Kangana Ranaut Backs Maithili Thakur Amid Rolls-Royce Row: 
ದೇಶ

ಆಸ್ತಿ 4 ಕೋಟಿ, ಕಾರು 13 ಕೋಟಿ?; ಮೈಥಿಲಿ ಠಾಕೂರ್ ವಿರುದ್ಧ ಟ್ರೋಲ್, ಶಾಸಕಿ ಬೆಂಬಲಕ್ಕೆ ನಿಂತ Kangana Ranaut

ಮಮತಾ

ಪ್ರಮುಖ ಮುಖ್ಯಾಂಶಗಳು

  • ಮೈಥಿಲಿ ಠಾಕೂರ್​ ಐಷಾರಾಮಿ ಕಾರಿನ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ
  • ಆಸ್ತಿ 4 ಕೋಟಿ. ಕಾರು 13 ಕೋಟಿ, ಶಾಸಕಿಯಾದ ಮೂರೇ ತಿಂಗಳಿಗೆ ಇಷ್ಟೊಂದ ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ
  • ರಾಜಕಾರಿಣಿಗಳು ಐಷಾರಾಮಿ ಜೀವನ ನಡೆಸೋದೆ ತಪ್ಪಾ ಎಂದ ಸಂಸದೆ, ನಟಿ ಕಂಗನಾ ರಣಾವತ್
ನವದೆಹಲಿ: ಬಿಹಾರದ ಕಿರಿಯ ಶಾಸಕಿ ಹಾಗೂ ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್​ ಅವರು 13 ಕೋಟಿಯ ಐಷಾರಾಮಿ ಕಾರು, ಸೋಶಿಯಲ್​ ಮೀಡಿಯಾದಲ್ಲಿ ನಾನಾ ರೀತಿಯ ಚರ್ಚೆಗೆ ನಾಂದಿ ಹಾಡಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡಿವಿಟ್​ ಪ್ರಕಾರ, ಅವರ ಒಟ್ಟು ನಿವ್ವಳ ಆಸ್ತಿ 4 ಕೋಟಿ ರೂ. ಇದೆ. 4 ಕೋಟಿ ಆಸ್ತಿ ಹೊಂದಿರುವವರು 13 ಕೋಟಿ ಕಾರು ಖರೀದಿಸಿದ್ದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ವಿವಾದದಲ್ಲಿ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರು ಶಾಸಕಿ ಮೈಥಿಲಿ ಪರ ನಿಂತಿದ್ದಾರೆ.
ಶಾಸಕಿ ಮೈಥಿಲಿ ಅವರು ಇತ್ತೀಚೆಗೆ ಮುಂಬೈನ ಲಾಲ್‌ಬಾಗ್ಚಾ ರಾಜ ಪಂಡಲ್‌ಗೆ ನೀಲಿ ಬಣ್ಣದ ಐಷಾರಾಮಿ ಎಸ್​ಯುವಿ ಕಾರಿನಲ್ಲಿ ಬಂದಿದ್ದಾರೆ. ರಾಜಕೀಯಕ್ಕೆ ಎಂಟ್ರಿಯಾಗಿ ಇನ್ನೂ ಕೆಲವೇ ತಿಂಗಳು ಕಳೆದಿದೆ. ಅಷ್ಟರಲ್ಲಿ ಇಷ್ಟು ಐಷಾರಾಮಿ ಕಾರನ್ನು ಕೊಂಡುಕೊಳ್ಳಲು ಸಾಧ್ಯವಾಗಿದ್ದು ಹೇಗೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕಂಗನಾ ಏನಂದ್ರು?

ಕಂಗನಾ ಅವರು ಇನ್​ಸ್ಟಾಗ್ರಾಮ್​ ಪೋಸ್ಟ್​ ಮೂಲಕ ಹಂಚಿಕೊಂಡು ಟೀಕೆಗೆ ಉತ್ತರ ನೀಡುತ್ತಾರೆ. ಸದ್ಯ ಮೈಥಿಲಿ ಠಾಕೂರ್ ಪರ ನಿಂತ ಅವರು, ಬರೆದುಕೊಂಡಿರುವುದು ಹೀಗೆ.
ಕೆಲವರು ರಾಜಕಾರಣಿಗಳು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದರೆ ಸಹಿಸೋದಿಲ್ಲ. ನಾವು ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡಬಹುದು. ನಿಸ್ವಾರ್ಥ ಸೇವೆ ಮಾಡಬಹುದು. ಆದರೆ, ನಾವು ಸರಳವಾಗಿ, ಬಡವರಾಗಿ ಬದುಕಬೇಕು ಎಂದು ಬಯಸೋದು ಯಾಕೆ?. ಸಾರ್ವಜನಿಕರ ಹಣದ ಮೇಲೆ ಆಸೆ ಇಲ್ಲದೇ ಹೋದರೂ ಸಹ ಉತ್ತಮ ಜೀವನ ನಡೆಸುತ್ತಿರುವುದನ್ನು ಕಂಡ ಕೂಡಲೇ ಪ್ರಶ್ನಿಸುವ ಮನೋಭಾವ ಏಕೆ. ರಾಜಕಾರಣಿಗಳು ಐಷಾರಾಮಿ ಜೀವನ ನಡೆಸಬಾರದೇ ಎಂದು ಕಂಗನಾ ಅವರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಆ ಮೂಲಕ ಅವರ ಪರ ನಿಂತಿದ್ದಾರೆ.

ಎಕ್ಸ್​ನಲ್ಲಿ ಟ್ರೋಲ್

ಅಲ್ಲದೇ, ಸಿಎ ರುಘಾನಿ ಎಂಬುವವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು ಹೀಗೆ ಬರೆದಿಕೊಂಡಿದ್ದಾರೆ
  • ಹೆಸರು : ಮೈಥಿಲಿ ಠಾಕೂರ್​ (ಬಿಹಾರ ಶಾಸಕಿ)
  • ನಿವ್ವಳ ಮೌಲ್ಯ : 4 ಕೋಟಿ (ಚುನಾವಣಾ ಅಫಿಡವಿಟ್ ಪ್ರಕಾರ)
  • ಕಾರು : 13 ಕೋಟಿ (ರೋಲ್ಸ್ ರಾಯ್ಸ್) ಹೇಗೆ ??????
ಎಂದು ಭಾರತದ ಆದಾಯ ತೆರಿಗೆ ಇಲಾಖೆಯನ್ನು ಟ್ಯಾಗ್​ ಮಾಡಿದ್ದಾರೆ. ಜೊತೆ ಶಾಸಕಿಯ ಆದಾಯವನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜನ ಸಾಮಾನ್ಯರಿಗೆ ಮಾತ್ತ ಕಿರುಕುಳ ನೀಡುತ್ತದೆ. ಈ ಶಾಸಕಿ ವಿರುದ್ಧ ಇಲ್ಲಿಯವರೆಗೂ ಕ್ರಮ ಕೈಗೊಳ್ಳದೆ ಇರಲು ಕಾರಣ ಏನು ಎಂದು ಕೇಳಿ ಕಿಡಿಕಾರಿದ್ದಾರೆ.

ವಾದ-ವಿವಾದ

ಈ ಪೋಸ್ಟ್​ಗೆ ಎಸ್​ ಕುಮಾರ್ ಎಂಬುವವರು ಕಾಮೆಂಟ್ ಮಾಡಿದ್ದು, ಸುಳ್ಳು ಮಾಹಿತಿ ಕೊಡಬೇಡಿ. ಅವರು ಶಾಸಕಿಯಾಗುವ ಮುನ್ನ ಹಲವು ಭಜನೆ ಕಾರ್ಯಕ್ರಮ ಭೋಜ್‌ಪುರಿ ಮತ್ತು ಜಾನಪದ ಗೀತೆಗಳ ಪ್ರಸಿದ್ಧ ಗಾಯಕಿಯಾಗಿದ್ದರ. ಆಗ ಗಳಿಸಿರುತ್ತಾರೆ. ಇಲ್ಲಿಯವರೆಗೆ ಯಾರನ್ನೂ ಲೂಟಿ ಮಾಡಿಲ್ಲ, ಬದಲಿಗೆ ತಮ್ಮ ಕೆಲಸದ ಮೂಲಕವೇ ಸಂಪಾದನೆ ಮಾಡಿದ್ದಾರೆ. ಅವರು ಅನೇಕ ದೇಶಗಳಲ್ಲಿ ಲೈವ್ ಪರ್ಫಾರ್ಮೆನ್ಸ್ ನೀಡಿದ್ದಾರೆ ಎಂದು ಬರೆದಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿದ CA Ruchita Vaghani ಶಾಸಕರಾಗುವ ಮೊದಲು ಚುನಾವಣಾ ಆಯೋಗಕ್ಕೆ ಕೊಟ್ಟ ಅಫಿಡಿವಿಟ್​ನಲ್ಲಿ 4 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯ ಎಂದು ಇದೆ. ಶಾಸಕರಾದ ನಂತರ 13 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕಾರು ತೆಗೆದುಕೊಂಡಿದ್ದಾರೆ. ಶಾಸಕರಾದ ಕೇವಲ 3 ವರ್ಷಗಳಲ್ಲಿ 300% ರಷ್ಟು ಏರಿಕೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ, (ಏಜೆನ್ಸೀಸ್)