India Witkin ಚಿತ್ರ Instagram
ಕೊಚ್ಚಿ: ಪ್ರಯಾಣದ ಅಪಘಾತಗಳು ಸಾಮಾನ್ಯವಾಗಿ ಜನರು ತಮ್ಮ ಪ್ರವಾಸ ಮುಗಿದ ನಂತರವೂ ಬಹಳ ಕಾಲ ನೆನಪಿಸಿಕೊಳ್ಳುವ ರೋಚಕ ಅಥವಾ ಬೇಸರದ ಕಥೆಗಳಾಗಿರುತ್ತವೆ. ಕಳೆದುಹೋದ ಸಾಮಾನುಗಳು, ತಪ್ಪಿದ ರೈಲುಗಳು ಮತ್ತು ಕಳೆದುಹೋದ ಬೆಲೆಬಾಳುವ ವಸ್ತುಗಳು ಒಂದು ಸುಂದರ ಕನಸಿನ ರಜಾದಿನವನ್ನು ಕ್ಷಣಾರ್ಧದಲ್ಲಿ ತೀವ್ರ ಒತ್ತಡದ ಅನುಭವವಾಗಿ ಪರಿವರ್ತಿಸಬಹುದು.
ಇತ್ತೀಚೆಗೆ ಸಾಕ್ಷ್ಯಚಿತ್ರ ನಿರ್ಮಾಪಕಿ ಇಂಡಿಯಾ ವಿಟ್ಕಿನ್ ಅವರ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆಯಿತು. ಕೇರಳದ ಪ್ರವಾಸದಲ್ಲಿದ್ದಾಗ ಅವರು ತಮ್ಮ ಡೆಬಿಟ್ ಕಾರ್ಡ್ ಅನ್ನು ಮರೆತು ಬಂದಿದ್ದು, ಅದು ಅವರ ಪಾಲಿಗೆ ದೊಡ್ಡ ಪ್ರಯಾಣದ ದುಃಸ್ವಪ್ನವಾಗಿ ಪರಿಣಮಿಸಬಹುದಾಗಿತ್ತು. ಆದರೆ, ಭಾರತೀಯರ ಆತಿಥ್ಯ ಮತ್ತು ಅವರ ಪ್ರಾಮಾಣಿಕತೆ ಆ ಕಹಿ ಘಟನೆಯನ್ನು ಅದ್ಭುತ ನೆನಪಾಗಿ ಬದಲಾಯಿಸಿತು.
ಘಟನೆ ಹಿನ್ನಲೆ ಏನು?
ವಿಟ್ಕಿನ್ ಭಾರತದ ಪ್ರಕೃತಿ ಸೌಂದರ್ಯವನ್ನು ಸವಿಯಲು ಮತ್ತು ಸಾಕ್ಷ್ಯಚಿತ್ರದ ಕೆಲಸಗಳಿಗಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಒಂದು ಹಳ್ಳಿಯ ಎಟಿಎಂನಲ್ಲಿ ತಮ್ಮ ಡೆಬಿಟ್ ಕಾರ್ಡ್ನ್ನು ಮರೆತಿದ್ದರು. ಸುಮಾರು ಐದು ಗಂಟೆಗಳ ಪ್ರಯಾಣದ ನಂತರ ಕಾರ್ಡ್ ಮರೆತಿರುವುದನ್ನು ಕಂಡುಕೊಂಡಿದ್ದು, ಅವರನ್ನು ಆತಂಕಕ್ಕೆ ದೂಡಿತು. ಅಂದು ಭಾನುವಾರವಾದ್ದರಿಂದ ಸಾಗಣೆ ಮತ್ತು ಬದಲಿಗಾಗಿ ಆಯ್ಕೆಗಳನ್ನು ತೀವ್ರವಾಗಿ ಸೀಮಿತುಗೊಳಿಸಿತು.
ಆಕಸ್ಮಿಕ ಸಂಪರ್ಕವೇ ಆಪತ್ಬಾಂಧವ!
ಆ ದಿನದ ಆರಂಭದಲ್ಲಿ, ವಿಟ್ಕಿನ್ ಅಮೆರಿಕಕ್ಕೆ ಕೆಲವು ವಸ್ತುಗಳನ್ನು ಪಾರ್ಸಲ್ ಮಾಡಿ ಕಳುಹಿಸುವ ಸಲುವಾಗಿ ಅವರು ಸ್ಥಳೀಯ DHL ಕಚೇರಿಗೆ ಭೇಟಿ ನೀಡಿದ್ದರು. ನಂತರ ಅವರು ಅಲ್ಲಿನ DHL ಉದ್ಯೋಗಿ ತಮ್ಮ ಸಂಪರ್ಕ ವಿವರಗಳನ್ನು ವಾಟ್ಸಾಪ್ ಮೂಲಕ ವಿನಿಮಯ ಮಾಡಿಕೊಂಡಿದ್ದರು. ಆಗ ಕೇವಲ ವ್ಯವಹಾರದ ಉದ್ದೇಶಕ್ಕಾಗಿ ನಡೆದ ಈ ನಂಬರ್ ವಿನಿಮಯ, ಮುಂದೆ ಅವರ ಪಾಲಿಗೆ ವರದಾನವಾಗುತ್ತದೆ ಎಂದು ಅವರು ಊಹಿಸಿರಲಿಲ್ಲ.
ಮುಂದೆ ನಡೆದದ್ದೇ ಆಶ್ಚರ್ಯ
ವಿಟ್ಕಿನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ 24 ಗಂಟೆಗಳ ನಂತರವೂ ಕಾರ್ಡ್ ಎಟಿಎಂ ಯಂತ್ರದ ಮೇಲೆಯೇ ಇತ್ತು ಎಂದರೆ ಇದು ನಿಜಕ್ಕೂ ಒಂದು ಪವಾಡದಂತೆ ಭಾಸವಾಯಿತು ಎಂದು ಹೇಳಿದರು. ಆದಾಗ್ಯೂ, ಕಾರ್ಡ್ ಹುಡುಕುವ ಸಮಸ್ಯೆ ಏನೋ ಬಗೆಹರಿಯಿತು. ಆದರೆ, ಇನ್ನೊಂದು ಸಮಸ್ಯೆ ಹಾಗೆಯೇ ಉಳಿಯಿತು. ಅವರು ಭಾರತದಿಂದ ಹೊರಡುವ ಮೊದಲು ಅವರಿಗೆ ಹೇಗೆ ತಲುಪಿಸಬೇಕೆಂಬುದು.
ಭಾನುವಾರವಾದುದ್ದರಿಂದ ಸಾಗಣೆ ಸ್ವಲ್ಪ ಕಷ್ಟಕರವಾಗಿತ್ತು ಜೊತೆಗೆ ಸಮಯ ಕೂಡಾ ಮೀರುತ್ತಿತ್ತು. ನಂತರ ಸಂಜೆ ವೇಳೆಗೆ ಅವರಿಗೆ ಒಂದು ಫೋನ್ ಕರೆ ಬಂದಿತು. ಕರೆಯಲ್ಲಿ ಮಾತನಾಡಿದ ಉದ್ಯೋಗಿ ತಾನು ವಿಟ್ಕಿನ್ ಇರುವ ಜಾಗಕ್ಕೆ ತಲುಪಿರುವುದಾಗಿ ತಿಳಿಸಿದರು. ಆದಾಗ್ಯೂ, ಅವರು ಕಾರ್ಡ್ ಕೊಡುವ ಸಲುವಾಗಿ ಸರಿಸುಮಾರು 14 ಗಂಟೆಗಳ ಸುತ್ತಿನ ಪ್ರವಾಸವನ್ನು ತೆಗದುಕೊಂಡಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಅವನ ಹೆಸರು ಕೃಷ್ಣ
ಆ ವ್ಯಕ್ತಿಯ ಶ್ರಮಕ್ಕೆ ಪರಿಹಾರ ನೀಡಲು ತಾನು ಪ್ರಯತ್ನಿಸಿದೆ. ಆದರೆ, ವಿಟ್ಕಿನ್ ಅದನ್ನು ನಿರಾಕರಿಸಿದರು. ಆದಾಗ್ಯೀ, ಅವಳು ಕಡಿಮೆ ಹಣದಲ್ಲಿ ಪ್ರಯಾಣ ಬೆಳೆಸುತ್ತಿರುವುದರಿಂದ ಅವರಿಗೆ ಹಣವನ್ನು ಇಟ್ಟುಕೊಳ್ಳಲು ತಿಳಿಸಿದರು ಎಂದು ಹೇಳಿದ್ದಾರೆ.
ಆದಾಗ್ಯೂ, ಈ ಕಥೆಯು ಒಂದು ವಿವರಣೆಯಿಂದಾಗಿ ಮತ್ತಷ್ಟು ಗಮನ ಸೆಳೆಯಿತು. ಕಾರ್ಡ್ ಹಿಂತಿರುಗಿಸಿದ ವ್ಯಕ್ತಿಯ ಹೆಸರು ಕೃಷ್ಣ. ಹಿಂದೂ ಧರ್ಮದಲ್ಲಿ ಕೃಷ್ಣನನ್ನು ದೇವತೆಯಾಗಿ ನೋಡಲಾಗುತ್ತದೆ. ಪ್ರೀತಿ, ಕರುಣೆ ಮತ್ತು ರಕ್ಷಣೆಗೆ ಹೆಸರುವಾಸಿಯಾಗಿದೆ ಎಂದು ವಿಟ್ಕಿನ್ ಹೇಳಿದರು (ಏಜೆನ್ಸೀಸ್).