ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಸಹೋದರಿ ರೋಹಿಣಿ ಆಚಾರ್ಯ RJD leader Tejashwi Yadav and sister Rohini Acharya
ಪಾಟ್ನಾ: ಬಿಹಾರ ಫಲಿತಾಂಶದ ನಂತರ, ಲಾಲು ಪ್ರಸಾದ್ ಯಾದವ್ ಕುಟುಂಬದೊಳಗಿನ ಉದ್ವಿಗ್ನತೆ ಹೆಚ್ಚಾಗಿದೆ. ಲಾಲು ಪುತ್ರಿ ರೋಹಿಣಿ ಆಚಾರ್ಯ(Rohini Acharya) ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಿಡ್ನಿ ದಾನ ಮಾಡುವ ಸಮಯ ಬಂದಾಗ, ನಿನ್ನ ಮಗ ಓಡಿಹೋದ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ರೋಹಿಣಿ ಪತ್ರಕರ್ತರೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಸಂಭಾಷಣೆಯಲ್ಲಿ ತಮ್ಮ ಸಹೋದರ ತೇಜಸ್ವಿ ಯಾದವ್ ನಿರ್ಣಾಯಕ ಕ್ಷಣದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದ್ದರು ಎಂದು ಆರೋಪಿಸಿದರು. ಅಲ್ಲದೆ, ಕಿಡ್ನಿ ದಾನ ಮಾಡುವ ಸಮಯ ಬಂದಾಗ, ನಿನ್ನ ಮಗ ಓಡಿಹೋದ ಎಂದು ಹೇಳಿದ್ದಾರೆ.
ತೇಜಸ್ವಿ ಯಾದವ್ ಮತ್ತು ಸಾಮಾಜಿಕ ಬೂಟಾಟಿಕೆ
ತೇಜಸ್ವಿ ಯಾದವ್ರನ್ನು ತೀವ್ರವಾಗಿ ಟೀಕಿಸಿದ ರೋಹಿಣಿ, ಸ್ವಯಂ ಘೋಷಿತ ಸಾಮಾಜಿಕ ನಾಯಕರು ಮತ್ತು ಪತ್ರಕರ್ತರು ತಮ್ಮನ್ನು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡುವ ಮೂಲಕ ನೈತಿಕತೆಯನ್ನು ಟೀಕಿಸಿದ್ದಾರೆ. ಅಲ್ಲದೆ, ಒಂದು ಬಾಟಲಿ ರಕ್ತದಾನ ಮಾಡಲು ಸಾಧ್ಯವಾಗದವರು ಮೂತ್ರಪಿಂಡ ದಾನದ ಬಗ್ಗೆ ಪಾಠಗಳನ್ನು ನೀಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಮೂತ್ರಪಿಂಡ ದಾನವನ್ನು ಸಮರ್ಥಿಸುವುದು
ಮುಂದುವರೆದು ಮಾತನಾಡಿದ ರೋಹಿಣಿ, ಲಾಲು ಜಿ ಹೆಸರಿನಲ್ಲಿ ಏನಾದರೂ ಮಾಡಲು ಬಯಸುವವರು ಸುಳ್ಳು ಸಹಾನುಭೂತಿ ತೋರಿಸುವುದನ್ನು ನಿಲ್ಲಿಸಿರಿ. ಇದಕ್ಕಾಗಿ ಕಾಯುತ್ತಿರುವ ಆಸ್ಪತ್ರೆಗಳಲ್ಲಿರುವ ಲಕ್ಷಾಂತರ ಬಡವರಿಗೆ ಮೂತ್ರಪಿಂಡಗಳನ್ನು ದಾನ ಮಾಡಲು ಮುಂದೆ ಬರಬೇಕು. ತನ್ನ ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಿದ ಮಗಳನ್ನು ಟೀಕಿಸುವ ಬದಲು ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ಧೈರ್ಯ ಮಾಡಬೇಕು ಎಂದು ಹೇಳಿದ್ದಾರೆ.
ರೋಹಿಣಿಯವರ ಮೂತ್ರಪಿಂಡ ದಾನ
ರೋಹಿಣಿ ಈ ಹಿಂದೆ ತನ್ನ ತಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಇದರಿಂದಾಗಿ ರೋಹಿಣಿ ತನ್ನ ಮೂತ್ರಪಿಂಡ ದಾನ ಮಾಡಿದ ಮಗಳು ಎಂಬ ಮನ್ನಣೆಯನ್ನು ಗಳಿಸಿದ್ದರು. ರೋಹಿಣಿ ಹಿಂದೆ ತಮ್ಮ ಸಹೋದರ ತೇಜ್ ಪ್ರತಾಪ್ ಯಾದವ್ ಬೆಂಬಲಿಗರಾಗಿದ್ದರು.
ರಾಜಕೀಯ ಮತ್ತು ಕುಟುಂಬವನ್ನು ತೊರೆದ ರೋಹಿಣಿ
ನವೆಂಬರ್ 16ರಂದು, ರೋಹಿಣಿಯವರು ರಾಜಕೀಯದಿಂದ ಹಿಂದೆ ಸರಿಯುವುದಾಗಿ ಮತ್ತು ಕುಟುಂಬದಿಂದ ದೂರ ಉಳಿಯುದಾಗಿ ಘೋಷಿಸಿದರು. ಅಲ್ಲದೆ, ಈ ನಡೆ ಲಾಲು ಕುಟುಂಬದೊಳಗಿನ ಆಂತರಿಕ ಸಂಘರ್ಷಗಳನ್ನು ಮತ್ತಷ್ಟು ಬಹಿರಂಗಪಡಿಸಿತು,(ಏಜೆನ್ಸೀಸ್).