Kerala Portfolios | ಕೇರಳದಲ್ಲಿ ಖಾತೆ ಹಂಚಿಕೆ ಕಸರತ್ತು ಅಂತ್ಯ
Kerala Portfolios: ಕೇರಳದ ನೂತನ ಮುಖ್ಯಮಂತ್ರಿ ವಿ ಡಿ ಸತೀಶನ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸರ್ಕಾರದಲ್ಲಿ ಸಚಿವರಿಗೆ ಬುಧವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಸಿಎಂ ಸತೀಶನ್ ಹಣಕಾಸು, ಕಾನೂನು, ಸಾಮಾನ್ಯ ಆಡಳಿತ ಮತ್ತು ಬಂದರು ಸೇರಿದಂತೆ ಪ್ರಮುಖ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ಲೋಕ ಭವನದ ಮೂಲಗಳು ತಿಳಿಸಿದೆ.
ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲಗೆ ಅತ್ಯಂತ ಪ್ರಮುಖವಾದ ಗೃಹ ಮತ್ತು ಜಾಗೃತಿ (Vigilance) ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿದ್ದು, ಇದರೊಂದಿಗೆ ಇತರ ಮೂರು ಇಲಾಖೆಗಳನ್ನು ಅವರು ನಿಭಾಯಿಸಲಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಾಯಕ ಪಿ.ಕೆ. ಕುಂಞಾಲಿಕುಟ್ಟಿಗೆ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ (IT) ಮತ್ತು ಜವಳಿ ಸೇರಿದಂತೆ ಒಟ್ಟು ಏಳು ಇಲಾಖೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಕೇರಳ ಕಾಂಗ್ರೆಸ್ ಮುಖ್ಯಸ್ಥ ಸನ್ನಿ ಜೋಸೆಫ್ಗೆ ವಿದ್ಯುತ್ ಮತ್ತು ಪರಿಸರ ಇಲಾಖೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ಗೆ ಆರೋಗ್ಯ ಮತ್ತು ದೇವಸ್ವಂ ಸಚಿವರನ್ನಾಗಿ ಮಾಡಲಾಗಿದೆ.
ಯುವ ನಾಯಕ ರೋಜಿ ಎಂ. ಜಾನ್ ಉನ್ನತ ಶಿಕ್ಷಣ ಇಲಾಖೆಯನ್ನು ಕೈಗೆತ್ತಿಕೊಂಡರೆ, ಎ.ಪಿ. ಅನಿಲ್ ಕುಮಾರ್ ಅವರಿಗೆ ಭೂಮಿ ಮತ್ತು ಕಂದಾಯ ಖಾತೆಯನ್ನು ನೀಡಲಾಗಿದೆ.
ಇನ್ನುಳಿದಂತೆ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಶಾಸಕ ಶಿಬು ಬೇಬಿ ಜಾನ್ ಅವರಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಗಳನ್ನು ನಿಯೋಜಿಸಲಾಗಿದೆ. ಕೇರಳ ಕಾಂಗ್ರೆಸ್ (ಜೋಸೆಫ್) ಶಾಸಕ ಮಾನ್ಸ್ ಜೋಸೆಫ್ ನೀರಾವರಿ, ಅಂತರ್ಜಲ, ನೀರು ಸರಬರಾಜು ಮತ್ತು ನೈರ್ಮಲ್ಯ ಹಾಗೂ ವಸತಿ ಇಲಾಖೆಗಳ ಉಸ್ತುವಾರಿ ವಹಿಸಲಿದ್ದಾರೆ(ಏಜೆನ್ಸೀಸ್).
ಕೇರಳ ಸಚಿವ ಸಂಪುಟದ ಪ್ರಮುಖ ಖಾತೆಗಳ ಪಟ್ಟಿ
ವಿ.ಡಿ. ಸತೀಶನ್ (ಮುಖ್ಯಮಂತ್ರಿ): ಹಣಕಾಸು, ಕಾನೂನು, ಸಾಮಾನ್ಯ ಆಡಳಿತ, ಬಂದರು ಮತ್ತು ಇತರ 31 ಇಲಾಖೆಗಳು.
ರಮೇಶ್ ಚೆನ್ನಿತ್ತಲ: ಗೃಹ, ಜಾಗೃತಿ (ವಿಜಿಲೆನ್ಸ್) ಮತ್ತು ಇತರ ಮೂರು ಇಲಾಖೆಗಳು.
ಪಿ.ಕೆ. ಕುಂಞಾಲಿಕುಟ್ಟಿ: ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಜವಳಿ ಮತ್ತು ಇತರ ನಾಲ್ಕು ಇಲಾಖೆಗಳು.
ಸನ್ನಿ ಜೋಸೆಫ್: ವಿದ್ಯುತ್ ಮತ್ತು ಪರಿಸರ.
ಕೆ. ಮುರಳೀಧರನ್: ಆರೋಗ್ಯ ಮತ್ತು ದೇವಸ್ವಂ.
ರೋಜಿ ಎಂ. ಜಾನ್: ಉನ್ನತ ಶಿಕ್ಷಣ.
ಎ.ಪಿ. ಅನಿಲ್ ಕುಮಾರ್: ಭೂಮಿ ಮತ್ತು ಕಂದಾಯ.
ಶಿಬು ಬೇಬಿ ಜಾನ್: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಕೌಶಲ್ಯಾಭಿವೃದ್ಧಿ.
ಮಾನ್ಸ್ ಜೋಸೆಫ್: ನೀರಾವರಿ, ಅಂತರ್ಜಲ ಮತ್ತು ವಸತಿ.