ಕೋಲ್ಕತ್ತಾದ ತರತಲಾದಲ್ಲಿ ನಿರ್ಮಾಣ ಹಂತದ ಗೋದಾಮು ಕುಸಿತ 
ದೇಶ

ಕೋಲ್ಕತ್ತಾದಲ್ಲಿ ಭೀಕರ ದುರಂತ: ನಿರ್ಮಾಣ ಹಂತದ ಗೋದಾಮು ಕುಸಿದು ಮೂವರು ಸಾವು, 40ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳ ಅಡಿ ಲಾಕ್! ಮೃತರಿಗೆ ಸಿಎಂ ಸುವೇಂದು ಸಂತಾಪ! Kolkata Warehouse Collapse

ಪ್ರಮುಖ ಮುಖ್ಯಾಂಶಗಳು

  • ಕೋಲ್ಕತ್ತಾದ ತರತಲಾದಲ್ಲಿ ನಿರ್ಮಾಣ ಹಂತದ ಗೋದಾಮು ಕುಸಿತ
  • ಗೋದಾಮು ಕುಸಿದು 3 ಕಾರ್ಮಿಕರು ಸಾವು, 40ಕ್ಕೂ ಹೆಚ್ಚು ಜನ ಅವಶೇಷಗಳ ಅಡಿ ಸಿಲುಕಿದ್ದಾರೆ.
  • ಸೇನೆ ಮತ್ತು NDRF ಜಂಟಿ ರಕ್ಷಣಾ ಕಾರ್ಯಾಚರಣೆ
  • ಸಿಎಂ ಸುವೇಂದು ಸಂತಾಪ
ಕೋಲ್ಕತ್ತ: ಬುಧವಾರ (ಜೂ.24) ಮಧ್ಯಾಹ್ನ ಕೋಲ್ಕತ್ತಾದ ತರತಲಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮು ಕುಸಿದ ಹಿನ್ನಲೆ (Kolkata Warehouse Collapse) 3 ಜನ ಮೃತಪಟ್ಟಿದ್ದು, ಸುಮಾರು 40 ಜನ ಕುಸಿದ ಅವಶೇಷಗಳ ಅಡಿಯಲ್ಲಿ ಸಿಲಿಕಿರುವುದಾಗಿ ತಿಳಿದು ಬಂದಿದೆ.
ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಈಗಾಗಲೇ ಸುಮಾರು 20 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಕ್ಷಣ ಪ್ರತಿಕ್ರಿಯಿಸಿದ್ದೆವೆ!

ಮಧ್ಯಾಹ್ನ ಸುಮಾರು 2.30 - 3.00 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಗೋದಾಮೊಂದನ್ನು ನಿರ್ಮಿಸಲಾಗುತ್ತಿದ್ದು, ಅರ್ಧ ಕಟ್ಟಲಾದ ಗೋದಾಮಿನ ಮೇಲ್ಛಾವಣಿ ಒಮ್ಮೆಲೇ ಕುಸಿದ ಪರಿಣಾಮ ಸುಮಾರು 40 ಜನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ನಮಗೆ ಮಾಹಿತಿ ದೊರೆತ ಕೆಲವೇ ನಿಮಿಷಗಳಲ್ಲಿ ನಾವು ಸ್ಥಳಕ್ಕೆ ಆಗಮಿಸಿದೆವು. ಆಗಲೇ ಮೂರು ಜನ ಕಾರ್ಮಿಕರು ಸಾವನ್ನಪ್ಪಿದ್ದರು. ಕೂಡಲೇ ರಕ್ಷಣಾ ಕಾರ್ಯವನ್ನು ನಡೆಸಿ ಈಗಾಗಲೇ ಸುಮಾರು 20 ಜನ ಕಾರ್ಮಿಕರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ನಮ್ಮ ಅಂದಾಜಿನಂತೆ ಇನ್ನೂ ಸುಮಾರು 20-25 ಜನ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡುವಲ್ಲಿ ನಮ್ಮ ತಂಡ ಸಕ್ರೀಯವಾಗಿದೆ ಎಂದು ಎನ್​ಡಿಆರ್​ಎಫ್​ ಅಧಿಕಾರಿ ತಿಳಿಸಿದ್ದಾರೆ. 

ಸುವೇಂದು ಸಂತಾಪ

ತರಾತಲಾದ ಬ್ರೇಸ್ ಸೇತುವೆ ಬಳಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಕಟ್ಟಡ ಕುಸಿದು ಹಲವಾರು ಕಾರ್ಮಿಕರು ಸಿಲುಕಿಕೊಂಡ ದುರಂತ, ಸಾವು ನನಗೆ ಅತೀವ ನೋವು ಮತ್ತು ದುಃಖ ತಂದಿದೆ. ಇದುವರೆಗೆ 21 ಜನರನ್ನು ಕಟ್ಟಡದಿಂದ ಹೊರತೆಗೆಯಲಾಗಿದ್ದು, ಅವರಲ್ಲಿ 18 ಮಂದಿ ಗಾಯಗೊಂಡಿದ್ದು  3 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಟ್ವಿಟ್​ ಮಾಡಿದ್ದಾರೆ. 
ಈ ದುರಂತದಲ್ಲಿ ಮೃತಪಟ್ಟ ಅಮೂಲ್ಯ ಜೀವಗಳಿಗೆ ನನ್ನ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು. ಊಹಿಸಲಾಗದ ದುಃಖದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೃತರ ಕುಟುಂಬದರೊಂದಿಗೆ ದೃಢವಾಗಿ ನಿಂತಿದೆ ಮತ್ತು ನಾವು ಅವರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಎಂದು ಬರೆದುಕೊಂಡಿದ್ದಾರೆ. 
ಪ್ರಸ್ತುತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸಲಾಗುತ್ತಿದೆ. ಸಿಕ್ಕಿಬಿದ್ದ ಪ್ರತಿಯೊಬ್ಬ ಕಾರ್ಮಿಕನನ್ನು ಸಾಧ್ಯವಾದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಲು ಸೇನೆ, NDRF, SDRF, ಕೋಲ್ಕತ್ತಾ ಪೊಲೀಸರು  ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್​).