ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್
ನವದೆಹಲಿ: ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯ ಬಗ್ಗೆ ಜನಸೇನಾ ಎಂದಿಗೂ ವಿರೋಧಿಸಿರಲಿಲ್ಲ, ಆದರೆ ಅದನ್ನು ಕಾಂಗ್ರೆಸ್ ವಿಭಜಿಸಿದ ರೀತಿಯ ಬಗ್ಗೆ ತಮಗೆ ಅತೃಪ್ತಿಯಿದೆ ಎಂದು ಸೋಮವಾರ(ಜೂ. 15) ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) ಹೇಳಿದ್ದಾರೆ.
ದೆಹಲಿಯಲ್ಲಿ ಜನ ಸೇನಾ ಪ್ರಸ್ಥಾನಂ ಮತ್ತು ರಾಷ್ಟ್ರೀಯ ಏಕೀಕರಣಕ್ಕಾಗಿ ಎಂಬ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ರಾಷ್ಟ್ರೀಯ ಏಕೀಕರಣದ ಕುರಿತು ಜನಸೇನಾಗೆ ನಿರ್ದೇಶನ ನೀಡಿದರು. ಜನ ಸೇನಾ ಪಕ್ಷ ಪ್ರಾರಂಭವಾಗಿ 12 ವರ್ಷಗಳು ಕಳೆದಿವೆ. ಈ 12 ವರ್ಷಗಳಲ್ಲಿ ಅನೇಕ ಚಳುವಳಿಗಳು ಮತ್ತು ಹೋರಾಟಗಳನ್ನು ನಡೆಸಲಾಗಿದೆ ಎಂದಿದ್ದಾರೆ.
ಅಧಿಕಾರಕ್ಕೆ ಬರುವ ಭರವಸೆಯೊಂದಿಗೆ ಪಕ್ಷವನ್ನು ರಚಿಸಲಾಗಿಲ್ಲ ಎಂದಿರುವ ಅವರು, ದೇಶದ ಸಮಗ್ರತೆಯನ್ನು ರಕ್ಷಿಸುವುದು ಜನಸೇನಾದ ಗುರಿಯಾಗಿದೆ. ನಾನು ದೇಶದ ಸಮಗ್ರತೆಗೆ ಮೊದಲ ಆದ್ಯತೆ ನೀಡಲು ಬಯಸುತ್ತೇನೆ. ಕೆಲವು ಪಕ್ಷಗಳು ತಮ್ಮ ಉಳಿವಿಗಾಗಿ ದೇಶದ ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ತೆಲಂಗಾಣ ರಚನೆಯನ್ನು ತಾವು ಎಂದಿಗೂ ವಿರೋಧಿಸಲಿಲ್ಲ. ಕಾಂಗ್ರೆಸ್ ಆಂಧ್ರಪ್ರದೇಶವನ್ನು ವಿಭಜಿಸಿದ ರೀತಿಯ ಬಗ್ಗೆ ತಾವು ಕಳವಳ ವ್ಯಕ್ತಪಡಿಸಿದ್ದೇನೆ. ಕಾಂಗ್ರೆಸ್ ಅದನ್ನು ವಿಭಜಿಸಿದ ರೀತಿ. ಅತೃಪ್ತಿ ಮತ್ತು ಅಶಾಂತಿಯನ್ನು ಸೃಷ್ಟಿಸಿತು. ಆಸ್ತಿ ಹಂಚಿಕೆ ಮತ್ತು ಇತರ ಸಮಸ್ಯೆಗಳು ಇನ್ನೂ ಹಾಗೆಯೇ ಇವೆ ಎಂದು ಹೇಳಿದ್ದಾರೆ.
ಅನೇಕ ಜನರು ದೆಹಲಿಯ ಕುತ್ತಿಗೆಯನ್ನು ಬಗ್ಗಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ದೆಹಲಿಗೆ ಬಂದಾಗ, ಬಾಯಿ ಮುಚ್ಚಿಸಲು ಸಾಧ್ಯವಾಗುವುದಿಲ್ಲ. ದೆಹಲಿ ದೇಶದ ರಕ್ಷಣೆ ಮತ್ತು ಭದ್ರತೆಗೆ ಪ್ರಮುಖ ಕೇಂದ್ರವಾಗಿದೆ. ಈ ಭೂಮಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ನೆಲೆಯಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).