Kerala Posters Target Rahul 
ದೇಶ

'ನಿಮ್ಮ​​ನ್ನು ಕೇರಳ ಕ್ಷಮಿಸಲ್ಲ, ಮತ್ತೆ ಚುನಾವಣೆಯಲ್ಲಿ ಗೆಲ್ಲಲ್ಲ'; ಸಿಎಂ ಆಯ್ಕೆ ವಿಳಂಬ ಬೆನ್ನಲ್ಲೇ ರಾಹುಲ್​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​ ಪ್ರೊಟೆಸ್ಟ್..Kerala

ತಿರುವನಂತಪುರಂ: 'ಮಿಸ್ಟರ್​ ರಾಹುಲ್​ ಮತ್ತು ಪ್ರಿಯಾಂಕಾ ಗಾಂಧಿಯವರೇ ಇನ್ನು ವಯನಾಡನ್ನು ನೀವು ಮರೆತು ಬಿಡಿ. ಏಕೆಂದರೆ ನೀವು ಇಲ್ಲಿಂದ  ಎಲೆಕ್ಷನ್​ಗೆ ನಿಂತರೆ ಮತ್ತೆಂದು ಗೆಲ್ಲೋದಿಲ್ಲ. ರಾಹುಲ್​ ಗಾಂಧಿಯವರೇ ಕೆಸಿ ವೇಣುಗೋಪಾಲ್​ ಅವರು ನಿಮ್ಮ ಬಿಗ್​ ಬ್ಯಾರರ್(ಬ್ಯಾಗ್​ ಹೊರುವವರು) ಆಗಿರಬಹುದು. ಆದರೆ, ನಿಮ್ಮನ್ನು ಕೇರಳದ ಜನರು ಎಂದಿಗೂ ಕ್ಷಮಿಸೋದಿಲ್ಲ' ಎನ್ನುವ ಪೋಸ್ಟರ್​ಗಳು ವಯನಾಡಿನ ಕಾಂಗ್ರೆಸ್​ ಕಚೇರಿ ಮುಂದೆ ರಾರಾಜಿಸುತ್ತಿದೆ.
ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಒಂದು ವಾರ ಕಳೆದರೂ ಸಹ ಕಾಂಗ್ರೆಸ್​ ಹೈಕಮಾಂಡ್​ ಇನ್ನು ಯಾರನ್ನು ಸಿಎಂ ಕುರ್ಚಗೆ ಕೂರಿಸಬೇಕು ಎನ್ನುವ ಇಕ್ಕಟ್ಟಿನಲ್ಲಿದೆ. ಆ ಬೆನ್ನಲ್ಲೇ ವಯನಾಡು ಕಾಂಗ್ರೆಸ್ ಜಿಲ್ಲಾ ಸಮಿತಿ​  ಕಚೇರಿ ಬಳಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್​ ಗಾಂಧಿ ವಿರುದ್ಧ ಪೋಸ್ಟರ್​ಗಳು ರಾರಾಜಿಸುತ್ತಿದೆ.

ಪೋಸ್ಟರ್​ ಪ್ರೊಟೆಸ್ಟ್

ವಯನಾಡಿನಲ್ಲಿ ಒಟ್ಟು ಮೂರ್ನಾಲ್ಕು ಪೋಸ್ಟರ್​ ಅಂಟಿಸಲಾಗಿದ್ದು ಅದರಲ್ಲಿ ಹೀಗಿದೆ, 'ವಯನಾಡನ್ನು ಮರೆತು ಬಿಡಿ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕರನ್ನು ಮತ್ತೆ ಗೆಲ್ಲಿಸೋದಿಲ್ಲ. ಚುನಾವಣೆಗೆ ನಿಲ್ಲಬೇಡಿ ಎಂದು. ಮತ್ತೊಂದರಲ್ಲಿ ಕೆಸಿ ವೇಣುಗೋಪಾಲ್​ ನಿಮ್ಮ ಬ್ಯಾಗ್​ ಹೊರುವವರು ಆಗಿರಬಹುದು ಆದರೆ, ನಿಮ್ಮ ಮೇಲೆ ಇಲ್ಲಿನ ಜನಕ್ಕೆ ಯಾವುದೇ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಮೂರನೇ ಪೋಸ್ಟರ್​ನಲ್ಲಿ ಆರ್​ಜಿ ಮತ್ತು ಪಿಜಿ ಇದು ಎಚ್ಚರಿಕೆ  ಅಲ್ಲ. ಈ ತಪ್ಪಿಗಾಗಿ ನಿಮ್ಮನ್ನು ಎಂದಿಗೂ ಕೇರಳದ  ನಿಮ್ಮ ಬ್ಲಂಡರ್​ ಅನ್ನು ಮರೆಯೋದಿಲ್ಲ. 2019ರಲ್ಲಿ ರಾಹುಲ್​ ಗಾಂಧಿಯವರ ಭದ್ರಕೋಟೆಯಾಗಿದ್ದ ಅಮೇಥಿ ಕ್ಷೇತ್ರವನ್ನು ಸೋತಿದ್ದರು. ಮುಂದಿನ ದಿನದಲ್ಲಿ ಪ್ರಿಯಾಂಕಾ ಗಾಂಧಿಯವರು ವಯನಾಡಿನಲ್ಲಿ ಈ ಸಮಸ್ಯೆ ಎದುರಿಸಬಹುದು'  ಎಂದು ಇಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟರ್​ ಅಂಟಿಸಲಾಗಿದೆ.
ಸಿಎಂ ರೇಸ್​ನಲ್ಲಿರೋದು ಯಾರು?
ಕೇರಳದಲ್ಲಿ ಮುಂದಿನ ಸಿಎಂ ಆಗೋದು ಯಾರು ಎನ್ನುವ ಗೊಂದಲ ಹಲವರಲ್ಲಿ ಹಾಗೆಯೇ ಉಳಿದಿದೆ. ಕಾಂಗ್ರೆಸ್​ ಶಾಸಕರು ಈಗ ಸಿಎಂ ಯಾರೆಂದು ಎಂದು ನಿರ್ಧರಿಸುವ ಹೊಣೆಯನ್ನು ಹೈಕಮಾಂಡ್​ಗೆ ನೀಡಿದೆ. ರೇಸ್​ನಲ್ಲಿ AICC ಪ್ರಧಾನ ಕಾರ್ಯದರ್ಶಿಯಾದ ವೇಣುಗೋಪಾಲ್​ ಅವರಿದ್ದು, ಕಾಂಗ್ತೆಸ್​ ನಾಯ, ವಿಡಿ ಸತೀಸನ್​​ ಹಾಗೂ ಹಿರಿಯ ನಾಯಕ ರಮೇಶ್​ ಚನ್ನಿತ್ತಲ ಇದ್ದಾರೆ. ಮೂವರಲ್ಲಿ ಗದ್ದುಗೆ  ಏರೋದು ಯಾರು ಎನ್ನುವ ಪ್ರಶ್ನೆಯೇ ಇನ್ನು ಉಳಿದಿರುವುದು ಪೋಸ್ಟರ್​​ ಅಂಟಿಸಿರೋರ ಸಿಟ್ಟಿಗೆ ಕಾರಣವಾಗಿರಬಹುದು ಎನ್ನಲಾಗಿದೆ.

ಎಡಪಂಥೀಯ ಪಕ್ಷ ಉರುಳಿಸಿದ ಯುಡಿಎಫ್

 140 ವಿದಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 104 ಸ್ಥಾನವನ್ನು ಯುಡಿಎಫ್​ ಗೆದ್ದುಕೊಂಡಿತ್ತು.  ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ಮಾಡಿದ ಎಡಪಂಥೀಯ ಸರ್ಕಾರವನ್ನು ನಿರ್ಮೂಲನೆ  ಮಾಡಿತ್ತು. ಬಹುಮತ ಸಿಕ್ಕರೂ ಸಿಎಂ ಆಯ್ಕೆಯಲ್ಲಿ ವಿಳಂಬವಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣ ಇರಬಹುದು ಎಂದು ಊಹಿಸಲಾಗಿದೆ. 
ಸಿಎಂ ಆಯ್ಕೆ ವಿಳಂಬವನ್ನು ಬಿಜೆಪಿ ಮತ್ತು ಎಲ್​ಡಿಎಫ್​ ಪಕ್ಷ ಬಳಸಿಕೊಳ್ಳುತ್ತಿದ್ದು, ಫಲಿತಾಂಶ ಹೊರ ಬಿದ್ದು ಹತ್ತು ದಿನ ಕಳೆದರೂ ಸಿಂ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇಂದು ಸಿಎಂ ರೇಸ್​ನಲ್ಲಿದ್ದ ನಾಯಕರು ದೆಹಲಿಗೆ ಭೇಟಿ ಕೊಟ್ಟು ಹೈಕಮಾಂಡ್​ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ, (ಏಜೆನ್ಸೀಸ್).