ನನ್ನ ಪತ್ನಿ ಈಗ ಗರ್ಭಿಣಿ ಎಂದ ಮೊನಾಲಿಸಾ ಪತಿ ಫರ್ಮಾನ್​ 
ದೇಶ

ಕುಂಭಮೇಳ ಸುಂದರಿ ಈಗ ಗರ್ಭವತಿ: ಮೊನಾಲಿಸಾ ತಾಯಿಯಾಗಲಿದ್ದಾಳೆ ಎಂದ ಪತಿ ಫರ್ಮಾನ್​ ಖಾನ್​! Monalisa Bhosle

ಪ್ರಮುಖ ಮುಖ್ಯಾಂಶಗಳು

  • ಕುಂಭಮೇಳದಲ್ಲಿ ಮಣಿಸರ ಮಾರುತ್ತಾ ಖ್ಯಾತಿಯಾಗಿದ್ದ ಮೊನಾಲಿಸಾ ಭೋಸ್ಲೆ
  • ಅಪ್ರಾಪ್ತ ವಯಸ್ಸಿಗೆ ಮದುವೆಯಾದಿದ್ದ ಪ್ರಕರಣ ದಾಖಲು
  • ನನ್ನ ಪತ್ನಿ ಈಗ ಗರ್ಭಿಣಿ ಎಂದ ಮೊನಾಲಿಸಾ ಪತಿ ಫರ್ಮಾನ್​
ಕೇರಳ: ಕುಂಭಮೇಳದಲ್ಲಿ ತನ್ನ ವಿಶಿಷ್ಟವಾದ ಕಣ್ಣುಗಳ ಮೂಲಕ ದೇಶದ ಜನರ ಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಇತ್ತೀಚೆಗೆ, ಫರ್ಮಾನ್​ ಖಾನ್​ ಎಂಬಾತನನ್ನು ಮದುವೆಯಾಗುವ ಮೂಲಕ ಮತ್ತೆ ಮುನ್ನಲೆಗೆ ಬಂದಿದ್ದಳು. 
ಕೆಲ ದಿನಗಳ ಹಿಂದೆ ಈ ಮೊನಾಲಿಸಾ, ಇನ್ನೂ ಅಪ್ರಾಪ್ತೆ ಎಂಬ ಸುದ್ದಿ ಓಡಾಡಿ ಪತಿ ಫರ್ಮಾನ್​ ಮೇಲೆ ದೂರು ದಾಖಲಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಮೊನಾಲಿಸಾ ಗರ್ಭಿಣಿಯಾಗಿದ್ದಾಳೆಂದು ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ನನ್ನ ಪತ್ನಿ ಈಗ ಗರ್ಭವತಿ

ಮೊನಾಲಿಸಾ ಮದುವೆ ಇದೊಂದು ಲವ್​ ಜಿಹಾದ್​ ಪ್ರಕರಣ ಎಂದು ಹಲವಾರು ಜನ ಹೇಳಿದ್ದರು. ಕೆಲ ದಿನಗಳ ಹಿಂದೆ ಮೊನಾಲಿಸಾಗೆ ಇನ್ನೂ 18 ವರ್ಷವಾಗಿಲ್ಲವೆಂದು ಅತಿ ಫರ್ಮಾನ್​ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಈ ಪ್ರಕರಣದ ಸಂಬಂಧ ಮೊನಾಲಿಸಾಳನ್ನು ಪೊಲೀಸ್​ ಠಾಣೆಗೆ ಬರ ಹೇಳಿದಾಗ, ಆಕೆಯ ಪತಿ, ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಣೆ, ಅವಳು ಪೊಲೀಸ್​ ಠಾಣೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆಂದು ಮಾಹಿತಿ ಲಭ್ಯವಾಗಿದೆ. 

ಮೊನಾಲಿಸಾ ಮೇಜರ್​ ಅಲ್ಲ; ಮೈನರ್​

ಈ ವೈರಲ್​ ಹುಡುಗಿ ಮೊನಾಲಿಸಾ ಪಾರ್ಡಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದು, NCST ತನಿಖೆಯಲ್ಲಿ ಈಕೆ ಅಪ್ರಾಪ್ತಳೆಂದು ತಿಳಿದು ಬಂದಿದೆ. 
ಮದುವೆ ಸಮಯದಲ್ಲಿ ಮೊನಾಲಿಸಾ ಸುಳ್ಳು ಜನನ ಪ್ರಮಾಣಪತ್ರವನ್ನು ನೀಡಿದ್ದಾಳೆ. ಆಕೆ ಜನಿಸಿದ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯು ಮೊನಾಲಿಸಾ ಡಿಸೆಂಬರ್ 30, 2009 ರಂದು ಸಂಜೆ 5:50 ಕ್ಕೆ ಜನಿಸಿದ್ದಾಳೆ ಎಂದು ತಿಳಿಸಿದೆ. 
ಆದ್ದರಿಂದ ಮೊನಾಲಿಸಾ ಮದುವೆಯಾದಾಗ ಆಕೆಯ ವಯಸ್ಸು ಕೇವಲ 16 ವರ್ಷ, 2 ತಿಂಗಳು ಮತ್ತು 12 ದಿನಗಳಾಗಿದ್ದು, ಈಗ ಈ ಮದುವೆ ಕಾನೂನು ಬದ್ಧವಾಗುತ್ತದೆಯೇ? ಇಲ್ಲವೇ ಎಂದು ತನಿಖೆ ನಂತರ ತಿಳಿದು ಬರಬೇಕಿದೆ. ಹೀಗಾಗಿ ಆಕೆಯ ಪತಿ ಫರ್ಮಾನ್​ ಮೇಲೆ ಪೊಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ಕೇರಳಾ ಪೊಲೀಸರ ಸ್ಪಷ್ಟನೆ

ಮೊನಾಲಿಸಾಳ ವಯಸ್ಸಿನ ಬಗ್ಗೆ ತನಿಖೆ ನಡೆಸಿದ ಕೇರಳಾ ಪೊಲೀಸರು ಮೊನಾಲಿಸಾ 18 ವರ್ಷ ದಾಟಿದ್ದಾಳೆ. ಹೀಗಾಗಿ ಮಧ್ಯಪ್ರದೇಶದಲ್ಲಿ ದಾಖಲಾಗಿರುವ ಪೊಕ್ಸೊ ಪ್ರಕರಣವನ್ನು ರದ್ದು ಪಡಿಸಬೇಕು. ಅವಳು 18 ವರ್ಷ ಪೂರೈಸಿರುವ ಕಾರಣ ಅವಳು ಯಾರನ್ನು ಬೇಕಾದರೂ ಮದುವೆಯಾಗುವ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ. ಅಂತೆಯೇ ಮದುವೆಯ ಸಂದರ್ಭದಲ್ಲಿ ನೀಡಿರುವ ದಾಖಲಾತಿ ಪತ್ರಗಳೆಲ್ಲ  ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).