ಕಲ್ಯಾಣ್ ಬ್ಯಾನರ್ಜಿ ಮತ್ತು ಮಮತಾ ಬ್ಯಾನರ್ಜಿ
ನವದೆಹಲಿ: ತೃಣಮೂಲ ಕಾಂಗ್ರೆಸ್ನ 28 ಸಂಸದರ ಪೈಕಿ 20 ಮಂದಿ ತಮ್ಮ ವಿರುದ್ಧ ಬಂಡಾಯವೆದ್ದಿರುವ ನಡುವೆಯೂ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸಂಸದ ಕಲ್ಯಾಣ್ ಬ್ಯಾನರ್ಜಿಯವರನ್ನು(Kalyan Banerjee) ನೇಮಿಸಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮಂಗಳವಾರ(ಜೂ. 09) ವರದಿಯಾಗಿದೆ.
ಕಲ್ಯಾಣ್ ಬ್ಯಾನರ್ಜಿಯವರನ್ನು ಸಚೇತಕರಾಗಿ ನೇಮಿಸಿದ್ದು, ಪಕ್ಷದ ಹೊಸ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಸದೀಯ ದಾಖಲೆಗಳಲ್ಲಿ ಸೇರಿಸಲು ಮತ್ತು ಇದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಮತಾ ಬ್ಯಾನರ್ಜಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ಪಕ್ಷದ ವಿರುದ್ಧ ಬಂಡಾಯವೆದ್ದು, ಟಿಎಂಸಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ನೇತೃತ್ವದಲ್ಲಿ 20 ಸಂಸದರು ಎನ್ಡಿಎಗೆ ಬೆಂಬಲ ನೀಡುವುದಾಗಿ ಸ್ಪೀಕರ್ಗೆ ಪತ್ರ ಬರೆದಿದ್ದು, ತಮ್ಮನ್ನು ವಿಶೇಷ ಗುಂಪು ಎಂದು ಗುರುತಿಸಿ ಲೋಕಸಭೆಯಲ್ಲಿ ಪ್ರತ್ಯೇಕ ಆಸನ ನಿಗದಿ ಮಾಡುವಂತೆ ಪತ್ರ ಬರೆದಿದ್ದಾರೆ.
ಲೋಕಸಭೆಯಲ್ಲಿ 28 ಸಂಸದರನ್ನು ಹೊಂದಿರುವ ಟಿಎಂಸಿ ಪಕ್ಷದಲ್ಲಿ 2/3 ಮಾದರಿಯಲ್ಲಿ 20 ಸಂಸದರು ಸಿಡಿದು ಬೇರೊಂದು ಪಕ್ಷವನ್ನು ಸೇರ್ಪಡೆಗೊಂಡರೆ ಅನರ್ಹತೆಯಿಂದ ತಪ್ಪಿಸಿಕೊಳ್ಳಲಿದ್ದಾರೆ. ಅಥವಾ ಅವರದೇ ನಿಜವಾದ ತೃಣಮೂಲ ಕಾಂಗ್ರೆಸ್ ಎಂದು ಹೇಳುವ ಪತ್ರವನ್ನು ಸ್ಪೀಕರ್ ನೀಡಿದ್ರೆ ಪಕ್ಷದ ಮಾನ್ಯತೆ ಸಿಗಬಹುದು ಎನ್ನಲಾಗಿದೆ (ಏಜೆನ್ಸೀಸ್).