ಫಿಫಾ ವಿಶ್ವಕಪ್ ಫೈನಲ್ ಹಿನ್ನೆಲೆ ಕೇರಳದ ಶಾಲಾ-ಕಾಲೇಜುಗಳಿಗೆ ರಜೆ  
ದೇಶ

ಫಿಫಾ ಫೈನಲ್ ಕ್ರೇಜ್: ಕೇರಳದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ವಿ.ಡಿ ಸತೀಶನ್​ ಸರ್ಕಾರ! Kerala School Holiday for FIFA Final

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್ ಫೈನಲ್ ಹಿನ್ನೆಲೆ ಕೇರಳದ ಶಾಲಾ-ಕಾಲೇಜುಗಳಿಗೆ ರಜೆ
  • ಸೋಮವಾರ ಕುಲೈ 20 ರಂದು ರಜೆ ಘೋಷಿಸಿದ ಸಿಎಂ ವಿ.ಡಿ. ಸತೀಶನ್
  • ಅರ್ಜೆಂಟೀನಾ vs ಸ್ಪೇನ್ ನಡುವೆ ನಡೆಯಲಿರುವ ಫೈನಲ್​ ಪಂದ್ಯ
ತಿರುವನಂತಪುರ: ಕೇರಳದವರಿಗೆ ಫುಟ್ಬಾಲ್​ ಎಂದರೆ ಅದು ಕೇವಲ ಕ್ರೀಡೆಯಲ್ಲ, ಅದೊಂದು ಅಲ್ಲಯ ಜನರ ಅವಿಭಾಜ್ಯ ಅಂಗ ಎಂದರೂ ತಪ್ಪಾಗದು. ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ಲಬ್​ ಪಂದ್ಯಗಳಿಂದ ಹಿಡಿದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ತಪ್ಪದೇ ನೋಡುನ ಜನ ಎಂದರೆ ಅದು ಮಳಿಯಾಳಿಗಳಾಗಿದ್ದಾರೆ.
ಹೀಗಾಗಿ ಇಂದು ರಾತ್ರಿ (ಭಾನುವಾರ, ಜು.19) ನಡೆಯಲಿರುವ ವಿಶ್ವ ಪ್ರಸಿದ್ಧ ಫಿಫಾ ವಿಶ್ವಕಪ್ ಫೈನಲ್​​​ ಪಂದ್ಯಾವಳಿ ಮುಗಿಯಲು ಮಧ್ಯರಾತ್ರಿಯಾಗುವ ಕಾರಣ ಸೋಮವಾರ (ಜು.20) ಕೇರಳದಾದ್ಯಂತ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ (Kerala School Holiday for FIFA Final) ಘೋಷಿಸಿದೆ.
ಫೈನಲ್​ ಪಂದ್ಯ ಮುಗಿಯಲು ಹೆಚ್ಚು ಕಡಿಮೆ ಬೆಳಗ್ಗಿನ ಜಾವ 3-4 ಆಗುವ ಕಾರಣ, ಮಕ್ಕಳು ನಿದ್ದೆಗೆಟ್ಟು ಪಂದ್ಯ ನೋಡಿದರೆ, ಮರುದಿನ ಶಾಲೆಗೆ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ವಿ.ಡಿ. ಸತೀಶನ್​ ಸರ್ಕಾರ ರಜೆಯನ್ನು ನೀಡಿದೆ.

ಸೋಷಿಯಲ್​ ಮೀಡಿಯಾನಲ್ಲಿ ಒತ್ತಾಯ; ಮಣಿದ ಸರ್ಕಾರ!

ಜು. 19 ರ ಮಧ್ಯರಾತ್ರಿ ಪಂದ್ಯ ಆರಂಭವಾಗುವ ಕಾರಣ ಮಾರನೇ ದಿನ ಶಾಲೆಗೆ ಬರಲು ಕಷ್ಟವಾಗುತ್ತದೆ, ಮುಖ್ಯಮಂತ್ರಿಗಳೇ ದಯವಿಟ್ಟು ರಜೆ ನೀಡಿ ಎಂದು ಕೇರಳದ ಮಕ್ಕಳು ಸೋಷಿಯಲ್ ಮೀಡಿಯಾನಲ್ಲಿ ಮನವಿ ಮಾಡಿದ್ದರು.
ಮಕ್ಕಳ ಮನವಿ ಹಾಗೂ ಕೇರಳದ ಫುಟ್ಬಾಲ್​ ಕ್ರೇಜ್​ ಬಗ್ಗೆ ಗೊತ್ತಿರುವ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್​ ಸೋಮವಾರ ಕೇರಳದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಎಲ್ಲರೂ ಖುಷಿಯಿಂದ ಫಿಫಾ ಫೈನಲ್​ ಮ್ಯಾಚ್​ ನೋಡಿ ಎಂದು ಹೇಳಿದ್ದಾರೆ. ಆದರೆ ಕೇರಳದಲ್ಲಿ ನಡೆಯುತ್ತಿರುವ ಲೋಕಸೇವಾ ಆಯೋಗದ ಪರೀಕ್ಷೆ ಹಾಗೂ ವಿಶ್ವ ವಿದ್ಯಾಲಯದ ಪರೀಕ್ಷೆಗಳಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೆಸ್ಸಿ V/s ಯೆಮಾಲ್​!

ಈ ಭಾರಿಯ ಫಿಫಾ ವಿಶ್ವಕಪ್​ ಅನ್ನು ಅಮೆರಿಕ, ಮೆಕ್ಸಿಕೊ ಹಾಗೂ ಕೆನಡ ದೇಶಗಳು ಜಂಟಿಯಾಗಿ ಆಯೋಜನೆ ಮಾಡಿದ್ದು, ಇಂದು ಮಧ್ಯರಾತ್ರಿ ನಡೆಯಲಿರುವ ಫೈನಲ್​ ಹಣಾಹಣಿಯಲ್ಲಿ ಸ್ಪೇನ್ ಹಾಗೂ ಅರ್ಜೆಂಟೀನಾ ಮುಖಾಮುಖಿ ಆಗಲಿದ್ದು, ಕ್ರೀಡಾಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುತ್ತಿದ್ದಾರೆ.
ಅರ್ಜೆಂಟೀನಾ ತಂಡದ ಸ್ಟಾರ್​ ಆಟಗಾರ ಲಿಯೊನಲ್​ ಮೆಸ್ಸಿ ಮೇಲೆ ಎಲ್ಲರ ಕಣ್ಣಿದ್ದರೆ, ಇತ್ತ ಸ್ಪೇನ್ ತಂಡ ಮತ್ತೊಮ್ಮೆ ಫಿಫಾ ಕಪ್​ ಗೆಲ್ಲಿಸಲು ಲ್ಯಾಮಿನ್ ಯಮಲ್ ಸಿದ್ಧರಾಗಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಫಿಫಾ 2026 ರ ಚಾಂಪಿಯನ್ಸ್​ ಯಾರಾಗುತ್ತಾರೆ? ಎಂದು ಇಂದು ಮಧ್ಯರಾತ್ರಿ ತಿಳಿದು ಬರಲಿದೆ, (ಏಜನ್ಸೀಸ್​).