ಜಮ್ಮುವಿನಲ್ಲಿರುವ ಕಾಶ್ಮೀರ ಟೈಮ್ಸ್(Kashmir Times) ಕಚೇರಿ
ಶ್ರೀನಗರ: ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (SIA) ಜಮ್ಮುವಿನಲ್ಲಿರುವ ಕಾಶ್ಮೀರ ಟೈಮ್ಸ್(Kashmir Times) ಕಚೇರಿಯ ಮೇಲೆ ಗುರುವಾರ (ನ.20) ದಾಳಿ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜ&ಕಾ ಪೊಲೀಸರು, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಮತ್ತು ದೇಶದ ವಿರುದ್ಧ ಅಸಮಾಧಾನ ಹರಡಲು ಪ್ರಯತ್ನಿಸಿದೆ. ಅಲ್ಲದೆ, ಈ ಪತ್ರಿಕೆಯು ಪ್ರತ್ಯೇಕತಾವಾದಿಗಳ ಯೋಜನೆಗಳನ್ನು ಸಾರ್ವಜನಿಕವಾಗಿ ಹರಡುತ್ತಿದೆ. ಕಾಶ್ಮೀರ ಟೈಮ್ಸ್ ಪತ್ರಿಕೆಯ ಮಾಲಿಕರಾದ ಅನುರಾಧಾ ಭಾಸಿನ್ ಜಮ್ವಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಿಕಾ ಕಚೇರಿಯ ಶೋಧ ಕಾರ್ಯಚರಣೆಯಲ್ಲಿ 14 ಎಕೆ -47 ಕಾರ್ಟ್ರಿಡ್ಜ್‌ಗಳು, ಕೆಲವು ಸುತ್ತು ಪಿಸ್ತೂಲ್‌ಗಳು ಮತ್ತು ಮೂರು ಹ್ಯಾಂಡ್ ಗ್ರೆನೇಡ್ ಪಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, 2020 ರ ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಕಾಶ್ಮೀರ ಟೈಮ್ಸ್‌ನ ಶ್ರೀನಗರ ಕಚೇರಿಯನ್ನು ಸೀಲ್ ಮಾಡಿದ ಐದು ವರ್ಷಗಳ ನಂತರ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.
ದಾಳಿಯನ್ನು ಖಂಡಿಸಿದ ಕಾಶ್ಮೀರ್ ಟೈಮ್ಸ್
ಕಾಶ್ಮೀರ ಟೈಮ್ಸ್‌ನ ಆಡಳಿತ ಮಂಡಳಿಯು ತನ್ನ ಜಮ್ಮು ಕಚೇರಿಯ ಮೇಲಿನ ದಾಳಿಯನ್ನು ಟೀಕಿಸಿದ್ದು, ಇದನ್ನು ಸ್ವತಂತ್ರ ಮಾಧ್ಯಮ ಸಂಸ್ಥೆಯನ್ನು ಹತ್ತಿಕ್ಕುವ ಸಂಘಟಿತ ಪ್ರಯತ್ನ ಎಂದು ಕಿಡಿಕಾರಿದೆ.
ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಸಂಪಾದಕರಾದ ಪ್ರಬೋಧ್ ಜಮ್ವಾಲ್ ಮತ್ತು ಅನುರಾಧಾ ಭಾಸಿನ್, ಜಮ್ಮುವಿನಲ್ಲಿ ನಮ್ಮ ಕಚೇರಿಯ ಮೇಲೆ ದಾಳಿಗಳು ನಡೆದಿವೆ. ನಮ್ಮ ಮೇಲೆ ಹೊರಿಸುತ್ತಿರುವ ಆಧಾರರಹಿತ ಆರೋಪಗಳು ಮತ್ತು ಕಾಶ್ಮೀರ ಟೈಮ್ಸ್ ಮೇಲಿನ ಸಂಘಟಿತ ದಮನವು ನಮ್ಮನ್ನು ಮೌನಗೊಳಿಸಲು ಮಾಡುತ್ತಿರುವ ಮತ್ತೊಂದು ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರವನ್ನು ಟೀಕಿಸುವುದು ದೇಶಕ್ಕೆ ದ್ವೇಷ ಸಾಧಿಸುವುದಕ್ಕೆ ಸಮಾನವಗಿಲ್ಲ. ವಾಸ್ತವವಾಗಿ, ಇದು ತೀರಾ ವಿರುದ್ಧವಾಗಿದೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಬಲಿಷ್ಠವಾಗಿದ್ದು, ಪ್ರಶ್ನಿಸುವ ಪತ್ರಿಕಾ ಸ್ವಾತಂತ್ರ ಅತ್ಯಗತ್ಯವಾಗಿದೆ. ಅಲ್ಲದೆ, ಅಧಿಕಾರವನ್ನು ಹೊಣೆಗಾರರನ್ನಾಗಿ ಮಾಡುವ, ಭ್ರಷ್ಟಾಚಾರದ ತನಿಖೆ ನಡೆಸುವ, ಅಂಚಿನಲ್ಲಿರುವ ಧ್ವನಿಗಳನ್ನು ಗುರುತಿಸುವ ನಮ್ಮ ಕೆಲಸವು ರಾಷ್ಟ್ರವನ್ನು ಬಲಪಡಿಸುತ್ತದೆ ಎಂದು ಸಂಪಾದಕರಾದ ಪ್ರಬೋಧ್ ಜಮ್ವಾಲ್ ಮತ್ತು ಅನುರಾಧಾ ಭಾಸಿನ್ ಹೇಳಿದ್ದಾರೆ,(ಏಜೆನ್ಸೀಸ್).