ನೆರೆ ಪರಿಹಾರಕ್ಕೆ ಸಂಬಂಧಿಸಿದ ಹಗರಣದಲ್ಲಿ ಅಮಿತಾ ಸಿಂಗ್ ತೋಮರ್ ಅರೆಸ್ಟ್
- ಜೈಲು ಪಾಲಾದ ಕೆಬಿಸಿ ವಿಜೇತೆ
- ಅಮಿತಾಭ್ ಬಚ್ಚನ್ ಕೈಯಿಂದ 50 ಲಕ್ಷ ಬಹುಮಾನ ಪಡೆದಿದ್ದ ತಹಶೀಲ್ದಾರ್
- ನೆರೆ ಪರಿಹಾರಕ್ಕೆ ಸಂಬಂಧಿಸಿದ ಹಗರಣದಲ್ಲಿ ಅಮಿತಾ ಸಿಂಗ್ ತೋಮರ್ ಅರೆಸ್ಟ್
ಮಧ್ಯಪ್ರದೇಶ: ಜೀವನದಲ್ಲಿ ಹಣವನ್ನು ಗಳಿಸಬೇಕೆನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲಿ ಮೂಡುವ ಸಹಜ ಆಸೆಯಾಗಿದೆ. ಆದರೆ ಈ ಆಸೆಯನ್ನು ಇಡೇರಿಸಿಕೊಳ್ಳಲು ಅಡ್ಡದಾರಿ ಹಿಡಿದರೆ, ಗಳಿಸಿದ ದುಡ್ಡು ನಮಗೆ ದಕ್ಕುವುದಿಲ್ಲ ಎನ್ನುವುದಕ್ಕೆ ಈ ಯುವತಿಯ ಪ್ರಕರಣವೇ ತಾಜಾ ಉದಾಹರಣೆಯಾಗಿದೆ.
ಕೆಬಿಸಿಯಲ್ಲಿ ಐವತ್ತು ಲಕ್ಷ ಗೆದ್ದಿದ್ದ ಮಹಿಳೆ!
ಭಾರತೀಯ ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಅತ್ಯಂತ ಯಶಸ್ಸನ್ನು ಕಂಡಿರುವ ಯಾವುದಾದರೂ ಒಂದು ಕಾರ್ಯಕ್ರಮವಿದ್ದರೆ ಅದು ಕೋನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ. ಈ ಕಾರ್ಯಕ್ರದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಮೂಲಕ ಕೋಟಿ ಹಣವನ್ನು ಗೆಲ್ಲುವ ಅವಕಾಶ ಇರುತ್ತದೆ.
ಈ ಕಾರ್ಯಕ್ರಮದ ಮೊದಲ ಪ್ರಯೋಗ ಹಿಂದಿ ಭಾಷೆಯಲ್ಲಿ ನಡೆದಿದ್ದು, ಇಲ್ಲಿ ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ನಿರೂಪಕರಾಗಿ ಈ ಪ್ರೋಗ್ರಾಮ್ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ಸುದ್ದಿಯಲ್ಲಿರುವ ಮಹಿಳೆ 2019 ರಲ್ಲಿ ಇದೇ ಕೆಬಿಸಿ ಕಾರ್ಯಕ್ರಮದಲ್ಲಿ ಐವತ್ತು ಲಕ್ಷ ನಗದು ಬಹುಮಾನ ಗೆದ್ದಿದ್ದಳು.
2.5 ಕೋಟಿ ಹಗರಣದ ಪ್ರಮುಖ ಆರೋಪಿ
2019 ರಲ್ಲಿ ಅಮಿತಾಭ್ ಬಚ್ಚನ್ ಅವರ ಕೈಯಿಂದ ಐವತ್ತು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದ ಅಮಿತಾ ಸಿಂಗ್ ತೋಮರ್(KBC Winner Amita Singh), ಮಧ್ಯಪ್ರದೇಶ ಸರ್ಕಾರದಲ್ಲಿ ತಹಶೀಲ್ದಾರ್ ಆಗಿ ಸುಮಾರು 2.5 ಕೋಟಿ ಹಗರಣದಲ್ಲಿ ಭಾಗಿಯಾದ ಕಾರಣ ಇಕೆಯನ್ನು ಗುರುವಾರ (ಮಾರ್ಚ್ 26) ಗ್ವಾಲಿಯರ್ ಪೊಲೀಸರು ಬಂಧಿಸಿದ್ದಾರೆ.
ಅಮಿತಾ ಸಿಂಗ್ 2021 ರಲ್ಲಿ ಗ್ವಾಲಿಯರ್ನ ತಹಶೀಲ್ದಾರ್ ಆಗಿದ್ದಾಗ, ಅಂದು ಸಂಭವಿಸಿದ್ದ ಪ್ರವಾಹಕ್ಕೆ ತುತ್ತಾಗಿದ್ದ ಸಂತ್ರಸ್ತರಿಗೆ ನೀಡಬೇಕಿದ್ದ ಧನ ಪರಿಹಾರವನ್ನು ದುರ್ಬಳಿಕೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಕೆಯ ವಿರುದ್ಧ ಸುಮಾರು 110 ಜನ ಸಂತ್ರಸ್ತರು ದೂರನ್ನು ದಾಖಸಲಿದ್ದರು. ಅಮಿತಾ ಸಿಂಗ್ ಕೆಲಸಕ್ಕೆ ಗೈರಾಗಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು, ಆದರೆ ನಾವು ಇವರನ್ನು ಗ್ವಾಲಿಯರ್ನಲ್ಲಿ ಬಂಧಿಸಿದ್ದೆವೆ ಎಂದು ಎಸ್ಪಿ ಸುಧೀರ್ ಕುಮಾರ್ ಅರ್ಗವಾಲ್ ತಿಳಿಸಿದ್ದಾರೆ,(ಏಜನ್ಸೀಸ್).