ಅನುಷ್ಕಾ ಮುಟ್ಟುವ ಮುನ್ನ ಕೊಹ್ಲಿ ಪರ್ಮಿಷನ್ ಬೇಕೇ ಬೇಕು! ಸ್ಟಾರ್ ಆಟಗಾರ ಡಿ.ಕೆ ನೀಡಿದ ಆ ತಮಾಷೆಯ ವಾರ್ನಿಂಗ್ ಹಿಂದಿನ ಮರ್ಮವೇನು?
ಬೆಂಗಳೂರು: ಮೈದಾನದಲ್ಲಿ ವಿರಾಟ್ ಕೊಹ್ಲಿ ಅಂದರೆ ತಕ್ಷಣ ನೆನಪಿಗೆ ಬರುವುದು ಅವರ ಆಕ್ರಮಣಕಾರಿ ಆಟ, ಬದ್ಧತೆಯಾಗಿದೆ. ಎದುರಾಳಿ ಪಾಳಯದ ಬ್ಯಾಟರ್‌ಗಳ ವಿಕೆಟ್ ಉರುಳಿದಾಗ ಕೊಹ್ಲಿ ಆಚರಿಸುವ ಸಂಭ್ರಮ ಮೈದಾನದಲ್ಲಿ ಕಿಚ್ಚು ಹೊತ್ತಿಸುತ್ತದೆ. ಆದರೆ, ಅದೇ ವಿರಾಟ್ ಕೊಹ್ಲಿ ವೈಯಕ್ತಿಕ ಜೀವನದಲ್ಲಿ, ಮೈದಾನದಿಂದ ಹೊರಗೆ ಎಷ್ಟು ಸಾಫ್ಟ್ ಎಂದು ನಿಮಗೆ ಗೊತ್ತಾ. ವಿಶೇಷವಾಗಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಅವರು ಎಷ್ಟು ಆರಾಧಿಸುತ್ತಾರೆ ಮತ್ತು ಹೇಗೆ ಕಣ್ಣಿನ ರೆಪ್ಪೆಯಂತೆ ಕಾಯುತ್ತಾರೆ ಎಂದಿದ್ದಾರೆ. ಈ ಬಗ್ಗೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಕೊಹ್ಲಿಯ ಆಪ್ತ ಗೆಳೆಯ ದಿನೇಶ್ ಕಾರ್ತಿಕ್(Dinesh Karthik) ಬಿಚ್ಚಿಟ್ಟಿರುವ ಒಂದು ಸ್ವಾರಸ್ಯಕರ ಸಂಗತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇತ್ತೀಚಿನ ಪಂದ್ಯವೊಂದರ ಮುಕ್ತಾಯದ ಬಳಿಕ ನಡೆದ ಒಂದು ತಮಾಷೆಯ ಘಟನೆಯನ್ನು ಹಂಚಿಕೊಂಡಿರುವ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿಯ ಪೊಸೆಸಿವ್ ಮತ್ತು ಕ್ಯೂಟ್ ಆದ ಸ್ವಭಾವವನ್ನು ಜಗತ್ತಿನೆದುರು ತೆರೆದಿಟ್ಟಿದ್ದಾರೆ.
ಅನುಷ್ಕಾಗೆ ಹಗ್ ಮಾಡಿದ ಡಿ. ಕೆ; ಕೆಂಡವಾದರೇ ಕೊಹ್ಲಿ?
ಆ ರೋಚಕ ಪಂದ್ಯದ ನಂತರದ ಕ್ಷಣಗಳನ್ನು ನೆನಪಿಸಿಕೊಂಡ ದಿನೇಶ್ ಕಾರ್ತಿಕ್, ನಾವೆಲ್ಲರೂ ಮೈದಾನದಲ್ಲಿ ವಿರಾಟ್‌ನ ಆ ರೌದ್ರಾವತಾರವನ್ನು ನೋಡಿರುತ್ತೇವೆ. ಆದರೆ ಮೈದಾನದಿಂದ ಹೊರಗೆ ಆತ ತುಂಬಾ ಮೃದು ಸ್ವಭಾವದ ವ್ಯಕ್ತಿ. ತನ್ನ ಆಪ್ತರ ವಲಯ ಹಾಗೂ ಕುಟುಂಬವನ್ನು ಆತ ತುಂಬಾ ಜಾಗರೂಕತೆಯಿಂದ ರಕ್ಷಿಸುತ್ತಾನೆ. ಇತ್ತೀಚಿಗೆ ಪಂದ್ಯವೊಂದು ಮುಗಿದ ಬಳಿಕ ನಾನು ಅನುಷ್ಕಾ ಶರ್ಮಾ ಅವರಿಗೆ ಶುಭ ಕೋರಲು ಅವರ ಬಳಿ ಹೋದೆ. ಅತ್ಯಂತ ಸಹಜವಾದ ಸೌಹಾರ್ದಯುತ ಸ್ನೇಹದ ಅಪ್ಪುಗೆಯನ್ನು ನೀಡಿ ನಾನು ತಿರುಗುವಷ್ಟರಲ್ಲಿ ಎದುರುಗಡೆ ವಿರಾಟ್ ಕೊಹ್ಲಿ ನಿಂತಿದ್ದ ಎಂದು ನಗುತ್ತಾ ಹೇಳಿದ್ದಾರೆ.
ಕೊಹ್ಲಿ ಕೈಗಳನ್ನು ಕಟ್ಟಿಕೊಂಡು, ಮೈದಾನದಲ್ಲಿ ಅಂಪೈರ್ ತೀರ್ಪಿನ ವಿರುದ್ಧ DRS ರಿವ್ಯೂ ನೋಡುವಾಗ ಅತ್ಯಂತ ತೀಕ್ಷ್ಣವಾಗಿ ದಿಟ್ಟಿಸುತ್ತಾರಲ್ಲ, ಅದೇ ಕ್ಲಾಸಿಕ್ ಸ್ಟೇರ್ ಮೂಲಕ ನನ್ನನ್ನೇ ನೋಡುತ್ತಾ ನಿಂತಿದ್ದ. ಅಷ್ಟಕ್ಕೇ ನಿಲ್ಲದ ಕೊಹ್ಲಿ, ನೇರವಾಗಿ ನಡೆದುಕೊಂಡು ಬಂದು ನಮ್ಮಿಬ್ಬರ ಮಧ್ಯದಲ್ಲೇ ನುಗ್ಗಿ ನಿಂತುಕೊಂಡ ನನ್ನ ಕಡೆ ತಿರುಗಿ, ಓಕೆ ಡಿಕೆ.. ಸಾಕು ಮಾಡು, ಈಗ ನನ್ನ ಸರದಿ ಎಂದುಬಿಟ್ಟ ಎಂದು ಕಾರ್ತಿಕ್ ಆ ರಂಗುರಂಗಿನ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಅನುಷ್ಕಾರನ್ನು ರಾಣಿಯಂತೆ ನೋಡಿಕೊಳ್ಳುತ್ತಾನೆ ಕೊಹ್ಲಿ"
ಆ ಸಮಯದಲ್ಲಿ ವಿರಾಟ್‌ಗೆ ನಿಜವಾಗಿಯೂ ಸಿಟ್ಟು ಬಂದಿರಲಿಲ್ಲ. ಆತ ಕೇವಲ ತಮಾಷೆಗಾಗಿ, ಅತ್ಯಂತ ಮುದ್ದಾದ ಅಸೂಯೆಯಿಂದ ಹಾಗೆ ಮಾಡಿದ್ದ ಅಷ್ಟೇ. ಏಕೆಂದರೆ, ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾರನ್ನು ಇಡೀ ಸಾಮ್ರಾಜ್ಯದ ಮಹಾರಾಣಿಯಂತೆ ಅತ್ಯಂತ ಗೌರವದಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಆತ ಅನುಷ್ಕಾರನ್ನು ಎಷ್ಟು ಆರಾಧಿಸುತ್ತಾನೆ ಎಂಬುದನ್ನು ಕಣ್ಣಾರೆ ನೋಡುವುದೇ ಒಂದು ಸುಂದರ ಅನುಭವ ಎಂದು ಡಿ.ಕೆ ಕೊಂಡಾಡಿದ್ದಾರೆ.
ಕೊನೆಯಲ್ಲಿ ತಮಾಷೆಯಾಗಿ ಎಲ್ಲರಿಗೂ ಒಂದು ಕಿವಿಮಾತು ಹೇಳಿರುವ ದಿನೇಶ್ ಕಾರ್ತಿಕ್, ಮುಂದಿನ ದಿನಗಳಲ್ಲಿ ನನಗಂತೂ ಒಂದು ಪಾಠ ಕಲಿಕೆಯಾಗಿದೆ. ಭಾರತೀಯ ಕ್ರಿಕೆಟ್‌ನ ಫಸ್ಟ್ ಲೇಡಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಳ್ಳುವ ಮುನ್ನ ಅಥವಾ ಮಾತನಾಡಿಸುವ ಮುನ್ನ ಯಾವಾಗಲೂ ವಿರಾಟ್ ಕೊಹ್ಲಿ ಬಳಿ ಪರ್ಮಿಷನ್ ಕೇಳಬೇಕು. ಇಲ್ಲದಿದ್ದರೆ ಕೊಹ್ಲಿಯ ಆ ಭಯಾನಕ ಡೆತ್-ಸ್ಟೇರ್ ಎದುರಿಸಬೇಕಾಗುತ್ತದೆ, ಎಚ್ಚರಿಕೆ ಎಂದು ಲೇವಡಿ ಮಾಡಿದ್ದಾರೆ. ಸದ್ಯ ಡಿ.ಕೆ ಅವರ ಈ ಹೇಳಿಕೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ನಗು ಮೂಡಿಸಿದೆ,(ಏಜೆನ್ಸೀಸ್).