ಗುರುತೇ ಸಿಗದಂತಾದ ಜಾನ್ ಅಬ್ರಹಾಂ..! ಕ್ಲೀನ್ ಶೇವ್ ಲುಕ್‌ನಲ್ಲಿ ಆಘಾತ ನೀಡಿದ ನಟ
ಮುಂಬೈ: ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಎಂದೇ ಕರೆಯಲ್ಪಡುವ ನಟ ಜಾನ್ ಅಬ್ರಹಾಂರ(John Abraham) ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಯಾವಾಗಲೂ ಗಡ್ಡ ಮತ್ತು ಮೀಸೆಯೊಂದಿಗೆ ಮಾದಕವಾಗಿ ಕಾಣಿಸುತ್ತಿದ್ದ ಜಾನ್, ಇದೀಗ ಸಂಪೂರ್ಣ ಕ್ಲೀನ್ ಶೇವ್ ಮತ್ತು ಸಾಲ್ಟ್-ಅಂಡ್-ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ವೈರಲ್ ಲುಕ್: ನಿಜಕ್ಕೂ ಏನಾಗಿದೆ ಜಾನ್‌ಗೆ..?
ತಮ್ಮ ತಂಡದ ಸದಸ್ಯರೊಂದಿಗೆ ಪೋಸ್ ನೀಡಿರುವ ಜಾನ್ ಅಬ್ರಹಾಂ ಅವರ ಈ ಚಿತ್ರಗಳಲ್ಲಿ, ಅವರು ಮೊದಲಿನಿಗಿಂತಲೂ ಸಾಕಷ್ಟು ತೆಳ್ಳಗಾಗಿ ಕಾಣಿಸುತ್ತಿದ್ದಾರೆ. ಮುಖದಲ್ಲಿ ನೆರಿಗೆಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಇವರು ಜಾನ್ ಅಬ್ರಹಾಂ ಅವರೇ ಅಥವಾ ಬೇರೆ ಯಾರಾದರೂ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಜಾನ್ ಅವರ ಈ ಹಠಾತ್ ಬದಲಾವಣೆಯು ಅವರ ಆರೋಗ್ಯದ ಬಗ್ಗೆ ಹತ್ತಾರು ಊಹಾಪೋಹಗಳಿಗೆ ಕಾರಣವಾಗಿದೆ.
ಸಿನಿಮಾ ಪಾತ್ರಕ್ಕಾಗಿ ಈ ಬದಲಾವಣೆಯೇ..?
ಜಾನ್ ಅಬ್ರಹಾಂ ಅವರ ಈ ವಿಭಿನ್ನ ಅವತಾರವು ಅವರ ಮುಂಬರುವ ಸಿನಿಮಾಗಳಿಗಾಗಿ ಇರಬಹುದು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಮಾಜಿ ಐಪಿಎಸ್ ಅಧಿಕಾರಿ ರಾಕೇಶ್ ಮರಿಯಾ ಅವರ ಬಯೋಪಿಕ್‌ಗಾಗಿ ಜಾನ್ ಈ ರೀತಿ ತೆಳ್ಳಗಾಗಿದ್ದಾರೆ ಮತ್ತು ವಯಸ್ಸಾದ ವ್ಯಕ್ತಿಯ ಲುಕ್ ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ನಟನ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
ಅಭಿಮಾನಿಗಳ ರಿಯಾಕ್ಷನ್: ಆತಂಕ ಮತ್ತು ಬೆಂಬಲ
ಜಾನ್ ಅವರ ಫೋಟೋ ನೋಡಿ ಒಬ್ಬ ಅಭಿಮಾನಿ ಇವರನ್ನು ಗುರುತಿಸಲೇ ಸಾಧ್ಯವಾಗುತ್ತಿಲ್ಲ, ಏನಾಗಿದೆ ಇವರಿಗೆ?" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅವರಿಗೆ ಈಗ 53 ಅಥವಾ 54 ವರ್ಷ, ಈ ವಯಸ್ಸಿನಲ್ಲಿ ಇಂತಹ ಬದಲಾವಣೆ ಸಹಜ, ಅವರನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಬೆಂಬಲ ಸೂಚಿಸಿದ್ದಾರೆ. ಧೂಮ್ ಸಿನಿಮಾದ ಆ ಕಟ್ಟುಮಸ್ತಾದ ದೇಹದ ಜಾನ್ ಅಬ್ರಹಾಂ ಅವರನ್ನು ನೆನಪಿಸಿಕೊಳ್ಳುತ್ತಿರುವ ಅನೇಕರು, ಅವರ ಹಳೆಯ ಲುಕ್ ಮರಳಿ ಬರಲಿ ಎಂದು ಆಶಿಸುತ್ತಿದ್ದಾರೆ.
ಫಿಟ್‌ನೆಸ್ ಐಕಾನ್ ಎಂದೇ ಹೆಸರಾದ ಜಾನ್ ಅಬ್ರಹಾಂ ಯಾವಾಗಲೂ ತಮ್ಮ ದೇಹದ ಬಗ್ಗೆ ಜಾಗರೂಕರಾಗಿರುತ್ತಾರೆ. ಹಾಗಾಗಿ, ಈ ಅನ್‌ರೆಕಗ್ನೈಸಬಲ್ ಲುಕ್ ಕೇವಲ ಪಾತ್ರಕ್ಕಾಗಿ ಇರಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ,(ಏಜೆನ್ಸೀಸ್).