K Annamalai Quits BJP 
ದೇಶ

ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್!...K Annamalai Quits BJP

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕ ಕೆ. ಅಣ್ಣಾಮಲೈ ಪಕ್ಷಕ್ಕೆ ಅಧಿಕೃತವಾಗಿ ಗುಡ್‌ಬೈ.
  • ಕಳೆದ ಕೆಲವು ದಿನಗಳಿಂದ ರಾಜೀನಾಮೆ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ಬಿದ್ದ ತೆರೆ.
  • ಅಣ್ಣಾಮಲೈ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್.

ನವದೆಹಲಿ: ಕಳೆದ ಕೆಲವು ದಿನಗಳಿಂದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಪ್ರಭಾವಿ ನಾಯಕ ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಾರ್ಟಿ ರಾಜೀನಾಮೆ ನೀಡಿದ್ದಾರೆ. ಹೊಸ ಪಕ್ಷ ಕಟ್ಟಲಿದ್ದಾರೆ ಎನ್ನುವ ಊಹಾಪೋಹಾ ಹರಿದಾಡುತ್ತಿತ್ತು. ಇದಕ್ಕೆ ಕೊನೆಗೂ ಬ್ರೇಕ್​ ಬಿದ್ದಿದೆ.

ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್ ಅವರು ತಕ್ಷಣವೇ ಅಂಗೀಕರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. 

ಬಿಜೆಪಿ ಗುಡ್​ಬೈ

ಅಣ್ಣಾಮಲೈ ಅವರು ಬಿಜೆಪಿ ತೊರೆಯಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ರಾಷ್ಟ್ರೀಯ ನಾಯಕತ್ವ ಹಾಗೂ ಮೈತ್ರಿ ವಿಚಾರಗಳ ಬಗ್ಗೆ ಅಸಾಮಾಧಾನಗೊಂಡಿದ್ದಾರೆ. ಹೀಗಾಗಿ ಬಿಜೆಪಿಗೆ ಗುಡ್​ಬೈ ಹೇಳಲಿದ್ದಾರೆ ಎನ್ನಲಾಗಿತ್ತು.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್ ಅವರು ರಾಜೀನಾಮೆಯನ್ನು ಅಂಗೀಕರಿಸುವ ಮೂಲಕ ಅಣ್ಣಾಮಲೈ ಮತ್ತು ಬಿಜೆಪಿ ನಡುವಿನ ನಾಲ್ಕು ವರ್ಷಗಳ ರಾಜಕೀಯ ಪಯಣಕ್ಕೆ ಅಧಿಕೃತ ಅಂತ್ಯ ಹಾಡಿದ್ದಾರೆ.

ರಾಜೀನಾಮೆ ಅಂಗೀಕರಿಸಿದ್ದಾರೆ

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯ ಘಟಕದ ಅಧ್ಯಕ್ಷರಾದ  ಅಣ್ಣಾಮಲೈ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್ ಅವರು ಅಂಗೀಕರಿಸಿದ್ದಾರೆ ಎಂದು ಬಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು  ಅಣ್ಣಾಮಲೈ ಅವರು ಸೋಶಿಯಲ್​ ಮೀಡಿಯಾ ಮೂಲಕ  ಲೈವ್​  ಬಂದು  ಸಾರ್ವಜನಿಕರೊಂದಿಗೆ 'ಮುಕ್ತ, ಹೃದಯದಿಂದ ಹೃದಯದ ಸಂಭಾಷಣೆ'  ನಡೆಸಲು ಚಿಂತಿಸಿದ್ದರು. ಆ ಬಗ್ಗೆ ಅಧಿಕೃತ ಮಾಹಿತಿಯೂ ಇತ್ತು. ಅದಕ್ಕೂ ಮುನ್ನವೇ ಈ ಬೆಳವಣಿಗೆ ಸಂಭವಿಸಿದೆ. ಅಣ್ಣಾಮಲೈ ಅವರು ಮಂಗಳವಾರ ದೆಹಲಿಗೆ  ಬಂದು ಪಕ್ಷದ ಮುಖ್ಯಸ್ಥ ನಿತಿನ್ ನವಿನ್ ಅವರನ್ನು ಭೇಟಿಯಾಗಿ 'ಸೌಹಾರ್ದಯುತವಾಗಿ' ಪಾಲುದಾರಿಕೆಯನ್ನು ಕೊನೆಗೊಳಿಸಲು ಬಯಸುವುದಾಗಿ ಹೇಳಿದರು ಎನ್ನುವ ಮಾಹಿತಿ ಹೊರಬಿದ್ದಿದೆ.
ಮುಂದಿನ ಕತೆಯೇನು?

 ಕರ್ನಾಟದಕಲ್ಲಿ ದಕ್ಷ ಪೊಲೀಸ್​ ಅಧಿಕಾರಿ ಹಾಗೂ ಸಿಂಗಂ ಎಂದೇ ಖ್ಯಾತಿ ಪಡೆದ ಅಣ್ಣಾಮಲೈ ಅವರು 2020ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು.  ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಅಣ್ಣಾಮಲೈ ಅವರು ಒಂದು ವರ್ಷದ ನಂತರ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರಾದರು. 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷವು ಅವರನ್ನು ಚುನಾವಣಾ ಸಹ-ಉಸ್ತುವಾರಿಯನ್ನಾಗಿ ನೇಮಿಸಿತು. ಆದರೆ 2023ರಲ್ಲಿ ಬಿಜೆಪಿ ಸೋಲನುಭವಿಸಿತು. ಅಣ್ಣಾಮಲೈ ಅವರು ಹೆಚ್ಚಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ 2021ರಲ್ಲಿ ವಿಧಾನಸಭೆ ಚುನಾವಣೆ ಹಾಗೂ 2024ರಕಲ್ಲಿ ಲಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು 


ತಮಿಳುನಾಡಿನಲ್ಲಿ ಬಿಜೆಪಿಗೆ ಒಂದಿಷ್ಟು ಆಯಾಮ ತಂದುಕೊಟ್ಟಿದ್ದ ಅವರು ಕೊನೆಗೂ ಪಕ್ಷದಿಂದ ಹೊರಬಂದಿರುವುದು ಅಚ್ಚರಿ ಮೂಡಿಸಿದೆ. ಅಣ್ಣಾಮಲೈ ಅವರು ಹೊಸ ಪಕ್ಷ ಸ್ಥಾಪಿಸುತ್ತಾರೆ ಎನ್ನುವ ಚರ್ಷೆ ಇದ್ದು. ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ನೀಡಿಲ್ಲ, (ಏಜೆನ್ಸೀಸ್).