ವಿಜಯ್ ಮತ್ತು ಕಮಲ್ ಹಾಸನ್  
ದೇಶ

Kamal Haasan| ನಾನು ವಿಜಯ್​ಗೆ ಸಲಹೆ ನೀಡುವುದಿಲ್ಲ ಎಂದ ಕಮಲ್ ಹಾಸನ್​

ತಿರುವನಂತಪುರಂ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಮುಖ್ಯಸ್ಥ ದಳಪತಿ ವಿಜಯ್​ ನನ್ನ ರಾಜಕೀಯ ಶತ್ರುವಲ್ಲ ಎಂದು ಕಮಲ್ ಹಾಸನ್(Kamal Haasan) ಹೇಳಿದ್ದಾರೆ. ಅಲ್ಲದೆ, ನಾನು ವಿಜಯ್‌ಗೆ ಸಲಹೆ ನೀಡಲು ಇದು ಸರಿಯಾದ ಕ್ಷಣವಲ್ಲ ಎಂದಿದ್ದಾರೆ.  
ಈ ಬಗ್ಗೆ ಕೇರಳದಲ್ಲಿ ನಡೆದ ಹಾರ್ಟಸ್ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಕಮಲ್ ಹಾಸನ್, ನನ್ನ ಶತ್ರು ಹೆಚ್ಚಿನ ಪಕ್ಷಗಳು ಗುರುತಿಸಲು ಧೈರ್ಯ ಮಾಡುವುದಕ್ಕಿಂತ ದೊಡ್ಡವನು. ನಾನು ನೇರವಾಗಿ ಕೊಲ್ಲಲು ಹೋರಟಿರುವ ಶತ್ರು ಜಾತಿವಾದವಾಗಿದೆ. ಏಕೆಂದರೆ, ಜಾತಿವಾದವು ತುಂಬಾ ಹಿಂಸಾತ್ಮಕವಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ತ್ವರಿತವಾಗಿ ಸಾಧ್ಯವಾದಷ್ಟು ಬೇಗ ನಿಭಾಯಿಸಬೇಕು. ಇದು ನನ್ನ ಶತ್ರು, ನಾನು ನನ್ನ ಶತ್ರುವನ್ನು ಆರಿಸಿಕೊಂಡಿದ್ದೇನೆ, ಅದು ದೊಡ್ಡ ಶತ್ರು ಎಂದು ಜಾತಿವಾದದ ವಿರುದ್ಧ ಕಿಡಿಕಾರಿದ್ದಾರೆ. 
ಮುಂದುವರೆದು ಮಾತನಾಡಿದ ರಾಜ್ಯಸಭಾ ಸಂಸದ, ವಿಜಯ್‌ಗೆ ಸಲಹೆ ನೀಡಲು ಇದು ಸರಿಯಾದ ಸಮಯವಲ್ಲ. ಅಲ್ಲದೆ, ನಾನು ಸಲಹೆ ನೀಡುವ ಸ್ಥಿತಿಯಲ್ಲಿಲ್ಲ. ನಾನು ಎಂದಿಗೂ ಸಲಹೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, ಅದು ಸರಿಯಾದ ಸಮಯದಲ್ಲಿ ನನಗೆ ಬರಲಿಲ್ಲ. ಬಹುಶಃ ನನ್ನ ಸಹೋದರನಿಗೆ ಸಲಹೆ ನೀಡಲು ಇದು ಸರಿಯಾದ ಕ್ಷಣವಾಗಿಲ್ಲ. ಅದರೆ, ಅನುಭವವು ನಮ್ಮಲ್ಲಿ ಯಾರಿಗಿಂತ ಉತ್ತಮ ಶಿಕ್ಷಕ ಏಕೆಂದರೆ ನಮಗೆ ಪಕ್ಷಪಾತವಿದೆ, ಅನುಭವವು ಹಾಗೆ ಮಾಡುವುದಿಲ್ಲ. ಅದು ಬರುತ್ತದೆ, ನೀವು ಕಲಿಯಲು ಅರ್ಹವಾದದ್ದನ್ನು ನೀಡುತ್ತದೆ ಎಂದಿದ್ದಾರೆ. 
ಕಮಲ್ ಹಾಸನ್ ಕೊನೆಯ ಬಾರಿಗೆ ಮಣಿರತ್ನಂ ಅವರ ಥಗ್ ಲೈಫ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಸಾಹಸ-ನೃತ್ಯ ಸಂಯೋಜಕ ಜೋಡಿ ಅನ್ಬರಿವ್ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಮತ್ತು ರಜನಿಕಾಂತ್ ಅವರ ಮುಂಬರುವ ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ,(ಏಜೆನ್ಸೀಸ್).