Vijay childhood photo with Karunanidhi
- ಕರುಣಾನಿಧಿ ಜೊತೆ ನಟ ವಿಜಯ್ ಇರುವ ಹಳೆಯ ಫೋಟೋ ವೈರಲ್
- ಅಂದು ಮಾಜಿ ಸಿಎಂ ಹಿಂದೆ ನಿಂತಿದ್ದ ಯುವಕ ಇಂದು ಡಿಎಂಕೆಯನ್ನೇ ಉರುಳಿಸಿದ್ದಾನೆ ಎಂದ ನಿರ್ದೇಶಕ ಆರ್ಜಿವಿ
- ಕರುಣಾ ನಿಧಿ ಮತ್ತು ವಿಜಯ್ ಅವರ ಹಳೆಯ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ
Vijay childhood photo with Karunanidhi: ತಮಿಳುನಾಡನ್ನು ಸುದೀರ್ಘವಾಗಿ ಆಳಿದ್ದ ಡಿಎಂಕೆ ಸರ್ಕಾರಕ್ಕೆ ದೊಡ್ಡ ಅಘಾತವನ್ನೇ ವಿಜಯ್ ಪಕ್ಷ ತಮಿಳಿಗ ವೆಟ್ರಿ ಕಳಗಂ ನೀಡಿದೆ. ಕರೂರು ಕಾಲ್ತುಳಿತ, ವಿಜಯ್ ಡಿವೋರ್ಸ್ ಕೇಸ್, ನಟಿ ತ್ರಿಷಾ ಜೊತೆಗಿನ ಒಡನಾಟ ಟೀಕೆಗಳ ಸುಳಿಯಲ್ಲಿ ಸಿಲುಕಿದ ಅವರರಿಗೆ ಹೆಚ್ಚೇನು ಗೆಲುವಾಗೋದಿಲ್ಲ ಎನ್ನುವುದು ಎಲ್ಲರಲ್ಲಿದ್ದ ಭಾವನೆ. ಆದರೆ, ಎಲ್ಲ ಕಟ್ಟೆಯನ್ನು ಒಡೆದು ಟಿವಿಕೆ 107 ಸ್ಥಾನವನ್ನು ಗೆದ್ದುಕೊಂಡಿದೆ. ಸಿನಿಮಾದಲ್ಲಾಗುತ್ತಿದ್ದ ಕಮಾಲ್ಗಳನ್ನು ರಿಯಲ್ ಲೈಫ್ನಲ್ಲಿ ಮಾಡಿಬಿಡುತ್ತಾರೆ ಎಂದು ಭರವಸೆಯಲ್ಲಿ ತಮಿಳಿಗರು ಕೈ ಹಿಡಿದ್ದಾರೆ.
51 ವರ್ಷದ ವಿಜಯ್ನ ಪಕ್ಷ ದಾವಿಡರ ಪಕ್ಷವಾದ ಡಿಎಂಕೆ ಮತ್ತು ಎಐಎಡಿಎಂಕೆ ಎನ್ನುವ ಘಟಾನುಘಟಿ ಪಕ್ಷಗಳನ್ನೇ ಸೋಲಿಸಿ ಅಧಿಕಾರಕ್ಕೆ ಏರಿದೆ. ಸರ್ಕಾರ ರಚಿಸಲು ರಾಜ್ಯಪಾಲರಿಗೆ ಸಮಯ ಕೋರಿ ಮನವಿ ಮಾಡಿಕೊಂಡಿದೆ. ಜೊತೆಗೆ ವಿಜಯ್ ಪಕ್ಷಕ್ಕೆ 10 ಶಾಸಕರ ಬೆಂಬಲವನ್ನು ಗಳಿಸಿ, ತಮ್ಮ ಬಹುಮತವನ್ನು ಸಾಬೀತುಪಡಿಸಬೇಕು.
ಸಂಖ್ಯಾಬಲದ ಆಟ ಮತ್ತು ಮೈತ್ರಿ ಸಾಧ್ಯತೆಗಳು ಈಗ ಕೇಂದ್ರ ಹಂತಕ್ಕೆ ಬರುತ್ತಿದ್ದಂತೆ, ಡಿಎಂಕೆ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರೊಂದಿಗಿನ ವಿಜಯ್ ಅವರ ಹಿಂದಿನ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆರ್ಜಿವಿ ಹೇಳಿದ್ದೇನು?
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ನಲ್ಲಿ ನಟ ವಿಜಯ್ ಅವರು ಯುವಕನಾಗಿದ್ದಾಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಜಯ್ ಅವರು ಮಾಜಿ ಸಿಎಂ ಕರುಣಾ ನಿಧಿ ಹಿಂದೆ ನಿಂತಿದ್ದಾರೆ. ಯಾವುದೋ ಕಾರ್ಯಕ್ರಮಕ್ಕೆ ಬಂದಿರುವ ಅವರು ಟೇಪ್ ಕಟ್ ಮಾಡಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಶಿರ್ಷೀಕೆಯನ್ನು ಹೀಗೆ ಕೊಟ್ಟುಕೊಂಡಿದ್ದಾರೆ.
ಮಾಜಿ ಸಿಎಂ ಕರುಣಾನಿಧಿ ಹಿಂದೆ ನಿಂತಿರುವ ಹುಡುಗ, ಇಂದು ಅವರ ದೈತ್ಯ ದ್ರಾವಿಡ ಪಕ್ಷ ಡಿಎಂಕೆಯನ್ನೇ ಹೊಡೆದುರುಳಿ ಧೂಳಿಪಟ ಮಾಡುತ್ತಾನೆ ಎಂದು ಅವರು ಎಂದಿಗೂ ಯೋಚಿಸಿಯೇ ಇರಲಿಲ್ಲ. ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).