Khan Sir Controversy > ಪ್ರಸಿದ್ಧ ಟ್ಯೂಟರ್ ಖಾನ್ ಸರ್ ವಿರುದ್ಧ ಗಂಭೀರ ಕೊಲೆ ಬೆದರಿಕೆ ಆರೋಪ! 
ದೇಶ

ಅವರ ಸೀಕ್ರೆಟ್ ಅಫೇರ್ ನನಗೆ ಗೊತ್ತು, ನನ್ನ ಪ್ರಾಣ ತೆಗೀತಾರೆ: ಖಾನ್ ಸರ್ ವಿರುದ್ಧ ದೂರು ದಾಖಲಿಸಿದ ಯುಪಿ ಮಹಿಳೆ! | Khan Sir Controversy

ಖಾನ್ ಸರ್ ಎಂದೇ ಜನಪ್ರಿಯರಾಗಿರುವ ಫೈಜಲ್ ಖಾನ್ ಅವರಿಂದ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳೆಯೊಬ್ಬರು ಪಟನಾದ ಪೀರ್‌ಬಹೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹುಸ್ನೇರಾ ಖಾತೂನ್ ಎಂದು ಗುರುತಿಸಲಾದ ಈ ಮಹಿಳೆ, 2017 ರಿಂದ ಖಾನ್ ಸರ್ ಮತ್ತು ತಮ್ಮ ಗೆಳತಿ ಶಬೀನಾ ಖಾತೂನ್ ನಡುವಿನ ಸಂಬಂಧದ ಬಗ್ಗೆ ತಮಗೆ ತಿಳಿದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಗೆಳತಿಯ ಕೊಠಡಿಗೆ ಖಾನ್ ಸರ್ ಭೇಟಿ ನೀಡುವುದನ್ನು ತಾವು ವಿರೋಧಿಸಿದಾಗ ತಮಗೆ ಬೆದರಿಕೆ ಹಾಕಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಆರೋಪಗಳು ಪೊಲೀಸ್ ದೂರಿನ ಭಾಗವಾಗಿದ್ದು, ಇವು ಇನ್ನು ಸಾಬೀತಾಗಿಲ್ಲ ಎಂಬುದು ಗಮನಾರ್ಹ. ಪೊಲೀಸರು ದೂರನ್ನು ಪರಿಗಣನೆಗೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಹುಸ್ನೇರಾ ಖಾತೂನ್ ಅವರು ಫೈಜಲ್ ಖಾನ್ ಅವರು ನನ್ನ ಗೆಳತಿ ಶಬೀನಾ ಖಾತೂನ್ ಅವರ ಕೊಠಡಿಗೆ ಬರುತ್ತಿದ್ದರು ಮತ್ತು ಅಲ್ಲಿ ಗಂಟೆಗಟ್ಟಲೆ ನೆಲೆಸುತ್ತಿದ್ದರು. ನಾನು ಇದನ್ನು ವಿರೋಧಿಸಿದಾಗ, ಖಾನ್ ಸರ್ ಈ ಹಿಂದೆ ನನ್ನನ್ನು ಪೊಲೀಸ್ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದರು ಹಾಗೂ ಕೊಲೆ ಬೆದರಿಕೆ ಹಾಕಿದ್ದರು. ಖಾನ್ ಸರ್ ಅವರ ರಹಸ್ಯ ಪ್ರೇಮ ಪ್ರಕರಣದ ಬಗ್ಗೆ ನನಗೆ ತಿಳಿದಿರುವುದರಿಂದ ಅವರು ನನ್ನನ್ನು ಕೊಲ್ಲಿಸಬಹುದು ಎಂದು ಆರೋಪಿಸಿದ್ದಾರೆ. ಈ ಘಟನೆಗಳು 2017 ಮತ್ತು 2018 ರ ನಡುವಿನ ಅವಧಿಗೆ ಸಂಬಂಧಿಸಿದ್ದು ಎಂದು ಹುಸ್ನೇರಾ ಖಾತೂನ್ ಹೇಳಿದ್ದಾರೆ.
ಇತ್ತೀಚೆಗೆ ಖಾನ್ ಸರ್ ಮತ್ತು ರೋಶನ್ ಆನಂದ್ ಎನ್ನುವವರ ನಡುವೆ ನಡೆದ ಗಲಾಟೆ ಹಾಗೂ ರೋಶನ್ ಆನಂದ್ ಸಹೋದರನ ಸಾವಿನ ಘಟನೆಯಿಂದಾಗಿ ತಾವು ತುಂಬಾ ಹೆದರಿರುವುದಾಗಿ ಮಹಿಳೆ ಹೇಳಿದ್ದಾರೆ. ಖಾನ್ ಸರ್ ಅವರ ಪ್ರೇಮ ಪ್ರಸಂಗದ ರಹಸ್ಯ ತಮಗೆ ತಿಳಿದಿರುವುದರಿಂದ, ಈ ವಿಷಯ ಎಲ್ಲಿ ಆಚೆಗೆ ಬಂದುಬಿಡುತ್ತದೋ ಎಂಬ ಭಯದಿಂದ ಖಾನ್ ಸರ್ ತಮಗೆ ತೊಂದರೆ ಕೊಡಬಹುದು ಅಥವಾ ಹಾನಿ ಮಾಡಬಹುದು ಎಂದು ಹುಸ್ನೇರಾ ಖಾತೂನ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳು ದೂರಿನಲ್ಲಿ ಮಾಡಲಾದ ಆರೋಪಗಳನ್ನು ಪರಿಶೀಲಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಸತ್ಯತೆ ಮತ್ತು ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ. ಟೌನ್ ಡಿಎಸ್ಪಿ-1 ರಾಜೇಶ್ ರಂಜನ್ ಮಾತನಾಡಿ, ಪೊಲೀಸರು ದೂರುದಾರರನ್ನು ಸಂಪರ್ಕಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).