Cockroach Janta Party As Dharmendra Pradhan QuitsCockroach Janta Party As Dharmendra Pradhan Quits 
ದೇಶ

'ಹೋರಾಟದಲ್ಲಿ ನಾವು ಸಾಧಿಸಿದ್ದೇವೆ, ಜಿರಳೆಗಳೊಂದಿಗೆ ಆಟ ಬೇಡ'; ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಬಳಿಕ ಅಭಿಜಿತ್​ ದೀಪ್ಕೆ ಹೇಳಿದ್ದಿಷ್ಟು..Cockroach Janta Party

ಪ್ರಮುಖ ಮುಖ್ಯಾಂಶಗಳು

  • ಕೊನೆಗೂ ರಾಜೀನಾಮೆ ನೀಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​.
  • ಜಿರಳೆಗಳು ಗೆದ್ದಿವೆ ನಮ್ಮ ಬಳಿ ನಿಮ್ಮ ಆಟ ನಡೆಯೋಲ್ಲ ಎಂದ ಸಿಜೆಪಿಯ ಮುಖ್ಯಸ್ಥ ಅಭಿಜಿತ್​.
  • ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹ.
ನವದೆಹಲಿ: ನೀಟ್​ ಪ್ರಶ್ನೆ ಪತ್ರಿಕೆ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಬೇಕು ಎಂದು ಕಾಕ್ರೋಚ್​ ಜನತಾ ಪಾರ್ಟಿ(Cockroach Janta Party) ಹಾಗೂ ಹಲವಾರು ವಿದ್ಯಾರ್ಥಿಗಳು ನಡೆಸುತ್ತಿದ್ದ ಹಲವು ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಿದ್ದು, ಈ ಬಗ್ಗೆ ಸಿಜೆಪಿಯ ಮುಖ್ಯಸ್ಥ  ಅಭಿಜಿತ್​ ದೀಪ್ಕೆ  ಮಾತನಾಡಿದ್ದಾರೆ.  ಜಿರಳೆಗಳು ಬಂದ್ರೆ ಹಾಗೆ ವಾಪಸ್ ಹೋಗೋದಿಲ್ಲ. ನಮ್ಮ ಜೊತೆ ನಿಮ್ಮ ಆಟ ಬೇಡ ಎಂದು ಹೇಳಿದ್ದಾರೆ. 

 ಅಭಿಜಿತ್​ ದೀಪ್ಕೆ ಹೇಳಿದ್ದೇನು?

'ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ನಾವು ಸಾಧಿಸಿದ್ದೇವೆ. ನಾವು ಸಾಧಿಸಿದ್ದೇವೆ. ಪ್ರಜಾಪ್ರಭುತ್ವ ಗೆದ್ದಿದೆ. ಜಿರಳೆಗಳು ಗೆದ್ದಿವೆ. ಈಗ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು. ಪರಿಹಾರ ಕೊಡಬೇಕಾ ಬೇಡ್ವಾ?.. ಎರಡನೆಯದು ಎರಡನೇ ತಾರೀಕು ಪೊಲೀಸರ ದೌರ್ಜನ್ಯ ವಿರುದ್ಧ ಕ್ರಮ ಆಗಬೇಕಿದೆ. ವಿದ್ಯಾರ್ಥಿಗಳ ಪೊಲೀಸರು ಲಾಠಿ ಬೀಸಿದ್ದೀರಿ ಅಲ್ವಾ?. ನಮ್ಮ ಜೊತೆ ನಿಮ್ಮ ಆಟ ಬೇಡ. ಜಿರಳಗಳಿಗೆ ಮಂತ್ರಿಯೇ ರಾಜೀನಾಮೆ ಕೊಡ್ತಾರೆ ಅಂದ್ರೆ ನೀವೆಲ್ಲ ಯಾವ ಲೆಕ್ಕ?. ವಿದ್ಯಾರ್ಥಿಗಳ ಮೇಲೆ ಆಗಿರುವ ಎಲ್ಲ ಕೇಸ್ ವಾಪಸ್ ಪಡೆಯಬೇಕು' ಎಂದು ಪ್ರತಿಭಟನಾ ಸ್ಥಳದಿಂದಲೇ ಅಭಿಜಿತ್​ ದೀಪ್ಕೆ ಮಾತನಾಡಿದ್ದಾರೆ. 

ಏನಿದು ಘಟನೆ?

ನೀಟ್​ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಂಟಾದ ಲೋಪದೋಷಗಳ ಹೊಣೆ ಹೊತ್ತು ಕೇಂದ್ರಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಕಾಕ್ರೋಚ್​ ಜನತಾ ಪಾರ್ಟಿ ಕಳೆದ  ಜೂನ್​ 6ರಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ  ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿತ್ತು. 
ಜುಲೈ 20ರಂದು ಸೋಮಾವಾರ ಸಂಸತ್ ಚಲೋ ಹಮ್ಮಿಕೊಂಡಿತ್ತು ಇದರಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗಿಯಾಗಿದ್ದರು. ಈ ವೇಳೆ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ದಾಳಿ, ಹಲ್ಲೆ ವಿರುದ್ಧ  ಬಾಲಿವುಡ್​ ನಟರು, ಗಾಯಕರು, ಸಾಹಿತಿಗಳು ಕಿಡಿಕಾರಿದರು ಅಲ್ಲದೆ, ವಿದ್ಯಾರ್ಥಿಗಳಿಗೆ ಬೆಂಬಲ ಕೊಟ್ಟರು. ಇನ್ನು ಇಂಡಿಯಾ ಒಕ್ಕೂಟ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿತ್ತು. 
ಈ ಎಲ್ಲ ವಿದ್ಯಮಾನದ ನಡುವೆ, ಪ್ರಧಾನಿ ಮೋದಿ ಅವರು ಎರೆಡೆರಡು ಬಾರಿ ಮಧ್ಯರಾತ್ರಿ ವಿಡಿಯೋ ಸಂದೇಶ ರವಾನಿಸಿದ್ದರು. ಸರ್ಕಾರ ವಿದ್ಯಾರ್ಥಿಗಳ ಪರ ಇದೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಇಷ್ಟಾಗಿಯೂ ನಿಮ್ಮ ಭರವಸೆ ಬೇಡ, ಧರ್ಮೇಂದ್ರ ಪ್ರಧಾನ್​ರ ರಾಜೀನಾಮೆ ಬೇಕು ಎಂದು ಸಿಜೆಪಿ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿತ್ತು,. ಈ ಒತ್ತಡದ ಮಧ್ಯೆ ಕೊನೆಗೂ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಧರ್ಮೇಂದ್ರ ಪ್ರಧಾನ್​ರ ಟ್ವೀಟ್​ನಲ್ಲಿದ್ದದ್ದು ಏನು?

ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಸೇವೆ ಸಿಕ್ಕಿದ್ದಕ್ಕೆ ಕೃತಜ್ಞತೆ ಇದೆ. 2026ಮೇ 3ರಂದು ನೀಟ್​ ಪರೀಕ್ಷೆ ನಡೆಯಬೇಕಿತ್ತು. ಅಕ್ರಮ ನಡೆದಿದೆ ಎಂದು ಸರ್ಕಾರ ತಕ್ಷಣ ಸಿಬಿಐಗೆ ಕೇಸ್​​ ಕೊಟ್ಟು ಪರೀಕ್ಷೆ ರದ್ದುಪಡಿಸಿತು. ಅಲ್ಲದೆ ತಕ್ಷಣ ಮರುಪರೀಕ್ಷೆಗೆ ದಿನಾಂಕ ಘೋಷಣೆ ಮಾಡಿತು. ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಹೊಣೆಯನ್ನು ನಾನು ಹೊತ್ತಿದ್ದೆ. ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದು ಇಷ್ಟವಿರಲಿಲ್ಲ. ಕಳೆದ ಹತ್ತು ದಿನಗಳಿಂದ ನಡೆದ ಬೆಳವಣಿಗೆ ನನಗೆ ದುಃಖವನ್ನುಂಟು ಮಾಡಿದೆ.  ವಿದ್ಯಾರ್ಥಿಗಳ ಜೀವನ ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕುವುದು ನನಗಿಷ್ಟವಿಲ್ಲ. ಇದೇ ವಿಚಾರವನ್ನು ನಾನು ಪ್ರಧಾನಿ ಮೋದಿಯವರಿಗೂ ತಿಳಿಸಿದ್ದೇನೆ. ನಿರಂತರ ಸಹಕಾರಕ್ಕಾಗಿ ಧನ್ಯವಾದ. ಸಂಪುಟದ ಸಹೋದ್ಯೀಗಿಗಳು ಸೇರಿ ಎಲ್ಲರಿಗೂ ನನ್ನ ಧನ್ಯವಾದ. ರಾಷ್ಟ್ರ ಸೇವೆ ನ್ನ ಆದ್ಯತೆ ಎಂದು ಸುದೀರ್ಘವಾಗಿ ಬರೆದುಕೊಂಡು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್)