VD Satheesan On Pinarayi Vijayan ED Raid
ತಿರುವನಂತಪುರಂ: ಇತ್ತೀಚೆಗೆ ಕೇರಳಂನ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಬಾಡಿಗೆ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಹಸ್ಯ ಒಪ್ಪಂದದ ಭಾಗವಾಗಿದೆ ಎಂದು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಆರೋಪಿಸಿತ್ತು. ಈ ಬಗ್ಗೆ ಸಿಎಂ ವಿಡಿ ಸತೀಶನ್ ಹಾಸ್ಯಸ್ಪದವಾಗಿ ಉತ್ತರ ಕೊಟ್ಟಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಿಣಯರಾಯಿ ವಿಜಯನ್ ಅವರ ನಿವಾಸದ ಮೇಲೆ ರೇಡ್ ಆಗುವ ಒಂದು ದಿನದ ಮೊದಲು ಕೇರಳಂನ ಸಿಎಂ ವಿಡಿ ಸತೀಶನ್ ಅವರು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಇದನ್ನೇ ಗುರಿಯಾಗಿಸಿಕೊಂಡ ಸಿಪಿಎಂನ ನಾಯಕರು. ಪ್ರಧಾನಿ ನರೇಂದ್ರ ಮೋದಿ ಭೇಟಿಯ ಸಮಯದಲ್ಲಿ ED ದಾಳಿಗೆ ಮುಂಚಿತವಾಗಿಯೇ ಯೋಜನೆ ರೂಪಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಈ ಹೇಳಿಕೆ ಉಲ್ಲೇಖಿಸಿ ವಿಡಿ ಸತೀಶನ್ ಮಾತನಾಡಿದ್ದು ಹೀಗೆ.
ವಿಡಿ ಸತೀಶನ್ ಲೇವಡಿ ಮಾಡಿದ್ದು ಹೀಗೆ
ಮಾಜಿ ಸಚಿವರು ಸೇರಿದಂತೆ ಸಿಪಿಎಂನ ಹಿರಿಯ ನಾಯಕರು ನನ್ನ ಕೋರಿಕೆಯ ಮೇರೆಗೆ ಪ್ರಧಾನಿ ಮೋದಿ ಅವರು ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದ್ದಾರೆ ಎಂದು ಹೇಳುತ್ತಿರುವುದು ಒಂದು ಜೋಕ್ ನಂತೆ ಕಾಣುತ್ತಿದೆ.
'ಪ್ರಧಾನಿ ಮೋದಿಗೆ ಕರೆ ಮಾಡಿ ನಾನು ಪ್ರಧಾನಿಗೆ ವಿಜಯನ್ ಅವರ ಮನೆ ಮೇಲೆ ದಾಳಿ ನಡೆಸಬೇಕೆಂದು ಹೇಳಿದ ತಕ್ಷಣ, ಪ್ರಧಾನಿ ಸಂಬಂಧಪಟ್ಟವರಿಗೆ ಕರೆ ಮಾಡಿ ಕೇರಳದ ಹೊಸ ಮುಖ್ಯಮಂತ್ರಿ ವಿಡಿ ಸತೀಶನ್ ಹೇಳ್ತಿದ್ದಾರೆ ವಿಜಯನ್ ಅವರ ನಿವಾಸದ ಮೇಲೆ ರೇಡ್ ಮಾಡಿ ಎಂದು ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಿ ಎಂದರು. ಆ ನಂತರ ನಾನು ಮತ್ತೆ ಕರೆ ಮಾಡಿ, ಒಂದಲ್ಲ 12 ಪ್ರದೇಶದಲ್ಲಿ ರೇಡ್ ಮಾಡಿ ಎಂದೆ, ಅವರು ಮತ್ತೆ ಇಡಿ ಅಧಿಕಾರಿಗಳಿಗೆ ಕರೆ ಮಾಡಿ ಸತೀಶನ್ ಹೇಳ್ತಿದ್ದಾರೆ 12 ಪ್ರದೇಶದ ಮೇಲೆ ರೇಡ್ ಮಾಡಿ ಎಂದು ಹೇಳಿದರು'.
'ನಾನು ಪ್ರಧಾನಿಯವರನ್ನು ವಿಜಯನ್ ಅವರ ಮನೆ ಮೇಲೆ ದಾಳಿ ನಡೆಸಿ ಎಂದು ಹೇಳಿದ ತಕ್ಷಣ, ಪ್ರಧಾನಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಕೇರಳದ ಹೊಸ ಮುಖ್ಯಮಂತ್ರಿಗಳು ಹೀಗೆ ಬಯಸಿದ್ದಾರೆ, ಆದ್ದರಿಂದ ದಾಳಿ ನಡೆಸಿ ಎಂದು ಹೇಳುತ್ತಾರೆ ಎಂದು ಸಿಪಿಎಂ ನಾಯಕರು ಭಾವಿಸಿದ್ದಾರೆಯೇ?' ಎಂದು ಸತೀಶನ್ ಪ್ರಶ್ನಿಸಿದ್ದಾರೆ.
ED ಅಧಿಕಾರಿಗಳ ಮೇಲೆ ಹಲ್ಲೆ
ಇ.ಡಿ ದಾಳಿಯ ಸಂದರ್ಭದಲ್ಲಿ ತನಿಖಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇಡಿ ರೇಡ್ಗೆ ಕಾರಣವೇನು?
ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರ ಕಂಪನಿ ಭಾಗಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ವಿಜಯನ್ ಅವರ ತಿರುವನಂತಪುರಂ ಮತ್ತು ಕಣ್ಣೂರಿನ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು,( ಏಜೆನ್ಸೀಸ್).