ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 17-18ರಂದು ಒಮನ್‌ಗೆ ಭೇಟಿ ನೀಡಿದ ವೇಳೆ ಅವರ ಬಲ ಕಿವಿಯಲ್ಲಿ ಬಿಳಿ ಬಣ್ಣದ ಸಣ್ಣ ಉಪಕರಣ ಕಾಣಿಸಿಕೊಂಡಿದ್ದು ಸಾಮಾಜಿಕ ಮಾಧ್ಯಮಾದಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಈ ಭೇಟಿಯ ಸಂದರ್ಭದಲ್ಲಿ ಒಮನ್‌ನ ಉಪ ಪ್ರಧಾನಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಭೇಟಿಯಾದಾಗ ಮತ್ತು ಆಗಮಿಸಿದ ಸಮಯದಲ್ಲಿ ಪ್ರಧಾನಿ ಮೋದಿ ಅವರ ಬಲ ಕಿವಿಯಲ್ಲಿ ಬಿಳಿ ಬಣ್ಣದ ಸಣ್ಣ ಉಪಕರಣ ಕಾಣಿಸಿಕೊಂಡಿತ್ತು. ಇದು ಮೊದಲು ಕೆಲವರು ಕಿವಿ ಆಭರಣ (earring) ಎಂದು ತಪ್ಪಾಗಿ ಭಾವಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಪ್ರಧಾನಿ ಕಿವಿಯಲ್ಲಿದ್ದೇನು..?
ಅದು ವಾಸ್ತವವಾಗಿ ಅದು ಸಮಕಾಲೀನ ಅನುವಾದ ಉಪಕರಣ (real-time translation device ಅಥವಾ interpreter earpiece) ಆಗಿದೆ. ವಿದೇಶಿ ಭೇಟಿಗಳ ಸಂದರ್ಭದಲ್ಲಿ ಭಾಷಾಂತರಕ್ಕಾಗಿ ಪ್ರಧಾನಿಗಳು ಮತ್ತು ಇತರ ನಾಯಕರು ಇಂತಹ ಉಪಕರಣಗಳನ್ನು ಬಳಸುವುದು ಸಾಮಾನ್ಯ. ಇದು ಅರೇಬಿಕ್ ಅಥವಾ ಇತರ ಭಾಷೆಗಳ ಮಾತುಕತೆಯನ್ನು ತಕ್ಷಣವೇ ಇಂಗ್ಲೀಷ್‌ಗೆ ಅನುವಾದಿಸಿ ಕಿವಿಗೆ ತಲುಪಿಸುತ್ತದೆ.ಈ ಉಪಕರಣದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿ ಸದ್ದು ಹೆಚ್ಚಾಗಿತ್ತು. ನಂತರ ಇದೀಗ ಸ್ಪಷ್ಟೀಕರಣ ಬಂದಿದೆ.
ಈ ಭೇಟಿಯಲ್ಲಿ ಭಾರತ-ಒಮನ್ ನಡುವೆ ವ್ಯಾಪಾರ ಒಪ್ಪಂದಗಳು ಸಹಿ ಹಾಕಲಾಗಿದ್ದು, ಪ್ರಧಾನಿ ಮೋದಿ ಅವರಿಗೆ ಒಮನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸಿತ್ತು. ಆದರೆ ಈ ಕಿವಿ ಉಪಕರಣದ ಚರ್ಚೆಯೇ ಹೆಚ್ಚು ಸದ್ದು ಮಾಡಿತ್ತು!
ಗಲ್ಫ್ ರಾಷ್ಟ್ರದೊಂದಿಗಿನ ಒಪ್ಪಂದ
ಭಾರತವು ಗಲ್ಫ್ ರಾಷ್ಟ್ರದೊಂದಿಗಿನ ತನ್ನ ಸಂಬಂಧವನ್ನು ವೃದ್ಧಿಸಲು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಓಮನ್ ಭೇಟಿಯು ಒಂದು ಮಹತ್ವದ ಕ್ಷಣವಾಗಿತ್ತು.
ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಒಮಾನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿದರು, ಇದು ಭಾರತದ ರಫ್ತಿನ ಸುಮಾರು 98% ಗೆ ಸುಂಕ ರಹಿತ ಪ್ರವೇಶವನ್ನು ಒದಗಿಸುತ್ತದೆ. ಮತ್ತೊಂದೆಡೆ, ಭಾರತವು ಖರ್ಜೂರ ಮತ್ತು ಅಮೃತಶಿಲೆಯಂತಹ ಒಮಾನ್ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಣೆಮ ಮಾಡಲಾಗುತ್ತಿದೆ.
"ಇದು ಭಾರತ ಮತ್ತು ಒಮಾನ್ ಜನರ ನಡುವಿನ ಪ್ರೀತಿ ಮತ್ತು ವಿಶ್ವಾಸದ ಸಂಕೇತವಾಗಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ,(ಏಜೆನ್ಸೀಸ್).