ಢಮರುಗ ನುಡಿಸುತ್ತಾ ಶಿವಭಕ್ತನಾದ ತೇಜ್ ಪ್ರತಾಪ್ ಯಾದವ್
- ರಾಜಕೀಯ ಬಿಟ್ಟು ಖಾವಿ ಧರಿಸಿದ ಲಾಲು ಪುತ್ರ
- ಢಮರುಗ ನುಡಿಸುತ್ತಾ ಶಿವಭಕ್ತನಾದ ತೇಜ್ ಪ್ರತಾಪ್ ಯಾದವ್
- ತೇಜು ಬಯ್ಯಾ ವಿಡಿಯೋ ವೈರಲ್
ಬಿಹಾರ: ಜಬ್ ತಕ್ ಸಮೋಸೆಮೆ ಆಲು ರಹೇಗಾ ತಬ್ ತಕ್ ಬಿಹಾರ್ ಮೇ ಲಾಲು ರಹೇಗಾ (ಎಲ್ಲಿವರೆಗೆ ಸಮೋಸಾದಲ್ಲಿ ಆಲುಗಡ್ಡೆ ಇರುತ್ತದೋ ಅಲ್ಲಿವರೆಗೆ ಬಿಹಾರದಲ್ಲಿ ಲಾಲು ಯಾದವ್ ಇರುತ್ತಾನೆ) ಎಂಬ ಮಾತು ಭಾರತೀಯ ರಾಜಕಾರಣದಲ್ಲಿ ಫೇಮಸ್ ಡೈಲಾಗ್.
ತನ್ನ ವ್ಯಂಗ್ಯ ಭರಿತ ಮಾತಿನಿಂದಲೇ ಬಿಹಾರದ ಮುಖ್ಯಮಂತ್ರಿ ಸ್ಥಾನವನ್ನು ಸಹ ಅಲಂಕರಿಸಿದ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಈಗ ಶಿವ ಭಕ್ತನಾಗಿ ಬದಲಾಗಿರುವ ಸುದ್ದಿ ಸಖತ್ ವೈರಲ್ ಆಗುತ್ತಿದೆ.
2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಲಾಲೂ ಪುತ್ರ ತೇಜ್ ಪ್ರತಾಪ್ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುತ್ತಾ ರಾಜಕಾರಣದಿಂದ ದೂರವಾಗಿ ಕಟೆಂಟ್ ಕ್ರಿಯೆಟರ್ ಆಗಿ ಬದಲಾಗಿದ್ದರು.
ಇತ್ತೀಚೆಗೆ ಈ ತೇಜ್ ಪ್ರತಾಪ್ ಯಾದವ್ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಸೋಪಾದ ಮೇಲೆ ಕಾವಿ ಬಟ್ಟೆ ಧರಿಸಿ ಕೈಯಲ್ಲಿ ಢಮರು ನುಡಿಸುತ್ತಾ ತಾವು ಶಿವ ಭಕ್ತನಾಗಿ ಬದಲಾಗಿರುವ ಕುರಿತು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕುಟುಂಬದಿಂದ ಬಲು ದೂರ ತೇಜು ಬಯ್ಯಾ!
ಲಾಲು ಪ್ರಸಾದ್ ಯಾದವ್ ಅವರ ಮೊದಲ ಪುತ್ರನಾಗಿ ಜನಿಸಿದ ತೇಜ್ ಪ್ರತಾಪ್ ಯಾದವ್ ಅವರ ವೈಯಕ್ತಿಕ ಜೀವನ ಅಷ್ಟೊಂದು ಸರಿಯಿಲ್ಲ. ಕೇವಲ 12 th ಓದಿರುವ ತೇಜ್ ಪ್ರತಾಪ್ ಮುಂದಿನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು.
2018 ರಲ್ಲಿ ಬಿಹಾರದ ಮಾಜಿ ಸಿಎಂ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳಾದ ಐಶ್ವರ್ಯ ರೈ ಅವಳನ್ನು ಮದುವೆಯಾಗಿದ್ದ ತೇಜ್ ಪ್ರತಾಪ್, ವೈವಾಹಿಕ ಜೀವನದಲ್ಲಿ ಸಹ ವಿಫಲನಾಗಿ ಪತ್ನಿ ವಿಚ್ಛೇದನ ಕೋರಿದ್ದು, ಇದರ ಅರ್ಜಿ ನ್ಯಾಯಾಲಯದಲ್ಲಿದೆ. ತಮ್ಮ ಸಹೋದರ ತೇಜಸ್ವಿ ಯಾದವ್ ರೊಂದಿಗೆ ಹಲವಾರು ಬಾರಿ ಭಿನ್ನಾಭಿಪ್ರಾಯ ಹೊಂದಿದ್ದ ತೇಜ್ ಪ್ರತಾಪನನ್ನು ಲಾಲು ಯಾದವ್ 2025 ರಲ್ಲಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದಾರೆ.
ತೇಜ್ ಯಾದವ್ ರಾಜಕೀಯ ಜೀವನ
ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ ತೇಜ್ ಪ್ರತಾಪ್ನನ್ನು ತಂದೆ ಲಾಲು ಯಾದವ್ 2015 ರಲ್ಲಿ ಸಿಎಂ ನಿತೀಶ್ ಯಾದವ್ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿ ಹಾಗೂ ಪರಿಸರ ಮತ್ತು ಅರಣ್ಯ ಸಚಿವನಾಗಿ ಮಾಡಿದರು.
2015ರಲ್ಲಿ ಮಹುವಾ ಕ್ಷೇತ್ರದಿಂದ ಮತ್ತು 2020ರಲ್ಲಿ ಹಸನ್‌ಪುರ ಕ್ಷೇತ್ರದಿಂದ ಶಾಸಕರಾಗಿ ತೇಜ್ ಪ್ರತಾಪ್ ಆಯ್ಕೆಯಾಗಿದ್ದರು. ತಂದೆ ಅವರ ಪಕ್ಷದಿಂದ ಉಚ್ಚಾಟನೆಯಾದ ನಂತರ ತಮ್ಮದೇ ಆದ ಜನಶಕ್ತಿ ಜನತಾ ದಳ (JJD) ಎಂಬ ಪಕ್ಷವನ್ನು ಸ್ಥಾಪಿಸಿ 2025 ರಲ್ಲಿ ಚುನಾವಣೆ ಎದುರಿಸಿ ಪರಾಭವಗೊಂಡರು. ಸೋಲಿನ ನಂತರ LR Vlogs ಮತ್ತು TY Vlogs ಎಂಬ ವ್ಲಾಗಿಂಗ್ ಚಾನಲ್ ಆರಾಂಭಿಸಿರುವ ತೇಜ್ ಪ್ರತಾಪ್ ಇಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ,(ಏಜನ್ಸೀಸ್).