ನಟಿ ಕಂಗನಾ ರನೌತ್ 
ದೇಶ

ನಾನೂ ಹಣ ಕೊಡಬೇಕಾ? ಮುಂಬೈ ಡೇಟಿಂಗ್ ಕಲ್ಚರ್​ ನೋಡಿ ಶಾಕ್ ಆಗಿದ್ದೆ; ಕಂಗನಾ I Kangana talks about Mumbai dating culture

ಪ್ರಮುಖ ಮುಖ್ಯಾಂಶಗಳು

  • ದೆಹಲಿ-ಮುಂಬೈ ಡೇಟಿಂಗ್ ಸಂಸ್ಕೃತಿ ನಡುವಿನ ವ್ಯತ್ಯಾಸದ ಬಗ್ಗೆ ಕಂಗನಾ ಮಾತು
  • ಡೇಟಿಂಗ್ ವೇಳೆ ಹುಡುಗರು ಮಾತ್ರ ಬಿಲ್ ಕೊಡುತ್ತಿದ್ದರು ಎಂದ ನಟಿ
  • ಹಳೆಯ ಸಂದರ್ಶನದ ವಿಡಿಯೊ ಮತ್ತೆ ಸೋಷಿಯಲ್​ ಮಿಡಿಯಾದಲ್ಲಿ ವೈರಲ್
ನವದೆಹಲಿ: ನಟಿ ಕಂಗನಾ ರನೌತ್ 2022ರಲ್ಲಿ ನೀಡಿದ್ದ ಸಂದರ್ಶನ ಒಂದರಲ್ಲಿ ದೆಹಲಿ ಮತ್ತು ಮುಂಬೈ ಸಿಟಿಗಳ ಡೇಟಿಂಗ್ 

(Dating) 

ಸಂಸ್ಕೃತಿ ಬಗ್ಗೆ ಮಾತಾಡಿದ್ದರು. ಈಗ ಆ ವಿಡಿಯೋಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ಇಂಟರ್ವ್ಯೂನಲ್ಲಿ ಮಾತಾಡಿದ ಕಂಗನಾ, 

ಮುಂದುವರಿದು, ದೆಹಲಿ ಹುಡುಗರು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಿ ಎಲ್ಲ ಬಿಲ್‌ಗಳನ್ನೂ ಕೊಡುತ್ತಿದ್ದರು. ಆದರೆ ಮುಂಬೈಗೆ ಬಂದಾಗ ಡೇಟ್‌ನಲ್ಲೂ ಬಿಲ್ ಹಂಚಿಕೊಳ್ಳಬೇಕು ಅಂತ ಗೊತ್ತಾದಾಗ ನಾನೂ ಹಣ ಕೊಡಬೇಕಾ? ಎಂದು ನನಗೆ ಶಾಕ್​ ಆಯಿತು ಅಂತ ನಗಾಡಿದ್ದಾರೆ. ಬಳಿಕ ಇದೇ ಪದ್ಧತಿಯನ್ನು ತಾನು ಒಪ್ಪಿಕೊಂಡೆ. ಈಗ ಅದರಲ್ಲಿ ತಪ್ಪೇನಿಲ್ಲ, ಡಚ್(Dutch)  ಪದ್ಧತಿ ಸರಿ ಅನಿಸುತ್ತೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಸಂದರ್ಶನದಲ್ಲಿ ಬಾಲಿವುಡ್‌ಗೆ ಬರುವ ಮುನ್ನ ಇದ್ದ ಅವರ ಜೀವನ ಶೈಲಿ, ದೆಹಲಿ, ಚಂಡೀಗಢ ಹಾಗೂ ಮುಂಬೈನಲ್ಲಿ ಆದ ಅನುಭವಗಳನ್ನು ಕಂಗನಾ ಹಂಚಿಕೊಂಡ್ರು. ಇದೀಗ ಅವರ ಈ ಹೇಳಿಕೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್​)