- ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿದ್ದಾಗ ದೊಡ್ಡವರೇ ಗಾಬರಿಯಾಗುವುದು ಸಹಜ
- ಲಿಫ್ಟ್ನಲ್ಲಿ ಸಿಲುಕಿಕೊಳ್ಳುವ ಹಂತದಲ್ಲಿದ್ದ ಇಬ್ಬರು ಮಕ್ಕಳನ್ನು ಹತ್ತು ವರ್ಷದ ಬಾಲಕಿಯೊಬ್ಬಳು ರಕ್ಷಿಸಿದ್ದಾಳೆ
- ತನ್ನ ಅದ್ಭುತ ಸಮಯ ಪ್ರಜ್ಞೆಯಿಂದ ಮಕ್ಕಳನ್ನು ರಕ್ಷಿಸಿದ್ದು, ಇದೀಗ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ
ನವದೆಹಲಿ: ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿದ್ದಾಗ ದೊಡ್ಡವರೇ ಗಾಬರಿಯಾಗುವುದು ಸಹಜ. ಆದರೆ, ಲಿಫ್ಟ್ನಲ್ಲಿ ಸಿಲುಕಿಕೊಳ್ಳುವ ಹಂತದಲ್ಲಿದ್ದ ಇಬ್ಬರು ಮಕ್ಕಳನ್ನು ಹತ್ತು ವರ್ಷದ ಬಾಲಕಿಯೊಬ್ಬಳು (Brave Children) ತನ್ನ ಅದ್ಭುತ ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದು, ಇದೀಗ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಘಟನೆ ಏನು?
ವೈರಲ್ ಆದ ವಿಡಿಯೋದಲ್ಲಿ, ಮೂವರು ಮಕ್ಕಳು ಲಿಫ್ಟ್ ಹತ್ತಿರ ನಿಂತಿದ್ದರು. ಈ ವೇಳೆ ಲಿಫ್ಟ್ ಇದ್ದಕ್ಕಿಂದ್ದತೆಯೇ ನಿಂತುಹೋಯಿತು. ಅದರ ಬಾಗಿಲು ಸಂಪೂರ್ಣವಾಗಿ ತೆರೆಯದೇ ಅರ್ಧಕ್ಕೆ ಸಿಲುಕಿಕೊಂಡಿದ್ದು, ಗಾಬರಿಯಿಂದ ಮಕ್ಕಳು ಹೊರ ಬರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.
ಈ ವೇಳೆ ಹಠಾತ್ನೇ ಲಿಫ್ಟ್ ಚಲಿಸಲು ಪ್ರಾರಂಭಿಸಿತು. ಆಗ ಮಕ್ಕಳು ಗಾಬರಿಯಿಂದ ಹೊರ ನುಗ್ಗಲು ಪ್ರಯತ್ನಿಸುತ್ತಿರುವುದನ್ನು ಕಂಡ ಬಾಲಕಿಯು ತಕ್ಷಣವೇ ಎಚ್ಚೆತ್ತುಗೊಡಿದ್ದು, ತನ್ನ ದೇಹವನ್ನೇ ತಡೆ ಗೋಡೆಯಾಗಿ ನಿಲ್ಲಿಸಿದಳು. ತನ್ನ ಕೈಗಳು ಮತ್ತು ಬೆನ್ನಿನ ಬಲದಿಂದ ಬಾಗಿಲನ್ನು ಒತ್ತಿ ಹಿಡಿದು, ಆ ಇಬ್ಬರು ಮಕ್ಕಳು ಸುರಕ್ಷಿತವಾಗಿ ಲಿಫ್ಟ್‌ನಿಂದ ಹೊರಬರುವಂತೆ ನೋಡಿಕೊಂಡಳು.
ಶೀಘ್ರದಲ್ಲೇ, ಅಲ್ಲಿನ ನಿವಾಸಿಗಳು ಲಿಫ್ಟ್ ಬಳಿ ಓಡಿಬಂದು ತಮ್ಮ ಕೈ ಮತ್ತು ಕಾಲುಗಳನ್ನು ಬಳಸಿ ಬಾಗಿಲನ್ನು ತೆಗೆಯಲು ಸಹಾಯ ಮಾಡಿದರು. ಈ ವೇಳೆ ಬಾಲಕಿಯು ಇಬ್ಬರೂ ಮಕ್ಕಳನ್ನು ಹೊರಕ್ಕೆ ಕರೆದುಕೊಳ್ಳುವ ಮೂಲಕ ಮಕ್ಕಳನ್ನು ರಕ್ಷಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಬಾಲಕಿಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೋಡಿ ಬೆರಗಾಗಿದ್ದು, ಆಕೆಯನ್ನು ರಿಯಲ್ ಲೈಫ್ ಸೂಪರ್ ಹೀರೋ ಎಂದು ಬಣ್ಣಿಸಿದ್ದಾರೆ.
ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ತಾರ್ಕಿಕ ಆಲೋಚನೆ ಮತ್ತು ಧೈರ್ಯ ತೋರುವುದು ಸುಲಭವಲ್ಲ. ಆಕೆ ಕೇವಲ ಬಾಗಿಲು ಮುಚ್ಚಲಿಲ್ಲ, ಇಬ್ಬರ ಜೀವ ಉಳಿಸಿದಳು ಎಂದು ಮತ್ತೊಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).