ಸೋತರೆ 1 ಕೋಟಿ ಕೊಡ್ತೀನಿ ಎಂದಿದ್ದ ಜಾರ್ಜ್​ಗೆ ಆರಂಭಿಕ ಹಿನ್ನಡೆ 
ದೇಶ

ಕೇರಳಾ ಚುನಾವಣಾ ಫಲಿತಾಂಶ: ಸೋತರೆ 1 ಕೋಟಿ ಕೊಡ್ತೀನಿ ಎಂದಿದ್ದ ಜಾರ್ಜ್​ಗೆ ಆರಂಭಿಕ ಹಿನ್ನಡೆ; ಪೂಂಜಾರ್‌ನಲ್ಲಿ ಬಿಜೆಪಿ ನಾಯಕನ ಹಿಮ್ಮುಖ ಚಲನೆ!Kerala Election Results

ಕೇರಳ: ಇಂದು (ಮೇ.4) ಭಾರತದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೇರಳದ 140 ವಿಧಾನಸಭಾ ಕ್ಷೇತ್ರಗಳ (Kerala Election Results) ಭವಿಷ್ಯ ಇವತ್ತೇ ಹೊರಬೀಳಲಿದೆ.
ಕೇರಳದ ಪೂಂಜಾರ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಾರತೀಯ ಜನತಾ ಪಕ್ಷದ ಪಿ.ಸಿ. ಜಾರ್ಜ್ ಈ ಭಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ತೋರಿಸಿತ್ತು, ಒಂದು ವೇಳೆ ಸೋತರೆ 1 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.
ನಾನು ಈ ಸಲ ಪೂಂಜಾರ್​ನಲ್ಲಿ ಗೆದ್ದೆ ಗೆಲ್ಲುತ್ತೇನೆ ಯಾರಿಗಾದರೂ ಅನುಮಾನವಿದ್ದರೆ, ನನ್ನಲ್ಲಿ ಪಂಥಕಟ್ಟಲಿ, ಸೋತರೆ ನಾನು 1 ಕೋಟಿ ನೀಡಲು ಸಿದ್ಧನಿದ್ದೆನೆ ಎಂದು ಪಿ.ಸಿ. ಜಾರ್ಜ್ ಹೇಳಿದ್ದಾರೆ.

ಜಾರ್ಜ್​ಗೆ ಆರಭಿಕ ಹಿನ್ನಡೆ

ಕೇರಳದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಪೂಜಾಂರ್​ನಲ್ಲಿ ಪಿ.ಸಿ. ಜಾರ್ಜ್ ಆರಂಭಿಕ ಹಿನ್ನಡೆಯನ್ನು ಅನುಭವಿಸಿದ್ದು, ಕಾಂಗ್ರೆಸ್​ನ ಅಡ್ವೊ.ಸೆಬಾಸ್ಟಿಯನ್ ಎಂ.ಜೆ. 62 ಮತಗಳ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ಯಾರು ಈ ಪಿ.ಸಿ. ಜಾರ್ಜ?

ಪಿ.ಸಿ. ಜಾರ್ಜ್ (Plathottathil Chacko George) ಕೇರಳ ರಾಜಕಾರಣದ ಅತ್ಯಂತ ಪ್ರಭಾವಿ ಮತ್ತು ಹಿರಿಯ ನಾಯಕರಲ್ಲಿ ಒಬ್ಬರು. ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿರುವ ಇವರು, ಕೊಟ್ಟಾಯಂ ಜಿಲ್ಲೆಯ ಪೂಂಜಾರ್​ (Poonjar) ವಿಧಾನಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾದ ದಾಖಲೆ ಹೊಂದಿದ್ದಾರೆ.
ವಿದ್ಯಾರ್ಥಿ ಚಳವಳಿಯ ಮೂಲಕ ರಾಜಕೀಯ ಪ್ರವೇಶಿಸಿದ ಇವರು, ಸುಮಾರು 33 ವರ್ಷಗಳ ಕಾಲ ಕೇರಳ ವಿಧಾನಸಭೆಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 2011 ರಿಂದ 2015 ರವರೆಗೆ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ (UDF) ಸರ್ಕಾರದಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿ (Chief Whip) ಕಾರ್ಯನಿರ್ವಹಿಸಿದ್ದರು, (ಏಜನ್ಸೀಸ್​).