- ಕೇರಳದಲ್ಲಿ ತೆಂಗಿನಕಾಯಿ ಕೀಳುವವರನ್ನು ಬುಕ್ ಮಾಡಿಕೊಳ್ಳಬಹುದು ಎಂದ ಆನಂದ್ ಮಹೀಂದ್ರಾ
- ಹಲೋ ನರಿಯಾಲ್ ಎಂಬ ಸ್ಟಾರ್ಟ್ಅಪ್ನಿಂದ ನೂತನ ಪ್ರಯೋಗ
- ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೀಕರಣವಾಗುತ್ತಿರುವುದನ್ನು ಕಂಡು ಅಚ್ಚರಿ ಮತ್ತು ಸಂತೋಷ ವ್ಯಕ್ತಪಡಿಸಿದ ಉದ್ಯಮಿ
Book Coconut Harvester: ಹೂ, ಹಣ್ಣು ಹಾಗೂ ತರಕಾರಿ ಬೇಕೆಂದರೆ ಆನ್ಲೈನ್ನಲ್ಲಿ ಬುಕ್ ಮಾಡುವುದು ಆಧುನಿಕ ಜಗತ್ತಿನಲ್ಲಿ ದಿನನಿತ್ಯದ ಕೆಲಸವಾಗಿದೆ. ಇದರ ಜೊತೆಗೆ ಎಲ್ಲಾದರೂ ಟ್ರಾವೆಲ್ ಮಾಡಲು ಉಬರ್, ರ್ಯಪಿಡೋ ಮಾಡಿದ್ರೆ ಒಂದೆರಡು ನಿಮಿಷದಲ್ಲಿ ಮನೆ ಮುಂದೆ ಹಾಜರಾಗಿ ಬಿಡುತ್ತಾರೆ. ಇದು ಇಷ್ಟಕ್ಕೆ ನಿಂತಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ವಸ್ತು ಪ್ಯಾಕ್ ಮಾಡಿಕೊಡುವವರು. ಕ್ಲೀನ್ ಮಾಡಿಕೊಡುವವರು ಎಲ್ಲವೂ ಈಗ ಆನ್ಲೈನ್ನಲ್ಲಿಯೇ ಆಗಿಬಿಡುತ್ತದೆ. ಇಂತಹ ವಿಚಾರಗಳು ತಂತ್ರಜ್ಞಾನವೂ ತೆಂಗಿನಕಾಯಿ ಕೀಳುವುದರ ಮೇಲು ಪ್ರಯೋಗವಾಗಿರುವುದನ್ನು ಉದ್ಯಮಿ ಆನಂದ್ ಮಹೀಂದ್ರ ಅವರು ಹಂಚಿಕೊಂಡಿದ್ದಾರೆ.
ಕೇರಳದ ಹಲೋ ನರಿಯಾಲ್ (Hello Nariyal) ಎಂಬ ಸ್ಟಾರ್ಟ್ ಅಪ್ ಕಂಪನಿಯ ಆನ್ ಡಿಮ್ಯಾಂಡ್ ಸರ್ವೀಸ್ ಅವರನ್ನು ಮಂತ್ರಮುಗ್ಧರನ್ನಾಗಿ ಮಾಡಿಸಿದೆ. ಸೈಕಲ್ನಲ್ಲಿ ತೆಂಗಿನಕಾಯಿ ಕೀಳಲು ಬರುವ ವ್ಯಕ್ತಿಯ ವಿಡಿಯೋವೊಂದನ್ನು ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಉಬರ್ನಲ್ಲಿ ಕ್ಯಾಬ್ ಬುಕ್ ಮಾಡುವಂತೆ, ಕೇರಳದಲ್ಲಿ ನೀವು ತೆಂಗಿನ ಕಾಯಿ ಕೀಳುವವರನ್ನು ಬುಕ್ ಮಾಡಿಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾರ ಪೋಸ್ಟ್ನಲ್ಲಿ ಏನಿದೆ?
ಕೇರಳದಲ್ಲಿ ಹೆಲ್ಲೋ ನಾರಿಯಲ್ ಎಂಬ ಸಂಸ್ಥೆಯು ಸ್ಟಾರ್ಟ್ಅಪ್ ಆರಂಭಿಸಿದೆ. ಇಲ್ಲಿ ನೀವು ತೆಂಗಿನಕಾಯಿ ಕೀಳುವವರನ್ನು ಬುಕ್ ಮಾಡಿಕೊಳ್ಳಬಹುದು. ಯೂನಿಫಾರಂ ಧರಿಸಿ ಬರುವ ಇವರು. ಅಪ್ರತಿಮ ವೃತ್ತಿಪರ ಕೆಲಸಗಾರರು. ತರಬೇತಿ ಪಡೆದುಕೊಂಡಿರುತ್ತಾರೆ ಎಂದು ಉತ್ಸುಕರಾಗಿ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಹೆಚ್ಚಾಗಿ ಐಟಿ ರಫ್ತು ಅಥವಾ ಜಾಗತಿಕ ಕೇಂದ್ರಗಳ ಬಗ್ಗೆಯಷ್ಟೇ ಮಾತನಾಡಲಾಗುತ್ತದೆ. ಆದರೆ ಇಂತಹ ಲೋಕಲ್ ಸ್ಥಳದಲ್ಲಿ ಆಗುತ್ತಿರುವ ಬದಲಾವಣೆ ರೋಚಕವಾಗಿದೆ. ಛತ್ತೀಸ್‌ಗಢದಿಂದ ಬಂದ ಯುವಕ ಮರ ಹತ್ತಿ ಸ್ಥಳೀಯ ಸೇವೆಗಳನ್ನು ನೀಡುತ್ತಿರುವುದು ಎರಡು ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಹೈಪರ್-ಲೋಕಲ್ ಸೇವೆಗಳನ್ನು ಸಂಘಟಿತ ಆರ್ಥಿಕತೆಗೆ ತರುತ್ತಿವೆ. ಒಬ್ಬ ಕೌಶಲ್ಯಭರಿತ ಕಾರ್ಮಿಕನಿಗೆ ಈಗ ಭೌಗೋಳಿಕ ಮಿತಿಗಳಿಲ್ಲ.
ಆರ್ಥಿಕರಾಗಿ ಸಬಲರಾಗಲು ಶ್ರಮ
ನಮ್ಮ ಉಕ್ಕಿನ ಕಾರ್ಖಾನೆ ವ್ಯವಹಾರದಲ್ಲಿ ಹುದ್ದೆ ಆರಂಭಿಸಿದಾಗ. ಅಲ್ಲಿಗೆ ಫರ್ನೇಸ್ ಮತ್ತು ಫೌಂಡ್ರಿ ಶಾಪ್ಗಲ್ಲಿ ಕೆಲಸ ಮಾಡಲು ಬರುತ್ತಿದ್ದವರು, ನಮ್ಮ ಬಿಹಾರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಂದ ಬಂದವರಾಗಿದ್ದರು.
ಬಿಹಾರ ಅಥವಾ ಮಧ್ಯಪ್ರದೇಶದ ಕಾರ್ಮಿಕರು ಹಿಂದೆ ಕೇವಲ ಭಾರಿ ಕೈಗಾರಿಕೆಗಳಿಗೆ ಸೀಮಿತವಾಗಿದ್ದರು.
ಆದರೆ ಇಂದು, ಛತ್ತೀಸ್‌ಗಢದ ಯುವಕರು ತಮ್ಮ ಸಾಂಪ್ರದಾಯಿಕ ಕೌಶಲ್ಯಗಳನ್ನು (ಉದಾಹರಣೆಗೆ ಮರ ಹತ್ತುವುದು ಅಥವಾ ಕೃಷಿ ಸಂಬಂಧಿತ ಕೆಲಸ) ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇದು ಕೇವಲ ಉದ್ಯೋಗವಲ್ಲ ಡಿಜಿಟಲ್ ಸೇತುವೆ. ಆರ್ಥಿಕವಾಗಿ ಸಬಲರಾಗಲು ಅವಕಾಶ ಹುಡುಕುತ್ತ ದೂರದ ಊರುಗಳಿಗೆ ಪ್ರಯಾಣಿಸುತ್ತಾರೆ. ಸ್ಥಳಾಂತರಗೊಳ್ಳುವ, ಹೊಂದಿಕೊಳ್ಳುವ ಮತ್ತು ಏರುತ್ತಿರುವ ಜನರು ಪ್ರಬಲ ಆರ್ಥಿಕ ಶಕ್ತಿಯಾಗಿದ್ದಾರೆ. ಏಕೀಕರಣಕ್ಕೂ ಒಂದು ಶಕ್ತಿ ಎಂದು ವಿಡಿಯೋಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).