- ಮೇ.26ರಿಂದಲೇ ಕೇರಳಂಗೆ ಮುಂಗಾರು ಪ್ರವೇಶಿಸುತ್ತದೆ ಎಂದಿದ್ದ ಹವಾಮಾನ ಇಲಾಖೆ
- ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಮುಂಗಾರು ಪ್ರವೇಶ ವಿಳಂಬ
- ಜೂನ್ 2 ಅಥವಾ 4ರಂದು ಮುಂಗಾರು ಪ್ರವೇಶ ಸಾಧ್ಯತೆ ಎಂದ ಐಎಂಡಿ
kerala Monsoon Arrival: ಮೇ.26ರಿಂದಲೇ ಕೇರಳಂಗೆ ಮುಂಗಾರು ಪ್ರವೇಶಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಭಾರತಕ್ಕೆ ಮುಂಗಾರು ಪ್ರವೇಶದಲ್ಲಿ ವಿಳಂಬ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಜೂ.2 ಅಥವಾ4ರಂದು ಪ್ರವೇಶ
ಸಾಮಾನ್ಯವಾಗಿ ಕೇರಳಂಗೆ ಜೂನ್1ರಂದು ಮುಂಗಾರು ಪ್ರವೇಶ ಪಡೆದುಕೊಳ್ಳುತ್ತದೆ. ಆದರೆ, ಈ ಬಾರಿ 6 ದಿನಗಳ ಮುಂಚಿತವಾಗಿಯೇ ಮುಂಗಾರು ಚಂಡ ಮಾರುತಗಳ ಪ್ರವೇಶವಾಗುತ್ತದೆ ಎಂದು ಕೆಲವು ವಾರಗಳ ಹಿಂದೆ ಹವಾಮಾನ ಇಲಾಖೆ ಹೇಳಿತ್ತು. ಆದರೆ, ಇದು ವಿಳಂಬವಾಗಲಿದೆ. ಅಂದರೆ, ಜೂನ್ 2 ಅಥವಾ ನಾಲ್ಕರಂದು ಕೇರಳಂಗೆ ಮಾನ್ಸೂನ್ ಪ್ರವೇಶಿಸಬಹುದು ಎಂದು India Meteorological Department ಹೇಳಿದೆ
ಮುಂಗಾರು ಪ್ರವೇಶದ ಬಗ್ಗೆ ಪತ್ತೆ ಹಚ್ಚೋದು ಹೇಗೆ?
ಮುಂಗಾರು ಪ್ರವೇಶ ಅಥವಾ ವಿಳಂಬದ ಬಗ್ಗೆ ತಿಳಿಯಲು ಹವಾಮಾನ ಇಲಾಖೆ ಪ್ರಮುಖ ಮಾನದಂಡವನ್ನು ಅನುಕರಿಸುತ್ತದೆ. ಕೇರಳಂನಾದ್ಯಂತ ಇರುವ 14 ಹವಾಮಾನ ಕೇಂದ್ರಗಳ ಪೈಕಿ ಶೇ.60ರಷ್ಟು ಕೇಂದ್ರಗಳಲ್ಲಿ 2.5 ಮಿ.ಮೀ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಿರಬೇಕು. ಜೊತೆಗೆ ಮುಂಗಾರು ಆರಂಭವಾಗಲು ಪಶ್ಚಿಮ ದಿಕ್ಕಿನಿಂದ ಬಲವಾದ ಚಂಡಮಾರುತ ಬೀಸುತ್ತಿರಬೇಕು. ಆದರೆ, ಈಗ ಹವಾಮಾನದಲ್ಲಾದ ಬದಲಾವಣೆಗಳು ಈ ಮಾನದಂಡಕ್ಕೆ ಹೊಂದಾಣಿಕೆಯಾಗದ ಕಾರಣ ಮುಂಗಾರು ವಿಳಂಬದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕೇರಳಂನಲ್ಲಿ ಮುಗಾರು ಪ್ರವೇಶವಾಗದಿದ್ದರೂ ಸಹ ಕೊಲ್ಲಂ, ಅಳಪ್ಪುಳ, ಎರ್ನಾಕುಳನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಎಲ್ ನಿನೊ ಆತಂಕ
ಈ ಬಾರಿ ಕೇರಳಂಗೆ ಮುಂಗಾರು ಪ್ರವೇಶ ವಿಳಂಬವಾಗಿರುವ ಕಾರಣ ಹವಾಮಾನ ತಜ್ಞರು 'ಎಲ್ ನಿನೊ' ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾರಿ ಎಲ್ ನಿನೊ ಅಲ್ಲ ಸೂಪರ್ ಎಲ್ ನಿನೊ ಇರಲಿದೆ ಎನ್ನಾಗಿದೆ. ಜೂನ್ನಿಂದ ಸೆಪ್ಟೆಂಬರ್ವರಗೆ ಪ್ರತಿ ಬಾರಿಯೂ ಸುರಿಯುವ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂದು ಹೇಳಿದೆ. ಇದರಿಂದ ಮಳೆ ನಂಬಿಕೊಂಡಿರುವ ರೈತರಿಗೆ ಸಮಸ್ಯೆಯುಂಟಾಗಬಹುದು ಎನ್ನಲಾಗಿದೆ, (ಏಜೆನ್ಸೀಸ್).