Kangana takes a U-turn on Gen Z
- ಜೆನ್ ಜಿ ಜನರೇಷನ್ ಗಟರ್ ಎಂದಿದ್ದ ಕಂಗನಾ ರಣಾವತ್ ಯೂಟರ್ನ್.
- ಜೆನ್ಜಿಗಳು ಭಾರತದ ಅತಿ ದೊಡ್ಡ ಶಕ್ತಿ ಹಾಗೂ ಸಂಸ್ಕೃತಿ, ಅಸ್ಮಿತೆಯ ರಾಯಭಾರಿಗಳು ಎಂದ ಕಂಗನಾ.
- ಕೆಲವು ಜನರಿಂದಾಗಿ ದೇಶದ ಘನತೆ ಹಾಳಾಗುತ್ತಿದೆ ಎಂದು ಅಸಮಾಧಾನ.
ನವದೆಹಲಿ: ಜೆನ್ಜಿಗಳನ್ನು (Gen Z) ಜನರೇಷನ್ ಗಟರ್ ಎಂದು ಕರೆದು ಸಾಕಷ್ಟು ಟ್ರೋಲ್ ಹಾಗೂ ಮೀಮ್ಸ್ಗಳಿಗೆ ಗುರಿಯಾಗಿದ್ದ ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut) ಅವರು ಸದ್ಯ ತಮ್ಮ ವರಸೆ ಬದಲಿಸಿದ್ದಾರೆ. ಜೆನ್ಜಿಗಳು ಭಾರತದ ಅತಿ ದೊಡ್ಡ ಶಕ್ತಿ ಹಾಗೂ ಸಂಸ್ಕೃತಿ, ಅಸ್ಮಿತೆಯ ರಾಯಭಾರಿಗಳು. ಕೆಲವು ಮಂದಿಗಾಗಿ ಎಲ್ಲರನ್ನೂ ದೋಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಂಗನಾ ಹೇಳಿದ್ದಿಷ್ಟು
ಶುಕ್ರವಾರ ಸಂಸತ್ತಿನ ಆವರಣದಲ್ಲಿ ಕೊಡೆ ಹಿಡಿದು ನಡೆದು ಸಾಗುತ್ತಿರುವ ಅವರನ್ನು ಮಾತನಾಡಿಸಿದ ಅವರನ್ನು ಜೆನ್ಜಿಗಳ ಬಗ್ಗೆ ಪ್ರಶ್ನೆ ಕೇಳಲಾಯ್ತು ಈ ವೇಳೆ ಅವರು ಹೊಸ ವ್ಯಾಖ್ಯಾನವನ್ನು ನೀಡಿದರು. ಈ ಪೀಳಿಗೆಯೇ ನಮ್ಮ ನಿಜವಾದ ಶಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕೆಲವು ವ್ಯಕ್ತಿಗಳಿಂದಾಗಿ ಇಡೀ ಯುವ ಪೀಳಿಗೆಯನ್ನು ತಪ್ಪಾಗಿ ಬಿಂಬಿಸಬಾರದು ಎಂದು ಅವರು ಹೇಳಿದರು.
ನಾವು ಗೌರವಿಸುವ ಮೋಹನ್ ಭಾಗವತ್ ಅವರ ಮಾತು ಆಲಿಸುವ ಮತ್ತು ಅವರ ಅನುಭವದಿಂದ ಹಾಗೂ ಜ್ಞಾನದಿಂದ ಲಾಭ ಪಡೆಯುವ ಅವಕಾಶ ನಮಗೆ ಸಿಕ್ಕಿದೆ. ದೇಶದ ಯುವಜನರು ನಮ್ಮ ಸರ್ಕಾರದೊಂದಿಗೆ ಬೆರೆತಿರುವುದು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ ಎಂದು ಕಂಗನಾ ಹೇಳಿದರು.
ರಾಹುಲ್ ವಿರುದ್ಧ ಕಿಡಿ
ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಉಂಟಾದ ಅಕ್ರಮ ವಿರುದ್ಧ ಅಲ್ಲಿನ ಅಭ್ಯರ್ಥಿಗಳು 14 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿಯವರೆಗೂ ಅಲ್ಲಿಗೆ ಭೇಟಿ ಕೊಟ್ಟಿಲ್ಲ ಮಾತನಾಡಿಲ್ಲ ಎಂದು ಟೀಕೆ ಮಾಡಿದರು.
ಜೆನ್ ಜಿಗಳು ಸರ್ಕಾರದ ಒಂದು ಭಾಗ ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಕಾಮನ್ ವೆಲ್ತ್ನಲ್ಲಿ ಸ್ಪರ್ಧಿಸಿ, ಗೆದ್ದು ಬೀಗಿದ ಸ್ಪರ್ಧಿಗಳು ಪದಕವನ್ನು ಮೋದಿಗೆ ಅರ್ಪಸಿದ ಕ್ಷಣವನ್ನು ಕಂಗನಾ ಅವರು ಶ್ಲಾಘಿಸಿದರು. ಕೆಲವು ಜೆನ್ ಜಿಗಳು ದೇಶದ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದರು.
ನೆಟ್ಟಿಗರಿಂದ ಲೇವಡಿ
ಕಂಗನಾ ಮೋಯೆ ಮೋಯೆ ಎನ್ನುತ್ತಾ ಪೋಸ್ಟ್ ಹಂಚಿಕೊಂಡ ನೆಟ್ಟಿಗರೊಬ್ಬರು ಜುಲೈ 28ರಂದು ಕಂಗನಾ ಅವರು ಜೆನ್ಜಿಗಳು ಜನರೇಷನ್ ಗಟರ್ ಪೀಳಿಗೆಯವರು ಎಂದಿದ್ದರು ಆಗಸ್ಟ್ 7 ಜೆನ್ಜಿ ನಮ್ಮ ಶಕ್ತಿ ಮತ್ತು ಈ ದೇಶಕ್ಕೆ ಒಂದು ಆಸ್ತಿ ಎಂದಿರುವುದಾಗಿ ಎಕ್ಸ್ನಲ್ಲಿ ಕಂಗನಾ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಜೆನ್ ಜಿಗಳ ರೀಲ್ಸ್ ವಿರುದ್ಧ ಕಿಡಿಕಾರಿದ್ದ ಕಂಗನಾ ಇವರನ್ನು ಹೆತ್ತವರು ಯಾರು ಎಂದಿದ್ದರು. ಅಲ್ಲದೆ, ಅವರ ರೀಲ್ಸ್ಗಳು ವಾಕರಿಕೆ ಬರುವಂತೆ ಇದೆ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ ಸಿಜೆಪಿ ವಕ್ತಾರ ಸೌರವ್ ದಾಸ್ ಅವರು ಕಂಗನಾರನ್ನು ಬಿಜೆಪಿ ಗಂಭೀರವಾಗಿ ಪರಿಗಣನೆ ಮಾಡೋದಿಲ್ಲ. ಇನ್ನೂ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಅವರು ಸೌರವ್ ದಾಸ್ ಒಬ್ಬ ನಿಷ್ಪ್ರಯೋಜಕ, ಕೆಲಸವಿಲ್ಲದ ಅಲೆಮಾರಿ ಎಂದು ನಿಂದಿಸಿದ್ದರು. ಆ ಬೆನ್ನಲ್ಲೇ ಕಂಗನಾರ ಕೇನ್ಸ್ ಪಾರ್ಟಿ ವಿಡಿಯೋಗಳ ವೈರಲ್ ಆಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಕಂಗನಾ ತಮ್ಮ ವರಸೆ ಬದಲಿಸಿದ್ದಾರೆ.