ದೀಪಾವಳಿ ಪಾರ್ಟಿಯಲ್ಲಿ 200 ವರ್ಷ ಹಳೆಯ ವಿವಾದಿತ ಪೆಂಡೆಂಟ್ ಧರಿಸಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್. 
ದೇಶ

ಕುರಾನ್ ಸಾಲುಗಳಿದ್ದ ಪೆಂಡೆಂಟ್ ಧರಿಸಿ ಸಂಕಷ್ಟಕ್ಕೆ ಸಿಲುಕಿದ ಕರೀನಾ ಕಪೂರ್: ಬಾಲಿವುಡ್​ ಬೆಡಗಿಗೆ ಕಾಂಗ್ರೆಸ್​ ನಾಯಕನಿಂದ ಲೀಗಲ್ ನೋಟಿಸ್! Kareena Kapoor Khan

ಮುಂಬೈ: ದೀಪಾವಳಿ ಹಬ್ಬದಂದು ಬಾಲಿವುಡ್​ ನಟಿ, ನಟ ಸೈಫ್​ ಅಲಿ ಖಾನ್​ ಪತ್ನಿ, ಕರೀನಾ ಕಪೂರ್ ಖಾನ್​ ಹಸಿರು ಬಣ್ಣದ ಸುಂದರ, ಸುಮಾರು 200 ವರ್ಷ ಹಳೆಯ ಪೆಂಡೆಂಟ್​ವೊಂದನ್ನು ಧರಿಸಿ ಸೋಷಿಯಲ್​ ಮೀಡಿಯಾನಲ್ಲಿ ಟ್ರೆಂಡಿಂಗ್​ನಲ್ಲಿದ್ದರು.

ಆದರೆ, ಈಗ ಈ ಪುರಾತನ ಪೆಂಡೆಂಟ್​ ಧಾರಣೆ ಈಗ ನಟಿಗೆ ಕಾನೂನಿನ ಸಂಕಷ್ಟವನ್ನು ತಂದಿದೆ. ನಟಿ ಕರೀನಾ ಧರಿಸಿದ್ದ ಪೆಂಡೆಂಟ್​ನಲ್ಲಿ ಇಸ್ಲಾಂ ಧರ್ಮ ಗ್ರಂಥ ಕುರಾನ್​ನ ಕೆಲ ಸಾಲುಗಳಿದ್ದು, ಹೀಗಾಗಿ ಇದನ್ನು ಧರಿಸುವುದು ಅಪರಾಧವಾಗಿದ್ದು, ನಟಿ ಕೂಡಲೇ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್​ ನಾಯಕ ಅಬ್ಬಾಸ್​ ಹಫೀಜ್​ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ.

ಕರೀನಾ ಕ್ಷಮೆ ಕೇಳಲೇ ಬೇಕು!

ನಟಿ ಕರೀನಾ ಕಪೂರ್​ ಈ ಪೆಂಡೆಂಟ್​ ಅನ್ನು ತಮ್ಮ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದು, ಇದನ್ನು ರಿಹಾ ಕಪೂರ್​ ಎಂಬಾಕೆ ಈ ಫೋಟೊಗಳನ್ನು ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೊಂಡಿದ್ದರು.

ಈ ಪೆಂಡೆಂಟ್​ನಲ್ಲಿ ಪವಿತ್ರ ಕುರಾನಿನಲ್ಲಿರುವ ಕೆಲ ಸಾಲುಗಳನ್ನು ಕೆತ್ತನೆ ಮಾಡಲಾಗಿದೆ. ಇದನ್ನು ಭೋಪಾಲ್​ನ ಬೇಗಂ (ಮಹಾರಾಣಿ) ಧರಿಸುತ್ತಿದ್ದರು. ಹೀಗಾಗಿ ಇದನ್ನು ಒಂದು ಆಭರಣದ ರೀತಿಯಲ್ಲಿ ಧರಿಸುವುದು ಸರಿಯಲ್ಲ. ಇದರಿಂದ ಮುಸ್ಲಿಂ ಸಮುದಾಯದ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ನಟಿ ಕೂಡಲೇ ಕ್ಷಮೆ ಕೇಳಬೇಕೆಂದು ಅಬ್ಬಾಸ್​ ಹಫೀಜ್​ ಆಗ್ರಹಿಸಿದ್ದಾರೆ.

ಹಾಗೆಯೇ, ಈ ಪೆಂಡೆಂಟ್​ನಲ್ಲಿ ಕುರಾನಿನ ಕೆಲ ಪವಿತ್ರ ಸಾಲುಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಇದನ್ನು ಇತರರು ಯಾವುದೇ ಧಾರ್ಮಿಕ ವಿಧಿವಿಧಾನವನ್ನು ಪಾಲಿಸದೇ ಮುಟ್ಟಿರುವ ಸಾಧ್ಯತೆ ಬಗ್ಗೆಯೂ ಹಫೀಜ್​ ಕಳವಳ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ, ಧಾರ್ಮಿಕ ಪರಂಪರೆ ಹೊಂದಿರುವ ಪೆಂಡೆಂಟ್​ಅನ್ನು ಫ್ಯಾಶನ್​ಗಾಗಿ ನಟಿ ಧರಿಸಿರುವುದು ಸರಿಯಲ್ಲ. ಹೀಗಾಗಿ ಸಾಧ್ಯವಾದಷ್ಟು ಬೇಗ ಕ್ಷಮೆ ಕೇಳುವಂತೆ ಕಾಂಗ್ರೆಸ್​ ನಾಯಕ, ಕರೀನಾಳಿಗೆ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ.

ಕರೀನಾ ನೋ ರಿಸ್ಪಾನ್ಸ್​!

ಆದರೆ, ಈ ಲೀಗಲ್​ ನೋಟಿಸ್​ಗೆ ನಟಿ ಕರೀನಾ ಕಪೂರ್​ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ. ನಟಿ ಪೆಂಡೆಂಟ್​ಅನ್ನು ಧರಿಸುವ ಮೂಲಕ ಖ್ಯಾತಿ ಪಡೆದ ಕೆಲವೇ ದಿನಗಳಲ್ಲಿ ಕಾನೂನು ಸಂಕಷ್ಟವನ್ನು ಎದುರಿಸುವಂತಾಗಿದೆ. ಈಗ ಕರೀನಾ, ಕ್ಷಮೆ ಕೇಳುತ್ತಾರಾ? ಅಥವಾ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತಾರಾ ಎನ್ನವುದಕ್ಕೆ ಕಾಲವೇ ಉತ್ತರಿಸಲಿದೆ, (ಏಜೆನ್ಸೀಸ್​).