Kerala man falls asleep inside car on busy road, locals shake vehicle to wake him up 
ದೇಶ

ಅಬ್ಬಾ, ಎಂಥ ನಿದ್ರೆ!: ಕುಡಿದು, ರಸ್ತೆ ಮಧ್ಯೆ ಕಾರು ನಿಲ್ಲಿಸಿ ನಿದ್ದೆ ಮಾಡಿದ ಕೇರಳ ವ್ಯಕ್ತಿ ಅರೆಸ್ಟ್!..Kerala

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಮಧ್ಯೆ ಕಾರು ನಿಲ್ಲಿಸಿ ನಿದ್ರೆ ಮಾಡಿದ ಚಾಲಕ, ಟ್ರಾಫಿಕ್ ಹೆಚ್ಚಳ
  • ಎಟ್ಟುಮನೂರ್-ಅತಿರಂಪುಳ ರಸ್ತೆಯಲ್ಲಿರುವ ಚರ್ಚ್​ ಬಳಿ ಘಟನೆ
  • ಕುಡಿದು ಮಲಗಿದ್ದ ಆತನ್ನು ಪೊಲೀಸರು ವಶಕ್ಕೆ ಪಡೆಸಿಕೊಂಡರು ಎನ್ನಲಾಗಿದೆ.
ತಿರುವನಂತಪುರಂ:  ಕೇರಳದ ಚರ್ಚ್​ ಮೈದಾನದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ನಿದ್ರೆ ಮಾಡಿ, ಇತರ ವಾಹನ ಸವಾರರಿಗೆ ಸಮಸ್ಯೆಯನ್ನುಂಟು ಮಾಡಿದ ವಿಡಿಯೋ ವೈರಲ್ ಆಗಿದೆ.  ಚಿಂತೆ ಇಲ್ಲದೋನಿಗೆ ಸಂತೆಯಲ್ಲೂ ನಿದ್ದೆ, ಅಬ್ಬಾ ಎಂಥ ನಿದ್ರೆ ಇದು ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಲೇವಡಿ ಮಾಡುತ್ತಿದ್ದಾರೆ. 
ಆಗಸ್ಟ್​​.19ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಟ್ಟುಮನೂರ್-ಅತಿರಂಪುಳ ರಸ್ತೆಯಲ್ಲಿರುವ ಚರ್ಚ್ ಮೈದಾನದ ಬಳಿ ವ್ಯಕ್ತಿಯೊಬ್ಬ ತನ್ನ ವಾಹನವನ್ನು ರಸ್ತೆಯ ಮಧ್ಯೆ ನಿಲ್ಲಿಸಿ ಗಾಢ ನಿದ್ರೆಗೆ ಜಾರಿದ್ದಾನೆ. ಆ ದೃಶ್ಯದ  ವೀಡಿಯೊವನ್ನು ಎಕ್ಸ್ ಬಳಕೆದಾರ ಇನ್ ದಿ ಲೂಪ್ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಕೆಂಪು ಸುಜುಕಿ ಕಾರು ರಸ್ತೆ ಮಧ್ಯೆ ಇದೆ. ಸುತ್ತಲೂ ಜನರು ನೆರೆದಿದ್ದು, ಅವರನ್ನು ಎಬ್ಬಿಸುವ ಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾರನ್ನು ಅಲಗಾಡಿಸಿದರೂ ಹುಹು ಅಸ್ಸಾಮಿ ಎದ್ದೇ ಇಲ್ಲ, ಕೆಲವರು ಕಿಟಕಿ ಬಡಿಯುತ್ತಿರುವುದು ದೃಶ್ಯದಲ್ಲಿ ಇದೆ.

ಇನ್ ದಿ ಲೂಪ್  ಬರೆದುಕೊಂಡಿದ್ದು ಹೀಗೆ..


ಎಟ್ಟುಮನೂರ್-ಅತಿರಂಪುಳ ರಸ್ತೆಯಲ್ಲಿರುವ ಚರ್ಚ್ ಮೈದಾನದ ಬಳಿ ವ್ಯಕ್ತಿಯೊಬ್ಬ ತನ್ನ ವಾಹನವನ್ನು ರಸ್ತೆಯ ಮಧ್ಯೆ ನಿಲ್ಲಿಸಿ ನಿದ್ರೆ ಮಾಡಿದ್ದಾನೆ. ಸದಾ ಬ್ಯುಸಿಯಾದ ರಸ್ತೆಯಲ್ಲಿ ಕಾರು ಸಂಚಾರಕ್ಕೆ ಅಡ್ಡಿಯಾಗಿರುವುದನ್ನು ಕಂಡು, ಚಾಲಕನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಪ್ರಜ್ಞೆ ತಪ್ಪಿರಬಹುದು ಎಂದು ಸ್ಥಳೀಯರು ಮೊದಲು ಭಾವಿಸಿದ್ದರು. ಆದರೆ ಎಟ್ಟುಮನೂರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ, ಚಾಲಕ ಮದ್ಯಪಾನ ಮಾಡಿ ನಿದ್ರೆಗೆ ಜಾರಿರುವುದು ತಿಳಿದುಬಂದಿದೆ.ಚಾಲಕ ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು ಎಂದಿದ್ದಾರೆ. 
ನಾನು ಅವರಂತೆ ಮಲಗಬೇಕೆಂದು ನನಗೆ ಹಾರೈಸಿ..ಯಾವುದೇ ಶಬ್ಧಗಳಿಲ್ಲದೆ ಮಲಗಿ ವರ್ಷಗಳೇ ಕಳೆದುಹೋದವರು ಎಂದು  ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಷಣ್ಮುಖಂ ಸುಂದರಂ ಎನ್ನುವವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಒಮ್ಮೆ ನನಗೂ ಹೀಗಾಗಿತ್ತು. ನನ್ನ ಹೆತ್ತವರು ಬಹಳ ಹೊತ್ತು ಬಾಗಿಲು ತಟ್ಟುತ್ತಿದ್ದರು, ಆದರೆ ನಾನು ಅದರೊಳಗೆ ಮಲಗಿಬಿಟ್ಟಿದ್ದೆ. ಸಾಮಾನ್ಯವಾಗಿ, ನಾನು ಸೂಕ್ಷ್ಮವಾಗಿ ಶಬ್ಧವಾದರೂ ಎಚ್ಚರಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಅವರು ಕುಂಭಕರ್ಣನಾ? ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).