ಚಾಲಕನಿಗೆ ಪೊಲೀಸ್ ಕಾನ್‌ಸ್ಟೆಬಲ್‌ ಮಸಾಜ್  
ದೇಶ

ಕಾನ್ಪುರದಲ್ಲಿ ಎಸ್‌ಡಿಎಂ ಚಾಲಕನಿಗೆ ಪೊಲೀಸ್ ಕಾನ್‌ಸ್ಟೆಬಲ್‌ ಮಸಾಜ್ | Constable massages SDM driver!

ಪ್ರಮುಖ ಮುಖ್ಯಾಂಶಗಳು

  • ಎಸ್‌ಡಿಎಂ ಚಾಲಕನಿಗೆ ಕಾಲು ಒತ್ತಿದ ಪೊಲೀಸ್ ಕಾನ್‌ಸ್ಟೆಬಲ್
  • ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯಿಂದ ಮಸಾಜ್
  • ವಿಐಪಿ ಸಂಸ್ಕೃತಿ ವಿರುದ್ಧ ನೆಟ್ಟಿಗರಿಂದ ತೀವ್ರ ಟೀಕೆ
ಉತ್ತರ ಪ್ರದೇಶ: ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬ ಸೇವೆ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಸ್‌ಡಿಎಂ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಎಸ್‌ಡಿಎಂ ಚಾಲಕ ಮನೋಜ್ ಕುಮಾರ್​ ಕಾಲನ್ನು, ಸಮವಸ್ತ್ರದಲ್ಲಿರುವ ಯುಪಿ ಪೊಲೀಸ್ ಕಾನ್‌ಸ್ಟೆಬಲ್ ರಜತ್ ಒತ್ತುತ್ತಿದ್ದಾರೆ. ಯಾರೋ ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿಡಿದ್ದಾರೆ ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿ ಯುನಿಫಾರ್ಮ್ ಮೇಲೆಯೇ ಅಧಿಕಾರಿಯ ಚಾಲಕನಿಗೆ ಕಾಲು ಮಸಾಜ್ ಮಾಡುತ್ತಿರುವುದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಚರ್ಚೆಯೂ ಜೋರಾಗಿದೆ.

ವಿಐಪಿ ಸಂಸ್ಕೃತಿ ಎಂದ ನೆಟ್ಟಿಗರು

ಇನ್ನು, ಘಟನೆ ಕುರಿತು ವಿಐಪಿ ಸಂಸ್ಕೃತಿ ಮತ್ತು ಅಧಿಕಾರದ ದುರುಪಯೋಗದ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ‘ಚಾಲಕನಿಗೆ ಇಷ್ಟೊಂದು ಅಧಿಕಾರವಿದ್ದರೆ, ಅಧಿಕಾರಿಯ ಪರಿಸ್ಥಿತಿ ಹೇಗಿರಬಹುದು’ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ. ಆದರೆ, ವೈರಲ್ ವಿಡಿಯೋ ಆಧರಿಸಿ ತನಿಖೆ ನಡೆಯಬೇಕಿದೆ. ಈ ಘಟನೆಗೆ ಸತ್ಯಾಸತ್ಯತೆ ಮತ್ತು ಅಧಿಕಾರಿಗಳ ಪ್ರತಿಕ್ರಿಯೆ ಏನೂ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ,(ಏಜೇನ್ಸೀಸ್​).