100 ಸ್ಥಾನ ದಾಟಿದ ಯುಡಿಎಫ್!
ಕೇರಳ: ಇಂದು (ಮೇ.4) ಭಾರತದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೇರಳದ 140 ವಿಧಾನಸಭಾ ಕ್ಷೇತ್ರಗಳ (Kerala Election Results) ಭವಿಷ್ಯ ಇವತ್ತೇ ಹೊರಬೀಳಲಿದೆ.
100 ಸ್ಥಾನ ದಾಟಿದ ಯುಡಿಎಫ್!
ಈ ಭಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿಕೂಟ ಮತ ಎಣಿಕೆಯಲ್ಲಿ 103 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸುವತ್ತ ಮುನ್ನುಗುತ್ತಿದೆ.
ಮುನ್ನಡೆ ಪಡೆದ ಸಿಎಂ ಪಿಣರಾಯಿ!
ಕೇರಳದ ಮುಖ್ಯಮಂತ್ರಿ ಹಾಗೂ ಧರ್ಮದಂ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿಣರಾಯಿ ವಿಜಯನ್ ಮತ ಎಣಿಕೆಯ ಎರಡನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಈಗ ಆರಂಭಿಕ ಹಿನ್ನಡೆ ತರುವಾಯ 1,536 ಮತಗಳ ಮುನ್ನಡೆ ಪಡೆದಿದ್ದಾರೆ.
ರಾಜೀವ್ ಚಂದ್ರಶೇಖರ್ಗೆ 3,000 ಮತಗಳ ಮುನ್ನಡೆ
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಬಹುಮತದ ಹತ್ತಿರ ತಲುಪಿದೆ. ಕೇರಳದ ಪರ ಬಿಜೆಪಿಯ ಏಕೈಕ ಮುನ್ನಡೆ ಕಾಯ್ದುಕೊಂಡಿರುವ ರಾಜೀವ್ ಚಂದ್ರಶೇಖರ್ ನಿಮೊಮ್ನಲ್ಲಿ ಸಿಪಿಎಮ್ನ ಶಿವಕುಟ್ಟಿ ವಿರುದ್ಧ 3,000 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ನಿರೀಕ್ಷೆಗೆ ಮೀರಿದ ಸಾಧನೆ: ಶಶಿ ತರೂರ್
ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ಲೋಕಸಭಾ ಸಂಸದ ಶಶಿ ತರೂರ್ (Shashi Tharoor on Kerala Election), ಈ ಭಾರಿ ಕೇರಳದ ಜನ ಬದಲಾವಣೆಯನ್ನು ಬಯಸಿದ್ದರು, ನಾವು ಮತ್ತು ಯುಡಿಎಫ್ ತುಂಬಾ ಪ್ರಯತ್ನ ಪಟ್ಟಿದ್ದೆವು. ಆದರೆ ಇದು ನಿರೀಕ್ಷಗೆ ಮೀರಿದ ಹಾಗೆ ಸಂಖ್ಯೆಗಳು ಕಾಣಿಸುತ್ತಿವೆ, ನನಗೆ ವೈಯಕ್ತಿಕವಾಗಿ ಸಂತಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆ
ಈ ಭಾರಿ 140 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯುಡಿಎಫ್ 103 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ವಿಜಯನ್ ನೇತೃತ್ವದ ಎಲ್ಡಿಎಫ್ 35 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎನ್ಡಿಎ ಹಾಗೂ ಇತರೆ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆಲ್ಲುವ ಪಕ್ಷ ಸರ್ಕಾರ ರಚಿಸಲಿದ್ದು, ಯುಡಿಎಫ್ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಹಿನ್ನಲೆ ಗೆಲುವು ಬಹುತೇಕ ಖಚಿತವಾಗಿದೆ, (ಏಜನ್ಸೀಸ್).