Japan says no to Indian mangoes after 20 yrs 
ದೇಶ

20 ವರ್ಷದ ಬಳಿಕ ಮತ್ತೆ ಭಾರತದಿಂದ ಮಾವು ಆಮದು ನಿಷೇಧಿಸಿದ ಜಪಾನ್​​, ಕಾರಣ ಏನು?..Japan

ಪ್ರಮುಖ ಮುಖ್ಯಾಂಶಗಳು

  • ಭಾರತದಿಂದ ಮಾವು ಆಮದು ನಿಷೇಧಿಸಿದ ಜಪಾನ್
  • ಕೇಸರ್, ಅಲ್ಫೋನ್ಸೊ, ಲ್ಯಾಂಗ್ರಾ ಮತ್ತು ಬಂಗನಪಲ್ಲಿ ಮಾವು ಬೆಳೆಗಾರರಿಗೆ ಭಾರಿ ನಷ್ಟ
  • ಕೀಟಗಳ ನಿಯಂತ್ರಣಕ್ಕೆ ಬಳಸುವ ತಾಂತ್ರಿಕ ಪ್ರಕ್ರಿಯೆಗಳಲ್ಲಿ ನ್ಯೂನತೆ ಹಿನ್ನೆಲೆ ಬ್ಯಾನ್
ಬೇಸಿಗೆ ಬಂತೆಂದರೆ ಸಾಕು ಭಾರತದಲ್ಲಿ ಮಾವು, ಹಲಸಿನದ್ದೇ ಪಾರಮ್ಯ.  ಒಂದೆಡೆ ಮಾವಿನ ಸೀಸನ್​ ಅನ್ನು ಭಾರತ ಸಂಭ್ರಮಿಸುತ್ತದ್ದರೆ,  ಮತ್ತೊಂದು ಕಡೆ ಜಪಾನ್​ ದೇಶವು, 
 ಮತ್ತೆ ಭಾರತದಿಂದ ಮಾವಿನ ಹಣ್ಣುಗಳ ಆಮದನ್ನು ನಿಷೇಧಿಸಿ, ಶಾಕಿಂಗ್​ ನ್ಯೂಸ್​ ಅನ್ನು ಕೊಟ್ಟಿದೆ.

ಜಪಾನ್ ರೂಲ್ಸ್ ಏನು?

ಹೌದು, ಜಪಾನ್​ ದೇಶವು ಆಹಾರ ರಫ್ತು ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸುತ್ತದೆ.  ಭಾರತದಿಂದ ರಫ್ತಾಗುವ ಮಾವಿನ ಹಣ್ಣುಗಳು ಜಪಾನ್ ತಲುಪುವ ಮುನ್ನ ಕೀಟ ಮುಕ್ತವಾಗಿರಲು ನಿರ್ದಿಷ್ಟ ತಾಪಮಾನದಲ್ಲಿ ಆವಿಯ ಶಾಖದ ಚಿಕಿತ್ಸೆಗೆ(VHT) ಒಳಪಡಿಸುವುದು ಕಡ್ಡಾಯವಾಗಿದೆ. ಆದರೆ, ಮಾರ್ಚ್​​ನಲ್ಲಿ ನಡೆಸಿದ ರಫ್ತು ಸಾಗಣೆಯಲ್ಲಿ ಈ ಪ್ರಕ್ರಿಯೆಯು ಜಪಾನ್ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿಲ್ಲದಿರುವುದು ಪತ್ತೆಯಾಗಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಮಾರ್ಚ್​​ನಲ್ಲಿ ಜಪಾನ್ ನಡೆಸಿದ ತಪಾಸಣೆ ಸಮಯದಲ್ಲಿ ಭಾರತೀಯ ಸಂಸ್ಕರಣಾ ಸೌಲಭ್ಯಗಳಲ್ಲಿ ಧೂಮಪಾನ ಮತ್ತು ಸೋಂಕು ಸೇರಿದಂತೆ ಹಲವು ನ್ಯೂನ್ಯತೆಗಳನ್ನು ಜಪಾನಿನ ಕ್ವಾರಂಟೈನ್ ನಿರೀಕ್ಷಕರು ಕಂಡುಕೊಂಡ  ನಂತರ ಭಾರತದಿಂದ ತಾಜಾ ಮಾವಿನಹಣ್ಣಿನ ಆಮದನ್ನು ಜಪಾನ್ ನಿಲ್ಲಿಸಿದೆ.  ಏಪ್ರಿಲ್ ನಿಂದ ಜೂನ್ ವರೆಗಿನ ಗರಿಷ್ಠ ರಫ್ತು ಅವಧಿಯನ್ನು ಅಮಾನತುಗೊಳಿಸಲಾಗಿದೆ.

ಏನಿದು VHT?

ನಿರ್ದಿಷ್ಟ ತಾಪಮಾನದಲ್ಲಿ ಆವಿಯ ಶಾಖದ ಚಿಕಿತ್ಸೆಗೆ  ರಾಸಾಯನಿಕೇತರ ಕ್ವಾರಂಟೈನ್ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಹಣ್ಣಿನ ನೊಣಗಳು ಮತ್ತು ಇತರ ಕೀಟಗಳನ್ನು ತೊಡೆದುಹಾಕಲು ಮಾವಿನಹಣ್ಣುಗಳನ್ನು ನಿಯಂತ್ರಿತ ಬಿಸಿ, ಆರ್ದ್ರ ಗಾಳಿಯ ಪರಿಸ್ಥಿತಿಗಳಿಗೆ ಒಳಪಡಿಸಲಾಗುತ್ತದೆ. ಜಪಾನ್‌ಗೆ ಭಾರತೀಯ ಮಾವಿನ ರಫ್ತನ್ನು ನಿಯಂತ್ರಿಸುವ ದ್ವಿಪಕ್ಷೀಯ ಪ್ರೋಟೋಕಾಲ್ ಅಡಿಯಲ್ಲಿ ಇದು ಕಡ್ಡಾಯವಾಗಿದೆ.
20 ವರ್ಷಗಳ ಸುದೀರ್ಘ ಸಂಬಂಧ

20 ವರ್ಷ ಯಶಸ್ವಿ ರಫ್ತು

2006ರಿಂದ ಜಪಾನ್​​ ಪ್ರತಿ ವರ್ಷವು ಟನ್​ಗಟ್ಟಲೇ  ಭಾರತದ ಕೇಸರ್, ಅಲ್ಫೋನ್ಸೊ, ಲ್ಯಾಂಗ್ರಾ ಮತ್ತು ಬಂಗನಪಲ್ಲಿ ಮಾವುಗಳು ಜಪಾನ್​ಗೆ ರಫ್ತು ಮಾಡಲಾಗುತ್ತಿದೆ. 20 ವರ್ಷಗಳ ಯಶಸ್ವಿಯಾಗಿ ಮಾವು ರಫ್ತು ಮಾಡಿದ ಬಳಿಕ ಈ ಬಾರಿ ಭಾರತಕ್ಕೆ ಬೃಹತ್​ ಶಾಕ್​ ಅನ್ನು ಕೊಟ್ಟಿದೆ.

ಈ ಹಿಂದೆಯೂ ನಿಷೇಧ ಹೇರಿತ್ತು

1986ರಲ್ಲಿಯೂ ಮಾವುಗಳ ಮೇಲೆ ನೊಣಗಳ ಬಾಧೆ ಕಂಡುಬಂದಿದ್ದರಿಂದ ಜಪಾನ್​ ಭಾರತದಿಂದ ಮಾವು ಆಮದು ಮಾಡುಕೊಳ್ಳಲು ನಿಷೇಧ ಹೇರಿತ್ತು. ಅದಾಗಿ  20 ವರ್ಷದ ನಂತರ ತೆರುವು ಮಾಡಿತ್ತು. ಆದರೆ ಈಗ ಮತ್ತೆ ಅಂತದ್ದೇ ಸಮಸ್ಯೆಯನ್ನು ಉಲ್ಲೇಖಿಸಿ ನಿರ್ಬಂಧಿಸಿದೆ.

ಆಲ್ಫಾನ್ಸೋ ಮತ್ತು ಕೇಸರ್  ಬೆಳೆಗಾರರಿಗೆ ನಷ್ಟ

ಭಾರತದ ಪಶ್ಚಿಮ ಕರಾವಳಿ ಮತ್ತು ಗುಜರಾತ್ ಭಾಗದಲ್ಲಿ ಬೆಳೆಯಲಾಗುವ ಆಲ್ಫಾನ್ಸೋ ಮತ್ತು ಕೇಸರ್, ಲ್ಯಾಂಗ್ರಾ, ಬಂಗನ್ ಪಲ್ಲಿ ತಳಿಗಳಿಗೆ ಜಪಾನ್‌ನಲ್ಲಿ ಭಾರಿ ಬೇಡಿಕೆಯಿದೆ. ಪ್ರತಿವರ್ಷ ನೂರಾರು ಟನ್ ಮಾವಿನ ಹಣ್ಣುಗಳು ಜಪಾನ್‌ಗೆ ರಫ್ತಾಗುತ್ತವೆ. ಪ್ರಸ್ತುತ ಹಣ್ಣಿನ ಸೀಸನ್ ಭರದಿಂದ ಸಾಗುತ್ತಿರುವಾಗಲೇ ಜಪಾನ್ ನಿಷೇಧ ಹೇರಿರುವುದರಿಂದ, ಈಗಾಗಲೇ ಸಿದ್ಧವಾಗಿದ್ದ ಆರ್ಡರ್‌ಗಳು ರದ್ದಾಗಿದ್ದು, ತೋಟಗಾರಿಕಾ ವಲಯ ಹಾಗೂ ರಫ್ತು ಉದ್ಯಮಿಗಳು ಕಂಗಾಲಾಗಿದ್ದಾರೆ.

ಜಪಾನ್ ದೇಶವು ಮಾವಿನ ಹಣ್ಣು ಇರಲಿ ಅಥವಾ ಮೀನು ಇರಲಿ, ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ಜಗತ್ತಿನಲ್ಲೇ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ . ಜಪಾನ್‌ನ ಈ ಕಠಿಣ ನಿಯಮಗಳನ್ನು ಪರಿಗಣಿಸಿ, ಭಾರತ ಸರ್ಕಾರವು 2007 ರಲ್ಲಿ ತಿರುಪತಿಯಲ್ಲಿ ಮೊದಲ ವಿಹೆಚ್‌ಟಿ ಪ್ಲಾಂಟ್ ಸ್ಥಾಪಿಸುವ ಮೂಲಕ ದೇಶದ ವಿವಿಧೆಡೆ ಹಲವು ಸಂಸ್ಕರಣಾ ಘಟಕಗಳನ್ನು ತೆರೆದಿತ್ತು. ಅಂದಿನಿಂದ ಭಾರತವು ಅತ್ಯಂತ ಎಚ್ಚರಿಕೆಯ ಸಂಸ್ಕರಣೆಯ ನಂತರವೇ ಜಪಾನ್‌ಗೆ ಮಾವನ್ನು ರಫ್ತು ಮಾಡುತ್ತಿತ್ತು. ಆದರೆ ಈ ವರ್ಷ ಜಪಾನ್  ಮತ್ತೆ ನಿರ್ಬಂಧ ಹೇರಿರುವುದು ಭಾರತದ ಮಾವು ಮಾರುಕಟ್ಟೆಗೆ ಭಾರಿ ಹಿನ್ನಡೆ ತಂದಿದೆ, (ಏಜೆನ್ಸೀಸ್).