Kakinada Thieves Return Stolen Gold With Apology Letter
- ಕದ್ದ ಹಣ ವಾಪಸ್ ತಂದಿಟ್ಟ ಖದೀಮರು, ಕಾಕಿನಾಡ ಜಿಲ್ಲೆಯಲ್ಲಿ ಅಪರೂಪದ ಘಟನೆ.
- 22 ಸಾವಿರ ಖರ್ಚಾಗಿದೆ ವಾಪಸ್ ಕೋಡೋದಿಕ್ಕೆ ಆಗೋಲ್ಲ ಎಂದು ಕ್ಷಮೆಯಾಚನೆ.
- ಮೆನಯ ಆವರಣದಲ್ಲಿ ಪತ್ರ ಹಾಗೂ 6.50 ಲಕ್ಷ ರೂ. ಮೌಲ್ಯದ ಚಿನ್ನ ತಂದಿಟ್ಟ ಕಳ್ಳ.
Kakinada Thieves Return Stolen Gold With Apology Letter: ಯಾವುದೇ ಮನಸ್ಸಾಕ್ಷಿ ಇಲ್ಲದೇ ಸೈಬರ್ ಕಳ್ಳತನ, ಡಿಜಿಟಲ್ ಅರೆಸ್ಟ್ ಸೇರಿದಂತೆ ನಾನಾ ವಿಧಾನಗಳ ಮೂಲಕ ಅಮಾಯಕರನ್ನು ವಂಚಿಸುತ್ತಿರುವ ಈ ಕಾಲದಲ್ಲಿ ವಿಚಿತ್ರ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.
ಕದ್ದ ಹಣವನ್ನು ವಾಪಸ್ ಕೊಡೋದು ಅದಕ್ಕೆ ಸ್ವಾರಿ ಕೇಳೋದು ಇದೆಲ್ಲವನ್ನು ಸಿನಿಮಾದಲ್ಲಿ ನೋಡಿದ್ದೇವೆ. ಆದರೆ, ರಿಯಲ್ ಲೈಫ್ನಲ್ಲಿ ಇಂತದ್ದೊಂದು ಘಟನೆಗಳು ಜರುಗೋದು ಅಪರೂಪ. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವ ಈ ಕಾಲಮಾನದಲ್ಲಿ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಕಳ್ಳರೊಬ್ಬರು,
ಚಿನ್ನಾಭರಣ ಕದ್ದ ಎರಡು ವಾರದ ಬಳಿಕ ವಾಪಸ್ ತಂದಿಟ್ಟು ಸಾರಿ ಕೇಳಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಕಾಕಿನಾಡ ಜಿಲ್ಲೆಯ ಕರಪಮಂಡಲದ, ರಾಮಕಂಚಿ ರಾಜು ನಗರದ ನಿವಾಸಿಯಾಗಿರುವ ನಮಲ ಗಣೇಶ್ ಅವರು ಮನೆಯಲ್ಲಿ ಇಲ್ಲದ್ದನ್ನು ನೋಡಿಕೊಂಡಿದ್ದ ಕಳ್ಳರು, ಚಿನ್ನಕ್ಕೆ ಖನ್ನ ಹಾಕಿದ್ದರು. ಆಗಸ್ಟ್ 2ರಂದು ಕದ್ದ ಚಿನ್ನವನ್ನು ಕಳ್ಳರು ಮತ್ತೆ ಮನೆಯ ಆವರಣದಲ್ಲಿ ತಂದಿಟ್ಟು ಸಾರಿ 22 ಸಾವಿರ ಖರ್ಚಾಗಿದೆ. ವಾಪಸ್ ಕೊಡೋಕೆ ಆಗೋದಿಲ್ಲ ಎಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಏನಾಗಿತ್ತು?
ರಾಮಕಂಚಿ ರಾಜು ನಗರದ ನಿವಾಸಿಯಾಗಿರುವ ನಾಮಾಲ ಗಣೇಶ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಜು.18ರಂದು ಸ್ವಗ್ರಾಮಕ್ಕೆ ಹೋಗಿದ್ದರು. ಮೆನಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು. ಯಾರಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಖನ್ನ ಹಾಕಲು ಪ್ಲ್ಯಾನ್ ಮಾಡಿದ್ದರು.
ಗಣೇಶ್ ಅವರ ಬೀರು ಬೀಗ ಮುರಿದು 6.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 50 ಸಾವಿರ ರೂ. ನಗದು ಅನ್ನು ದೋಷಿ ಪರಾರಿಯಾಗಿದ್ದಾರೆ. ಮನೆಗೆ ವಾಪಾಸ್ ಆದ ಅವರು ಒಡವೆ ಕಳ್ಳತನವಾಗಿರುವುದನ್ನು ಅರಿತು ಸ್ಥಳೀಯರ ಪೊಲೀಸ್ ಠಾಣೆಗೆ ದೂರು ಕೊಟ್ಟರು. ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಶುರು ಮಾಡಿಕೊಂಡಿದ್ದರು.
ಮಾಡಿದ್ದು ತಪ್ಪು ಕ್ಷಮಿಸಿ
ಆಗಸ್ಟ್.2ರಂದು ಮುಂಜಾನೆ ಎದ್ದ ಅವರಿಗೆ ಪತ್ರ ಹಾಗೂ ಕಳುವಾದ ಚಿನ್ನ ನಗದು ಮನೆಯ ಆವರಣದಲ್ಲಿ ಸಿಕ್ಕಿತ್ತು. ಪತ್ರದಲ್ಲಿ ನಾವು ತಪ್ಪ ಮಾಡಿದ್ದೇವೆ ನಮ್ಮನ್ನು ಕ್ಷಮಿಸಿ ನಿಮ್ಮ 22 ಸಾವಿರ ರೂಪಾಯಿಯನ್ನು ಖರ್ಚು ಮಾಡಿಬಿಟ್ಟಿದ್ದೇವೆ. ಉಳಿದ್ದದನ್ನು ವಾಪಸ್ ನೀಡುತ್ತಿದ್ದೇವೆ. ಆದರೆ, ಖರ್ಚು ಮಾಡಿದ ಹಣ ವಾಪಸ್ ಕೊಡುವಷ್ಟು ಶಕ್ತರಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ತನಿಖೆ ಮುಂದುವರಿಕೆ
22 ಸಾವಿರ ರೂಪಾಯಿ ಖರ್ಚಾದರೂ ಸಹ ಚಿನ್ನ ವಾಪಸ್ ಸಿಕ್ಕಿದ್ದನ್ನು ಕಂಡ ಗಣೇಶ್ ನಿರಾಳರಾದರು. ಆದರೆ, ಈ ಕೆಲಸ ಮಾಡಿದ್ಯಾರು, ಹಣ ವಾಪಸ್ ಇಟ್ಟಿದ್ಯಾರು ಎನ್ನುವ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).