ಸರ್ಕಾರಿ ಶಾಲೆಗೆ ಬೇಟಿ ನೀಡಿದ ಅಭಿಜಿತ್ ದೀಪ್ಕೆ
- ಸರ್ಕಾರಿ ಶಾಲೆಯಲ್ಲಿ ಮದ್ಯದ ಬಾಟಲಿ ಹಾಗೂ ಬಾಡಿಗೆ ವಿದ್ಯಾರ್ಥಿಗಳ ವಿಚಾರ
- ಸರ್ಕಾರಿ ಶಾಲೆಗೆ ಬೇಟಿ ನೀಡಿದ ಅಭಿಜಿತ್ ದೀಪ್ಕೆ
- ಸಿಜೆಪಿ ಸ್ಥಾಪಕನ ಅರೋಪಕ್ಕೆ ಶಾಲಾ ಆಡಳಿತ ಹೇಳಿದ್ದೇನು?
ಪುಣೆ: ಜಂತರ್-ಮಂತರ್ನಲ್ಲಿ ನೀಟ್ ವಿದ್ಯಾರ್ಥಿಗಳಿಗಾಗಿ ಹೋರಾಟ ಮಾಡಿ ಯಶಸ್ಸನ್ನು ಕಂಡ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ (Abhijit Dipke Visit Government School) ಈಗ ಮಹಾರಾಷ್ಟ್ರದ ಸರ್ಕಾರಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಸರ್ಕಾರಿ ಶಾಲೆಗಳನ್ನು ಸರಿಪಡಿಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಅಭಿಯಾನದ ಹಿನ್ನಲೆ, ಗುರುವಾರ (ಆ.20) ಲಾತೂರ್ ಜಿಲ್ಲೆಯ ಔಸಾನಲ್ಲಿರುವ ಸರ್ಕಾರಿ ಶಾಲೆಗೆ ಬೇಟಿ ನೀಡಿರುವ ದೀಪ್ಕೆ ಅಲ್ಲಿನ ಅವ್ಯವಸ್ಥೆಯನ್ನು ಬಯಲು ಮಾಡುತ್ತಾ, ರಾಜ್ಯ ಶಿಕ್ಷಣ ಸಚಿವರಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಶಾಲೆಯಲ್ಲ, ಬಾರ್; ಬಾಡಿಗೆ ಮಕ್ಕಳು!
ಔಸಾನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೇಟಿ ನೀಡಿದ ದೀಪ್ಕೆ, ಆ ಶಾಲೆಯಲ್ಲಿನ ಅವ್ಯವಸ್ಥೆ ಹಾಗೂ ಅವ್ಯವಹಾರದ ಬಗ್ಗೆ ವಿಡಿಯೋ ಮಾಡಿದ್ದಾರೆ. ಅಭಿಜಿತ್ ತಿಳಿಸಿರುವಂತೆ, ಆ ಶಾಲೆಯ ಆವರಣದ ತುಂಬೆಲ್ಲಾ ಮದ್ಯದ ಬಾಟಲಿಗಳು ಬಿದ್ದಿದ್ದರೆ, ಶಾಲೆಗೆ ನೈಜ ಮಕ್ಕಳ ಬದಲಿಗೆ ಹೊರಗಿನಿಂದ ಬಾಡಿಗೆಗೆ ಮಕ್ಕಳನ್ನು ಕರೆದುಕೊಂಡು ಬರಲಾಗುತ್ತದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಈ ಶಾಲೆಯಲ್ಲಿ ಇಷ್ಟೊಂದು ಅನ್ಯಾಯ ನಡೆಯುತ್ತಿದರೂ ಜನ ಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರಾಜ್ಯ ಶಿಕ್ಷಣ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಅಭಿಜಿತ್ ದೀಪ್ಕೆ ಆಗ್ರಹಿಸಿದ್ದಾರೆ.
ಮಕ್ಕಳೊಂದಿಗೆ ಊಟ ಸವಿದ ಅಭಿಜಿತ್!
ಶಾಲೆಗೆ ಬಂದಿದ್ದ ಅಭಿಜಿತ್ ದೀಪ್ಕೆ ಮಕ್ಕಳೊಂದಿಗೆ ಮಧ್ಯಹ್ನದ ಬಿಸಿಯೂಟವನ್ನು ಸವಿದಿದ್ದಾರೆ. ಅದರ ಜೊತೆಗೆ ಈ ಶಾಲೆಯ ಶೌಚಾಲಯಗಳು ತುಂಬಾ ಕೊಳಕಾಗಿವೆ, ಇಲ್ಲಿ ನೈಮರ್ಲ್ಯದ ಕೊರತೆ ಕಂಡು ಬರುತ್ತಿದ್ದು, ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಶಾಲೆಯಿಂದ ನಕಾರ!
ಆದರೆ ಈ ವಿಡಿಯೋ ಶಾಲಾ ಆಡಳಿತ ಮಂಡಳಿ ವಿರೋಧ ವ್ಯಕ್ತ ಪಡಿಸಿದೆ. ಶಾಲಾ ಆವರಣದಲ್ಲಿ ಮರಾಠಿ ಹಾಗೂ ಉರ್ದು ಎರಡೂ ಮಾಧ್ಯಮದ ವಿದ್ಯಾರ್ಥಿಗಳಿದ್ದು, ದೀಪ್ಕೆ ಶಾಲೆಗೆ ಬಂದಾಗ ಎರಡು ಮಾಧ್ಯಮದ ವಿದ್ಯಾರ್ಥಿಗಳು ಜೊತೆಗಿದ್ದದನ್ನು ನೋಡಿ ತಪ್ಪು ತಿಳಿದಿದ್ದಾರೆ. ಹಾಗೂ ಇವರು ಬಂದರೆಂಬ ಕಾರಣಕ್ಕೆ ಅಲ್ಲ, ಸರ್ಕಾರ ಪ್ರತಿ ವರ್ಷ ನೂತನ ತಟ್ಟೆಗಳನ್ನೇ ಒದಗಿಸುತ್ತದೆ ಎಂದಿದ್ದಾರೆ.
ಇನ್ನೂ ಶೌಚಾಲಯದ ಬಗ್ಗೆ ಮಾತನಾಡುತ್ತಾ. ಶೌಚಾಲಯವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲಾಗುತ್ತದೆ. ಇವರು ತೊಳೆಯದ ದಿನ ಬಂದು ವಿಡಿಯೋ ಮಾಡಿದ್ದಾರೆಂದು ಶಾಲಾ ಆಡಳಿತ ಸ್ಪಷ್ಟನೆ ನೀಡಿದೆ, (ಏಜನ್ಸೀಸ್).