿದ್ದಾಳೆ.
ನೆಟ್ಟಿಗರ ಕಾಲೆಳೆಯುವ ಕಮೆಂಟ್ಸ್!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು ಈ ವಿಡಿಯೋ ನೋಡಿದ ಮೇಲೆ ನನಗೆ ಗೋಲ್ಗಪ್ಪ ತಿನ್ನುವ ಕ್ರೇವಿಂಗ್ ಶುರುವಾಗಿದೆ ಎಂದು ಬರೆದರೆ, ಇನ್ನೊಬ್ಬರು ನಮ್ಮಂತಹ ತಿಂಡಿಪೋತಿ ಹುಡುಗಿಯರನ್ನು ಪಾನಿ ಪುರಿಯಿಂದಲೇ ಬುಟ್ಟಿಗೆ ಹಾಕಬಹುದು ಅಂತ ಇವನಿಗೆ ಗೊತ್ತಿದೆ ಎಂದು ಕೆಮೆಂಟ್ ಮಾಡಿದ್ದಾರೆ.
ಯುವಕನ ಪ್ರೀತಿಗೆ ಪ್ರೇಮಿಗಳ ಸಲಾಂ
ಪ್ರೀತಿಗೆ ಸಾವಿರಾರು ರೂಪಾಯಿಯ ಉಂಗುರವೇ ಬೇಕಿಲ್ಲ, ಬದಲಿಗೆ ಸಂಗಾತಿಯ ಇಷ್ಟ-ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಮನಸ್ಸಿದ್ದರೆ ಒಂದು ಪಾನಿ ಪುರಿಯೂ ಸಾಕು ಎಂದು ಈ ಜೋಡಿ ಸಾಬೀತುಪಡಿಸಿದೆ. ಈ ವಿಡಿಯೋ ಈಗ ಸಾವಿರಾರು ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದ್ದು, ಜನರು ತಮ್ಮ ಪಾರ್ಟ್‌ನರ್‌ಗಳನ್ನು ಟ್ಯಾಗ್ ಮಾಡಿ ನಮಗೂ ಹೀಗೆ ಪ್ರಪೋಸ್ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ,(ಏಜನ್ಸೀಸ್).