ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್
ಚಂಡೀಗಢ: ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಆಮ್ ಆದ್ಮಿ ಯಶಸ್ಸಿಗೆ ಮುಖ್ಯಮಂತ್ರಿ ಭಗವಂತ್ ಮಾನ್ ಕಾರಣ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ.
ಈ ಫಲಿತಾಂಶ ಉತ್ತಮ ಆಡಳಿತಕ್ಕೆ ಸಾರ್ವಜನಿಕ ಮುದ್ರೆ ಎಂದಿದ್ದು, ಸಿಎಂ ಮಾನ್ ಜನರಿಗಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಆದ್ದರಿಂದ ಪಂಜಾಬ್‌ನಲ್ಲಿ ಆಡಳಿತ ಪರವಾದ ಅಲೆ ಇದೆ ಎಂದು ಕೇಜ್ರಿವಾಲ್ ಹೇಳಿದರು.
ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಗಳ ಫಲಿತಾಂಶಗಳು ಆಮ್ ಆದ್ಮಿ ಪಕ್ಷವು ಸುಮಾರು 70% ಸ್ಥಾನಗಳೊಂದಿಗೆ ಚುನಾವಣೆಯಲ್ಲಿ ಜಯಗಳಿಸಿದೆ ಎನ್ನುವುದನ್ನು ಇದು ಸೂಚಿಸಲಿದ್ದು, ಒಂದು ದೊಡ್ಡ ವಿಷಯ ಎಂದು ಹೇಳಿದರು. ಮಾನ್ ಸರ್ಕಾರ ಮಾದಕವಸ್ತು ಮಾರಾಟಗಾರರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಿದೆ, ಪಂಜಾಬ್‌ನಲ್ಲಿ ಜನರಿಗೆ ಉದ್ಯೋಗಗಳು ಸಿಗುತ್ತಿವೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ 58,000 ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಇಂದು ರಾಜ್ಯಾದ್ಯಂತ ಸುಮಾರು 1000 ಮೊಹಲ್ಲಾ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸೌಲಭ್ಯದಿಂದ ಜನರು ತುಂಬಾ ಸಂತೋಷಪಟ್ಟಿದ್ದಾರೆ. ಜನವರಿಯಿಂದ ಪ್ರತಿ ಮನೆಗೂ 10 ಲಕ್ಷ ರೂಪಾಯಿ ವಿಮೆ ಸಿಗಲಿದೆ, ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆದಿದ್ದು, ಸಂಪೂರ್ಣ ಪ್ರಕ್ರಿಯೆ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಿದರು.
ಎಎಪಿ ಹೆಜ್ಜೆಗುರುತಿಗೆ ಮಾನ್ ಶ್ಲಾಘನೆ..
ಹಲವಾರು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಎಪಿ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿರುವುದರಿಂದ, ದೇಶಾದ್ಯಂತ ಆಮ್ ಆದ್ಮಿ ಪಕ್ಷದ ಬೇರುಗಳು ಬೆಳೆಯುತ್ತಿವೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು. ಲಭ್ಯವಿರುವ ಫಲಿತಾಂಶಗಳ ಪ್ರಕಾರ, ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ಎಎಪಿ ಮುನ್ನಡೆ ಸಾಧಿಸಿದ್ದು, ಅಂತಿಮ ಫಲಿತಾಂಶಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ(ಏಜೆನ್ಸೀಸ್).