RR vs DC: ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಮತ್ತು ಪಾತುಮ್ ನಿಸ್ಸಂಕ ಅವರ ಭರ್ಜರಿ ಬ್ಯಾಟಿಂಗ್ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.1 ಓವರ್‌ಗಳಲ್ಲಿ 3 ವಿಕೆಟ್ಗಳಿಂದ 226 ರನ್ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.
ಹಿಂದಿನ ಪಂದ್ಯದಲ್ಲಿ ಕೇವಲ 75 ರನ್‌ಗಳಿಗೆ ಆಲೌಟ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಇಂದು 19.1 ಓವರ್‌ಗಳಲ್ಲಿ 226 ರನ್‌ಗಳ ಗುರಿ ಬೆನ್ನಟ್ಟಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ರಿಯಾನ್ ಪರಾಗ್ ಅವರ ಅಮೋಘ ಬ್ಯಾಟಿಂಗ್ನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 225 ರನ್ ಗಳಿಸಿತು.
ರಾಜಸ್ಥಾನ್ ರಾಯಲ್ಸ್ ನೀಡಿದ್ದ 226ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಪಾತುಮ್ ನಿಸ್ಸಂಕಾ ಹಾಗೂ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೆ ಎಲ್ ರಾಹುಲ್ (40 ಎಸೆತಗಳಲ್ಲಿ 75) ಮತ್ತು ಪಾಥುಮ್ ನಿಸ್ಸಂಕಾ (33 ಎಸೆತಗಳಲ್ಲಿ 62) 110 ರನ್‌ಗಳ ಜೊತೆಯಾಟದೊಂದಿಗೆ 226 ರನ್‌ಗಳ ಗುರಿಯನ್ನು ಸಾಧಿಸಿದರು. ನಂತರ ಟ್ರಿಸ್ಟಾನ್ ಸ್ಟಬ್ಸ್ (18) ಮತ್ತು ಅಶುತೋಷ್ ಶರ್ಮಾ (25) ಹೊಡೆದು ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಚೇಸ್ ಅನ್ನು ಪೂರ್ಣಗೊಳಿಸಿ ಅಜೇಯರಾಗಿ ಉಳಿದರು.
ರಿಯಾನ್ ಪರಾಗ್ ಆಟ ವ್ಯರ್ಥ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ರಾಜಸ್ತಾನ್ ರಾಯಲ್ಸ್ ತಂಡ, ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಎರಡನೇ ಓವರ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ವಿಕೆಟ್ನಿಂದ ಆಘಾತ ಎದುರಿಸಿತು. ಬಳಿಕ ರಿಯಾನ್ ಪರಾಗ್ ಮತ್ತು ಜುರೆಲ್ ಅವರ 102 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡ 20 ಓವರ್‌ಗಳಲ್ಲಿ 225ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಬೃಹತ್
ರಿಯಾನ್ ಪರಾಗ್ 50 ಎಸೆತಗಳಲ್ಲಿ 90 ರನ್ ಗಳಿಸಿದ್ರೆ, ಧ್ರುವ್ ಜುರೆಲ್ 30 ಎಸೆತಗಳಲ್ಲಿ 42 ರನ್ಗಳಿಸಿದ್ರೆ, ಕೊನೆಯಾದಾಗಿ ಡೊನೊವನ್ ಫೆರೀರಾ 14 ಎಸೆತಗಳಲ್ಲಿ 47 ರನ್ ಗಳಿಸಿ ಅಜೇಯರಾದರು.