ಕೇರಳ ಚುನಾವಣೆ ಕುರಿತು ಶಶಿ ತರೂರ್
ಕೇರಳ: ಇಂದು (ಮೇ.4) ಭಾರತದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೇರಳದ 140 ವಿಧಾನಸಭಾ ಕ್ಷೇತ್ರಗಳ (Kerala Election Results) ಭವಿಷ್ಯ ಇವತ್ತೇ ಹೊರಬೀಳಲಿದೆ.
ಇಲ್ಲಿವರೆಗೆ ನಡೆದಿರುವ ಮತ ಎಣಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿ 96 ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದು, ಮತ ಎಣಿಕೆ ಪ್ರವೃತ್ತಿ ಹೀಗೆ ಮುಂದುವರಿದರೆ ಯುಎಡಿಎಫ್ ಸರ್ಕಾರ ರಚಿಸುವ ಲಕ್ಷಣ ಕಂಡು ಬರುತ್ತಿದೆ.
ನಿರೀಕ್ಷೆಗೆ ಮೀರಿದ ಸಾಧನೆ: ಶಶಿ ತರೂರ್
ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ಲೋಕಸಭಾ ಸಂಸದ ಶಶಿ ತರೂರ್ (Shashi Tharoor on Kerala Election), ಈ ಭಾರಿ ಕೇರಳದ ಜನ ಬದಲಾವಣೆಯನ್ನು ಬಯಸಿದ್ದರು, ನಾವು ಮತ್ತು ಯುಡಿಎಫ್ ತುಂಬಾ ಪ್ರಯತ್ನ ಪಟ್ಟಿದ್ದೆವು. ಆದರೆ ಇದು ನಿರೀಕ್ಷಗೆ ಮೀರಿದ ಹಾಗೆ ಸಂಖ್ಯೆಗಳು ಕಾಣಿಸುತ್ತಿವೆ, ನನಗೆ ವೈಯಕ್ತಿಕವಾಗಿ ಸಂತಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್).