Kiren Rijiju Dares Congress to Back Women's Reservation Bill After Rahul Gandhi's Video
- ಮಹಿಳೆಯರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಬಿಡುತ್ತಿಲ್ಲ ಎಂದು ಸ್ವಾತಂತ್ರ್ಯ, ಸಬಲೀಕರಣದ ಬಗ್ಗೆ ಮಾತಾಡಿದ ರಾಹುಲ್ ಗಾಂಧಿ
- ರಾಹುಲ್ ಗಾಂಧಿ ಅವರಲ್ಲಿ ಮಹಿಳೆಯರ ಸಬಲೀಕರಣದ ಬಗ್ಗೆ ಕುರಿತು ಸ್ಪಷ್ಟ ಬದಲಾವಣೆಯಾಗಿರುವುದು ಕಂಡುಬಂದಿದೆ ಎಂದ ಕಿರಣ್ ರಿಜಿಜು
- ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಕೊಡಿ ಎಂದು ಕಿರಣ್ ರಿಜಿಜು ಸವಾಲ್
ನವದೆಹಲಿ: ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣದ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡ ಬೆನ್ನಲ್ಲೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ನಾಯಕರು ಮಹಿಳಾ ಮೀಸಲಾತಿ ಮಸೂದೆ(Women's Reservation)ಗೆ ಯಾವುದೇ ಷರತ್ತುಗಳಿಲ್ಲದೆ ಬೆಂಬಲ ನೀಡುವಂತೆ ಸವಾಲು ಹಾಕಿದ್ದಾರೆ.
ಆಸ್ಕ್ ಮಿ ಎನಿಥಿಂಗ್ ಎಂದು ಇನ್ಸ್ಟಾದಲ್ಲಿ ಅಭಿಯಾನ ಆರಂಭಿಸಿದ್ದರು. ಇದರಲ್ಲಿ ಬಳಕೆದಾರರೊಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ, ಮಹಿಳೆಯರನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕು ಮತ್ತು ಅವರು ಬಯಸಿದ್ದನ್ನು ಮಾಡಲು ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದರು.
ರಾಹುಲ್ ಗಾಂಧಿ ಹೇಳಿದ್ದಿಷ್ಟು
ನನಗೆನಿಸುತ್ತದೆ ಭಾರತದ ಮಹಿಳೆಯರ ಶಕ್ತಿಯನ್ನು ಬಂಧಿಸಲಾಗಿದೆ. ಅವರೆಷ್ಟು ಬಲಶಾಲಿಗಳು ಎಂದು ವ್ಯಕ್ತಪಡಿಸಲು ಬಿಡುತ್ತಿಲ್ಲ. ಅವರಿಗೆಷ್ಟು ತಾಕತ್ತಿದೆ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳಲು ಬಿಡುತ್ತಿಲ್ಲ ಎಂದು ನಾನು ಯೋಚಿಸುತ್ತಿದ್ದೆ. ನನ್ನ ದೇಶದ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದರೆ ಯಾವುದೇ ದೇಶವೂ ಯಶಸ್ವಿಯಾಗಲು ಸಾಧ್ಯವಿಲ್ಲ ಮತ್ತು ಅಂತಹ ದೇಶವು ಅಪೂರ್ಣವಾಗಿ ಉಳಿಯುತ್ತದೆ.
ನಮ್ಮ ದೇಶವು ಮಹಿಳೆಯರ ಅಭಿವ್ಯಕ್ತಿ ಇಲ್ಲದೆ ಅಪೂರ್ಣವಾಗಿದೆ ಎಂದು ಜನರಿಗೆ ಅರ್ಥವಾಗುವಂತೆ ಮಾಡುವುದೇ ನಮ್ಮ ರಾಜಕೀಯದ ಮುಖ್ಯ ಉದ್ದೇಶವಾಗಬೇಕು.
ಮಹಿಳೆಯರು ವ್ಯಾಪಾರ ಅಥವಾ ರಾಜಕೀಯ ವ್ಯವಸ್ಥೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ, ತಮ್ಮ ಮನೆಯಲ್ಲಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವುದು ಮತ್ತು ಬೀದಿಗಳಲ್ಲಿ ಆರಾಮವಾಗಿ ತಿರುಗಾಡುವ ಸ್ವಾತಂತ್ರ್ಯವನ್ನು ಹೊಂದುವುದು ಮುಖ್ಯ ಎಂದು ಅವರು ಹೇಳಿದರು. ಪಿತೃಪ್ರಧಾನ ಕುಟುಂಬದ ನಿಯಂತ್ರಣದಿಂದ ಮಹಿಳೆಯರಿಗೆ ನಿರ್ದಿಷ್ಟ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಭಾರತವು ನಿಜವಾದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಸಚಿವ ಕಿರಣ್ ರಿಜಿಜು ಹೇಳಿದ್ದೇನು?
ರಾಹುಲ್ ಗಾಂಧಿ ಅವರಲ್ಲಿ ಮಹಿಳೆಯರ ಕುರಿತು ಸ್ಪಷ್ಟ ಬದಲಾವಣೆಯಾಗಿರುವುದು ಕಂಡುಬರುತ್ತಿದೆ. ಈಗಲಾದರೂ ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಮಸೂದೆಯನ್ನು ಷರತ್ತುಗಳನ್ನು ಹೇರದೆ ಬೆಂಬಲಿಸುತ್ತದೆಎಂದು ನಾನು ಭಾವಿಸುತ್ತೇನೆ ಎಂದು
ಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎಕ್ಸ್ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಉಲ್ಲೇಖಿಸಿ ಬರೆದುಕೊಂಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯ ಹಿನ್ನೆಲೆ
2023 ನಾರಿ ಶಕ್ತಿ ವಂದನ್ ಅಧಿನಿಯಮ, 2023 ಸಂಸತ್ತಿನ ಉಭಯ ಸದನಗಳಲ್ಲಿ ಪಾಸ್ ಆಗಿತ್ತು. ಆದರೆ ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ವಿಫಲಗೊಂಡ ನಂತರ ಅದರ ಅನುಷ್ಠಾನ ಪ್ರಕ್ರಿಯೆ ಮುಂದುವರಿಯಲಿಲ್ಲ,
(ಏಜೆನ್ಸೀಸ್).