ಟ್ರೋಲ್ ಮಾಡಿದವರಿಗೆ 'ಬ್ಯಾಡ್ ಬಾಯ್' ಶೈಲಿಯಲ್ಲಿ ಸಲ್ಮಾನ್ ಖಾನ್ ಖಡಕ್ ತಿರುಗೇಟು
- ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮತ್ತು ಸಲ್ಮಾನ್ ಖಾನ್ ಟ್ವೀಟ್ ವಿವಾದ
- ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಟ್ರೋಲ್
- ಟ್ರೋಲ್ ಮಾಡಿದವರಿಗೆ 'ಬ್ಯಾಡ್ ಬಾಯ್' ಶೈಲಿಯಲ್ಲಿ ಸಲ್ಮಾನ್ ಖಾನ್ ಖಡಕ್ ತಿರುಗೇಟು
ಮುಂಬೈ: ನೀಟ್ ಪರೀಕ್ಷೆ ಸೇರಿ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಉಪವಾಸ ನಡೆಸುತ್ತಿದ್ದ ಪರಿಸರವಾದಿ ಸೋನಮ್ ವಾಂಗ್ಚುಕ್ 26 ದಿನಗಳ ನಂತರ ತಮ್ಮ ಸತ್ಯಾಗ್ರಹಗಳನ್ನು ಹಿಂಪಡೆದುಕೊಂಡರು.
ಆದರೆ, ಸೋನಮ್ ವಾಂಗ್ಚುಕ್ ತಮ್ಮ ಉಪವಾಸವನ್ನು ಕೈ ಬಿಡಲು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan on Trolls) ಕಾರಣ ಎಂದು ಸೋಷಿಯಲ್ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದರ ಜೊತೆಗೆ ಸಲ್ಲು ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಈಗ ಈ ಟ್ರೋಲ್ ಮತ್ತು ಮೀಮ್ಗಳಿಗೆ ಸಲ್ಮಾನ್ ಖಾನ್ ತಮ್ಮದೇ ಬ್ಯಾಡ್ ಭಾಯ್ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಸೋನಮ್ ಬ್ರೋ, ಉಪವಾಸ ಸಾಕು!
ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ, ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದ ಹಿನ್ನಲೆ ನಟ ಸಲ್ಮಾನ್ ಖಾನ್ ಕೂಡ ಟ್ವಿಟ್ ಮಾಡಿದ್ದರು.
ಕೆಲ ಸಮಯದ ನಂತರ ಮತ್ತೆ ಟ್ವಿಟ್ ಮಾಡಿದ ಸಲ್ಲು, ಸೋನಮ್ ಬ್ರೋ, ಈ ಉಪವಾಸವನ್ನು ನಿಲ್ಲಿಸಿ ಮುಂದಿನ ದಿನಗಳಲ್ಲಿ ಮತ್ತೆ ಈ ಉಪವಾಸ ಮಾಡಿ, ಈಗ ನಿಲ್ಲಿಸಿ, ನಿಮಗೆ ಬೇಕಿದ್ದರೆ ನನ್ನ ಮನೆಯಿಂದಲೇ ಊಟವನ್ನು ಕಳಿಸುತ್ತೇನೆ ಎಂದಿದ್ದರು.
ಹಾಗೆಯೇ, ವಿದ್ಯಾರ್ಥಿಗಳೇ ಈ ಹೋರಾಟ ನಿಮಗೆ ಸಾಕು, ಮನೆಗೆ ತೆರಳಿ, ನಿಮ್ಮ ಪಾಲಕರು ನಿಮ್ಮ ಹಾದಿ ಕಾಯುತ್ತಿದ್ದಾರೆ ಎಂದು ಬರೆದಿದ್ದರು. ಈ ಟ್ವಿಟ್ನಿಂದ ಕೆಲವೊಂದಿಷ್ಟು ಜನ ಸಲ್ಮಾನ್ ಖಾನ್ರನ್ನು ಟ್ರೋನ್ ಮತ್ತು ಮೀಮ್ ಮಾಡುತ್ತಿದ್ದರು. ಈಗ ಇವಕ್ಕೆಲ್ಲಾ ಸಲ್ಲು ಮಿಯಾ ಖಡಕ್ ತಿರುಗೇಟು ನೀಡಿದ್ದಾರೆ.
ಜೋ ಢರ್ ಗಯಾ ವೋ ಮರ್ ಗಯಾ!
ಇಂದು ಟ್ವಿಟರ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, ಜಿಮ್ನಲ್ಲಿ ಕಸರತ್ತು ಮುಗಿಸಿ ಕನ್ನಡಿ ಮುಂದೆ ನಿಂತು ಫೋಟೊವೊಂದನ್ನು ಹಂಚಿಕೊಂಡಿದ್ದು, ಅದರ ಕೆಳಗೆ ಜೋ ಢರ್ ಗಯಾ ವೋ ಮರ್ ಗಯಾ! (ಯಾರು ಹೆದರಿದರೋ ಅವರು ಸತ್ತರು) ಎಂದು ತಮ್ಮನ್ನು ಟ್ರೋಲ್ ಮಾಡಿದವರಿಗೆಲ್ಲಾ ಹೆದರು ಜಾಯಮಾನ ತನ್ನದಲ್ಲ ಎಂಬ ಧಾಟಿಯಲ್ಲಿ ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ, (ಏಜನ್ಸೀಸ್).