June 2026 is a SKY SPECTACLE month
- ಜೂನ್ ತಿಂಗಳ ಆಗಸ ವಿಸ್ಮಯ, 29ರವರೆಗೂ ನಡೆಯಲಿವೆ ಸಾಲು ಸಾಲು ಕೌತುಕ
- ಸುದೀರ್ಘ ಹಗಲು, ಸ್ಟ್ರಾಬೆರಿ ಮೂನ್, ಮಿಲ್ಕಿ ವೇ ಗ್ಯಾಲಕ್ಸಿ ಕಣ್ತುಂಬಿಕೊಳ್ಳುವ ಅವಕಾಶ
- ಜೂನ್29ರಂದು ಸ್ಟ್ರಾಬೆರಿ ಮೂನ್ ಗೋಚರ, ಹೀಗೆಂದರೆ ಏನು?
June 2026 is a SKY SPECTACLE month: ಖಗೋಳ ಪ್ರೇಮಿಗಳಿಗೆ ಈ ಬಾರಿಯ ಜೂನ್ ತಿಂಗಳು ಹಬ್ಬದೂಟದಂತಿದೆ. ಈ ತಿಂಗಳ 7 ರಿಂದ 29ರವರೆಗೂ ಸಾಕಷ್ಟು ಸೋಜಿಗವನ್ನು ಆಗಸದಲ್ಲಿ ಕಾಣಬಹುದು. ವರ್ಷದ ದೀರ್ಘ ಹಗಲಿನ ದಿನ, ಗುರು, ಶುಕ್ರ, ಬುಧ ಸರಳ ರೇಖೆಯಲ್ಲಿ ಸಂಚರಿಸುವುದು, ಸ್ಟ್ರಾಬೆರಿ ಮೂನ್ ಸೇರಿದಂತೆ ನಾನಾ ಕೌತುಕವನ್ನು ಆಗಸದಲ್ಲಿ ಕಂಡು ಕಣ್ತುಂಬಿಕೊಳ್ಳಬಹುದಾಗಿದೆ.
ಆಕಾಶದಲ್ಲಾಗುವ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರತೆಯಿಂದ ಕಾಯುವವರರಿಗೆ, ಖಗೋಳ ಶಾಸ್ತ್ರಜ್ಞರಿಗೆ ಜೂನ್ ಮಾಸ ಸೋಜಿಗದ ದಿನಗಳಾಗಿದೆ. ಯಾವ ದಿನ, ಏನು ವಿಶೇಷತೆ ಆಗಸದಲ್ಲಾಗುವ ವಿಶೇಷತೆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಜೂನ್ 15 ಸೂಪರ್ ಮೂನ್ ಡೇ
ಮಿಲ್ಕಿ ವೇ ಗ್ಯಾಲಕ್ಸಿ
ಜೂನ್ 15ರಂದು ಆಕಾಶದಲ್ಲಿ ಕ್ಷೀರಪಥ ಗ್ಯಾಲಕ್ಸಿ ಪ್ರಕಾಶಮಾನವಾಗಿ ಕಾಣಸಿಗುತ್ತದೆ. ಇದನ್ನು ಮಧ್ಯರಾತ್ರಿ 12ರಿಂದ ಬೆಳಗ್ಗೆ 4ರೊಳಗೆ ವೀಕ್ಷಿಸಬಹುದು. ಅಂದು ಭೂಮಿಯ ಉಪಗ್ರಹವಾದ ಚಂದ್ರನ ಬೆಳಕು ಭೂಮಿಯ ಯಾವ ಭಾಗಕ್ಕೂ ಕೊಂಚವು ಬೀಳದ ಕಾರಣ ಸ್ಪಷ್ಟವಾಗಿ ಕಾಣುವ ಕ್ಷೀರ ಪಥ ಗ್ಯಾಲಕ್ಸಿಯನ್ನು ವೀಕ್ಷಿಸಬಹುದು. ಈ ದಿನ ನಕ್ಷತ್ರಗಳನ್ನು ಕಣ್ಣು ತುಂಬಿಕೊಳ್ಳಬಹುದು ಎನ್ನಲಾಗಿದೆ. ಇದು ಜೀವಮಾನದಲ್ಲೇ ಒಮ್ಮೆಯಷ್ಟೇ ಗೋಚರಿಸುವುದು ಎನ್ನುವುದು ಖಗೋಳ ಶಾಸ್ತ್ರಜ್ಞರ ಅಭಿಪ್ರಾಯ.
ಜೂನ್18 4 ಗ್ರಹಗಳ ಗೋಚರ
ಬುಧ, ಗುರು, ಶುಕ್ರ, ಚಂದ್ರ ನಾಲ್ಕು ಗ್ರಹಗಳು ಒಂದೇ ಸಾಲಿನಲ್ಲಿ ಪಶ್ಚಿಮ ದಿಕ್ಕಿನಲ್ಲಿ ಕಾಣಿಸುವುದು. ಶುಕ್ರ ಗ್ರಹವು ಪ್ರಕಾಶಮಾನವಾಗಿ ಕಂಡರೆ ಅದಕ್ಕಿಂತ ಕೊಂಚ ಮಂದವಾಗಿ ಗುರು ಗ್ರಹ ಕಾಣುತ್ತದೆ. ಇದನ್ನು ಬರಿಗಣ್ಣಿನಲ್ಲಿ ನೋಡಬಹುದು. ಆದರೆ, ಬುಧ ಕಾಣಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.
ಜೂನ್21 ದೀರ್ಘ ಹಗಲು
ಪ್ರತಿ ವರ್ಷದಂತೆ ಈ ವರ್ಷವು ಜೂನ್ 21ರಂದು ದೀರ್ಘ ಕಾಲದವರೆಗೂ ಹಗಲಿರುವ ದಿನ ಇದಾಗಿದೆ. ಈ ದಿನ ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತಾ ಸೂರ್ಯನ ಕಡೆ ವಾಲಿದಾಗ ಹಗಲು ಸುದೀರ್ಘವಾಗಿ ಇದ್ದು, ಕತ್ತಲು ಕಡಿಮೆ ಕಾಲ ಗೋಚರಿಸುತ್ತದೆ ಎನ್ನಲಾಗಿದೆ.
ಸ್ಟಾಬ್ರೆರಿ ಮೂನ್ (ಹುಣ್ಣಿಮೆ‘)
ಖಗೋಳ ಶಾಸ್ತ್ರದಲ್ಲಿ ಸಂಪೂರ್ಣವಾಗಿ ಕಾಣುವ ಚಂದ್ರನಿಗೆ ಒಂದೊಂದು ಹೆಸರಿದೆ. ರಕ್ತ ಚಂದಿರ ಸೇರಿದಂತೆ ನಾನಾ ಹೆಸರಿದೆ, ಈ ಬಾರಿ ಜೂನ್ 29ರಂದು ಗೋಚರಿಸಲಿರುವ ಪೂರ್ಣ ಚಂದ್ರನಿಗೆ ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಚಂದ್ರನಿಂದ ಹೊರಡ ಬೆಳಗು ಧರೆಯನ್ನು ಪ್ರವೇಶಿಸಿದಾಗ ಬೆಳಕು ಚದುರಿ, ಚಂದ್ರ ಸ್ಟ್ರಾಬೆರಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎನ್ನಲಾಗಿದೆ.
ಪ್ಲಾನಿಟರಿ ಕಿಸ್
ಜೂನ್9ರಂದು ಶುಕ್ರ ಮತ್ತು ಗುರು ಗ್ರಹವು ಬಹಳ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಯುತಿ ಎಂದು ಕರೆಯಲಾಗುತ್ತದೆ. ಇವು ತಮ್ಮ ತಮ್ಮ ಕಕ್ಷೆಗಳಿಂದ ಸಾಕಷ್ಟು ದೂರವಿರುತ್ತವೆಯಾದರೂ ಭೂಮಿಯಿಂದ ಒಂದೇ ರೇಖೆಯಲ್ಲಿವೆ ಎಂದು ಕಾಣುತ್ತವೆ. ಇದನ್ನು ಖಗೋಳ ಶಾಸ್ತ್ರದಲ್ಲಿ ಪ್ಲಾನಿಟರಿ ಕಿಸ್ ಎನ್ನಲಾಗುತ್ತದೆ, (ಏಜೆನ್ಸೀಸ್)