ದೇಶ

'ಅರ್ಬನ್ ಮೈಂಡ್‌ಸೆಟ್' ಟೀ-ಶರ್ಟ್ ಧರಿಸಿದ್ದ ಯುವತಿಗೆ ಕಿರುಕುಳ; ಕಾರಿನೊಳಕ್ಕೆ ಎಳೆದಾಡಿದ ಕಾನೂನು ಸ್ಟೂಡೆಂಟ್ಸ್ ಬಂಧನ..Delhi

  • 'Urban Mindset' ಟೀ-ಶರ್ಟ್ ಧರಿಸಿದ್ದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿ ಕಿರುಕುಳ

  • ಕಾನೂನು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಯುವತಿಯರು

  • ಸಂತ್ರಸ್ತೆಯ ದೂರು ಪಡೆಯದೆ 3 ಪೊಲೀಸ್ ಠಾಣೆಗಳಿಗೆ ಅಲೆದಾಡಿಸಿದ ಪೊಲೀಸರು

ನವ ದೆಹಲಿ; ಇಲ್ಲಿನ ಮುಖರ್ಜಿ ನಗರದಲ್ಲಿ ಹಿಂದು ಕಾಲೇಜಿನ ಯುವತಿಯ ಬಟ್ಟೆ ನೋಡಿ ಟೀಸ್​​ ಮಾಡಿ, ಕಿರುಕುಳ ಕೊಟ್ಟ ಆರೋಪದ ಮೇರೆಗೆ ದೆಹಲಿ ವಿಶ್ವವಿದ್ಯಾಲಯದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಟೀಶರ್ಟ್​ ವಿಚಾರಕ್ಕೆ ಶುರುವಾದ ಟೀಸಿಂಗ್​

ಬುಧವಾರ ರಾತ್ರಿ 9:30ಕ್ಕೆ ದೆಹಲಿಯ ವಿಜಯನಗರದ ಹಕೀಕತ್ ಪಾರ್ಕ್‌ಗೆ ಭೇಟಿ ನೀಡಿ, ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆ ವಾಪಸ್ ಆಗ್ತಿದ್ದರು. ಆ ವೇಳೆ ಬಿಳಿ ಬಣ್ಣದ ಟಾಟಾ ಸಫಾರಿ ಕಾರಿನಲ್ಲಿ ಬಂದ ಯುವಕರು ಕಿರುಕುಳ ನೀಡಿದ್ದಾರೆ.

ಫಾಲೋ ಮಾಡಿದ ಆರೋಪಿಗಳು

ಕಾರು ಡ್ರೈವ್ ಮಾಡ್ತಿದ್ದ ಯುವಕ ಯುವತಿ ಧರಿಸಿದ್ದ ಕೆಂಪು ಟೀಶರ್ಟ್​ ಮೇಲೆ ಇದ್ದ ಅರ್ಬನ್​ ಮೈಂಡ್​ಸೆಟ್​ ಎನ್ನುವ ಅಡಿ ಬರಹ ಓದಿ ತುಂಬವಾ ಚೆನ್ನಾಗಿದೆ ಟೀ-ಶರ್ಟ್ ಎಂದು ವ್ಯಂಗ್ಯವಾಗಿ ಕೆಣಕಿದ್ದಾನೆ. ವಿದ್ಯಾರ್ಥಿನಿಯರು ಇದನ್ನು ಪ್ರಶ್ನಿಸಿ, ದುರ್ವರ್ತನೆ ಬಗ್ಗೆ ಕಿಡಿಕಾರಿದ್ದಾರೆ, ಆರೋಪಿಗಳು ಅಸಭ್ಯವಾಗಿ ನಿಂದಿಸಿ, ಕಾರಿನಲ್ಲಿ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದರು.

ಯುವಕರ ಈ ದುರ್ವತನೆ ಮೊಬೈಲ್​ನಲ್ಲಿ ಸೆರೆ ಹಿಡಿಯಲು ವಿದ್ಯಾರ್ಥಿನಿಯರು ಮುಂದಾದಗ, ಆರೋಪಿಗಳು ಅವರನ್ನು ತಡೆದು ಬಲವಂತವಾಗಿ ಕಾರಿನೊಳಕ್ಕೆ ಎಳೆದುಕೊಂಡಿದ್ದಾರೆ. ಸಂತ್ರಸ್ತೆಯ ಸ್ನೇಹಿತೆ ಮೊಬೈಲ್ ಹೊರತೆಗೆದು ಆರೋಪಿಗಳ ವೀಡಿಯೋ ರೆಕಾರ್ಡ್ ಮಾಡಲು ಶುರು ಮಾಡುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನುವುದು ದೂರಿನಲ್ಲಿ ಇದೆ.

ಎಣ್ಣೆ ಏಟಲ್ಲಿದ್ದ ಕಾನೂನು ಸ್ಟೂಡೆಂಟ್ಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿಗಳಾದ ಅಭಿನವ್ ಮತ್ತು ಅಭಿಮನ್ಯು ಯುವಕರನ್ನು ಬಂಧಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ನಮನ್​​ ಎನ್ನುವನು ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂವರು ಬಿಹಾರದ ಮೂಲದವರಾಗಿದ್ದು, ಕೃತ್ಯದ ಸಮಯದಲ್ಲಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ.

​ಘಟನೆಯ ನಂತರ ಸಂತ್ರಸ್ತ ವಿದ್ಯಾರ್ಥಿನಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೌರೀಸ್ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಘಟನೆ ನಡೆದ ಸ್ಥಳವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು

ಘಟನೆ ನಡೆದ ನಂತರ ಮೂರು ಪೊಲೀಸ್​ ಠಾಣೆಗಳಿಗೆ ಅಡ್ಡಾಡಿದ್ದೇನೆ. ಯಾರು ಸಹ ಸರಿಯಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ. ನಡುರಾತ್ರಿ ಹೊರ ನಿಂತಿದ್ದರೂ ಸಹ ಎಫ್​ಐಆರ್​ ದಾಖಲಿಸಿಕೊಂಡಿಲ್ಲ ಎಂದು ಹೇಳಿದ್ದರು. ಆಬಳಿಕ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ಪೊಲೀಸರ ಕಾರ್ಯದ ವಿರುದ್ಧ ಜನರು ಕಿಡಿಕಾರಿದ್ದರು. ನಂತರ ಎಚ್ಚೆತ್ತ ಮುಖರ್ಜಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು, (ಏಜೆನ್ಸೀಸ್).