Lamp Post Pull Ups (ಚಿತ್ರ X) 
ದೇಶ

ಲೈಕ್ಸ್ ಮತ್ತು ಫಾಲೋವರ್ಸ್ ಗೀಳಿಗೆ ಯಮನ ಜೊತೆಯೇ ಚೆಲ್ಲಾಟ!...ಲೈಟ್ ಕಂಬವೇರಿ ವರ್ಕೌಟ್ ಮಾಡಿದ ಯುವಕ! Lamp Post Pull Ups

ಕೋಲ್ಕತ್ತಾ: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಹಲವು ವಿಚಿತ್ರ ಹಾಗೂ ಸಾಹಸಮಯ ವೀಡಿಯೊಗಳು ವೈರಲ್ ಆಗುವುದನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇದೀಗ ಕೋಲ್ಕತಾದಲ್ಲಿ ಯುವಕನೊಬ್ಬ

ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ, ಬೃಹತ್ ಎತ್ತರದ ಲೈಟ್ ಕಂಬದ ತುದಿಯಲ್ಲಿ ನೇತಾಡುತ್ತಾ ಅತ್ಯಂತ ಸರಳವಾಗಿ ಪುಲ್-ಅಪ್ಸ್

(

Lamp Post Pull Ups)

ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಮಾನ್ಯ ಜಿಮ್‌ನಲ್ಲಿ ವ್ಯಾಯಾಮ ಮಾಡುವಂತೆ ಈ ಯುವಕ ಯಾವುದೇ ಭಯವಿಲ್ಲದೆ ಬಾಡಿವೇಟ್ ಎಕ್ಸಸೈಜ್‌ಗಳನ್ನು ಮಾಡುತ್ತಿರುವುದು ವೀಕ್ಷಕರನ್ನು ಅಚ್ಚರಿಗೆ ತಳ್ಳಿದೆ. ವೀಡಿಯೊ ಚಿತ್ರೀಕರಿಸುವಾಗ ಆತನ ಆತ್ಮವಿಶ್ವಾಸ ಮತ್ತು ಪ್ರಶಾಂತತೆ ಜನರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಅಗ್ನಿಶಾಮಕ ದಳದ ಉಪಸ್ಥಿತಿ ಮತ್ತು ಗೊಂದಲ

ಈ ಅಪಾಯಕಾರಿ ಘಟನೆ ನಡೆಯುತ್ತಿದ್ದ ಸ್ಥಳದ ಕೆಳಭಾಗದಲ್ಲಿ ಅಗ್ನಿಶಾಮಕ ದಳದ ವಾಹನವೊಂದು ನಿಯೋಜನೆಗೊಂಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಯುವಕ ಆಕಸ್ಮಿಕವಾಗಿ ಹಿಡಿತ ತಪ್ಪಿ ಕೆಳಗೆ ಬಿದ್ದರೆ ತಕ್ಷಣ ರಕ್ಷಿಸಲು ಅಥವಾ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ಕೆಳಗೆ ನೆರೆದಿದ್ದರು ಎನ್ನಲಾಗಿದೆ. ಆದರೆ, ಈ ಸಾಹಸವನ್ನು ಸ್ಥಳೀಯ ಆಡಳಿತದ ಅನುಮತಿ ಪಡೆದೇ ನಡೆಸಲಾಗಿದೆಯೋ ಅಥವಾ ಯುವಕನ ಹುಚ್ಚಾಟದಿಂದ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದೆಯೋ ಎಂಬುದು ಈವರೆಗೂ ತಿಳಿದುಬಂದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಮಹಾಪೂರ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ತರಹೇವಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈತನನ್ನು 'ಆಕ್ಷನ್ ಸಿನಿಮಾದ ಹೀರೋ' ಎಂದು ತಮಾಷೆಯಾಗಿ ಬಣ್ಣಿಸಿದರೆ, ಇನ್ನು ಕೆಲವರು "ಸಾಮಾನ್ಯ ಜಿಮ್‌ಗಳು ಇವನಿಗೆ ಬೋರ್ ಹೊಡೆದಿರಬೇಕು, ಅದಕ್ಕೆ ಈ ಜಾಗ ಆಯ್ಕೆ ಮಾಡಿಕೊಂಡಿದ್ದಾನೆ" ಎಂದು ಕಾಮೆಂಟ್ ಮಾಡಿದ್ದಾರೆ.

ಎಚ್ಚರಿಕೆಯ ಅಗತ್ಯ ಮತ್ತು ಜಾಗೃತಿ

ವೀಡಿಯೊವನ್ನು ನೋಡಿ ಆನಂದಿಸಿದವರ ಜೊತೆಗೆ, ಪ್ರಜ್ಞಾವಂತ ನೆಟ್ಟಿಗರು ಈ ಕೃತ್ಯದ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಎತ್ತರದಲ್ಲಿ ಸಣ್ಣ ತಪ್ಪು ಅಥವಾ ಹಿಡಿತ ಸಡಿಲವಾದರೂ ಪ್ರಾಣವೇ ಹೋಗುವ ಅಪಾಯವಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಅಥವಾ ಪ್ರಚಾರ ಗಿಟ್ಟಿಸುವ ಗೀಳಿನಲ್ಲಿ ಯುವಜನತೆ ಇಂತಹ ಅಪಾಯಕಾರಿ ಸ್ಟಂಟ್‌ಗಳಿಗೆ ಕೈಹಾಕಬಾರದು ಹಾಗೂ ಇದನ್ನು ಯಾರೂ ಅನುಕರಣೆ ಮಾಡಬಾರದು ಎಂದು ಎಚ್ಚರಿಸಲಾಗಿದೆ (ಏಜೆನ್ಸೀಸ್​).