ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಜಲ್ಲಿಕಟ್ಟು
- ತಮಿಳುನಾಡಿನಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಜಲ್ಲಿಕಟ್ಟು ಉತ್ಸವ
- ಜಲ್ಲಿಕಟ್ಟಿನಲ್ಲಿ ಅತೀ ಹೆಚ್ಚು ಹೋರಿಗಳನ್ನು ಪಳಗಿಸುವ ವ್ಯಕ್ತಿಗೆ ಸರ್ಕಾರಿ ನೌಕರಿಯ ಘೋಷಣೆ
- ಪೊಂಗಲ್‌ನ ಮೂರನೇ ದಿನದಂದು ನಡೆಯುವ ಜಲ್ಲಿಕಟ್ಟು ಉತ್ಸವ
ತಮಿಳುನಾಡು: ತಮಿಳುನಾಡಿನಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಜಲ್ಲಿಕಟ್ಟು (Jallikattu) ಸ್ಪರ್ಧೆಯಲ್ಲಿ ಗರಿಷ್ಠ ಸಂಖ್ಯೆಯ ಎತ್ತುಗಳನ್ನು ಪಳಗಿಸುವ ವ್ಯಕ್ತಿಗೆ ಪಶುಸಂಗೋಪನಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.
ಮಧುರೈ ಶೌರ್ಯಕ್ಕೆ ಖ್ಯಾತಿಗಳಿಸಿದ ನಾಡಾಗಿದ್ದು,ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಯಲ್ಲಿ, ಹೆಚ್ಚು ಎತ್ತುಗಳನ್ನು ಪಳಗಿಸುವ ವ್ಯಕ್ತಿಗೆ ಪಶುಸಂಗೋಪನಾ ಇಲಾಖೆಯಲ್ಲಿ ಸೂಕ್ತವಾದ ಸರ್ಕಾರಿ ಉದ್ಯೋಗವನ್ನು ನೀಡಲಾಗುತ್ತದೆ" ಎಂದು ಅವರು ಹೇಳಿದರು.
ಜಲ್ಲಿಕಟ್ಟು ಶತಮಾನಗಳಷ್ಟು ಹಳೆಯದಾದ ತಮಿಳುನಾಡಿನ ಕ್ರೀಡೆಯಾಗಿದ್ದು, ಪೊಂಗಲ್‌ನ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ಕ್ರೀಡೆಯ ಉತ್ತೇಜನಕ್ಕಾಗಿ ನಾವು ಮಧುರೈನಲ್ಲಿ ಜಲ್ಲಿಕಟ್ಟು ಅರೆನಾವನ್ನು ನಿರ್ಮಿಸಿದ್ದೇವೆ ಎಂದರು.
ಮುಖ್ಯಮಂತ್ರಿಗಳ ಆಗಮನಕ್ಕೂ ಮುನ್ನ, ಭಾಗವಹಿಸುವವರು ಮತ್ತು ಹೋರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳದಲ್ಲಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮುಖ್ಯ ಕಾರ್ಯಕ್ರಮಕ್ಕೂ ಮುಂಚೆಯೇ ವೈದ್ಯಕೀಯ ಸೌಲಭ್ಯಗಳು, ಪ್ರಾಣಿಗಳ ಆರೋಗ್ಯ ತಪಾಸಣೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿತ್ತು.
ಜಲ್ಲಿಕಟ್ಟು ಇದರ ಅರ್ಥ ಜಲ್ಲಿ (ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು) ಮತ್ತು ಕಟ್ಟು (ಹಿಡಿಯುವುದು) ಗುಂಪಿನೊಳಗೆ ಬಿಟ್ಟ ಗೂಳಿಯ ಕೊಂಬಿಗೆ ಕಟ್ಟಲಾದ ನಾಣ್ಯಗಳನ್ನು ಕಿತ್ತುಕೊಂಡು ಆ ಗೂಳಿಯನ್ನು ಪಳಗಿಸುವುದೇ ಜಲ್ಲಿಕಟ್ಟಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ಅದನ್ನು ತಡೆಯಲು ಪ್ರಾಣಿಯ ಗೂನು (ಬೆನ್ನು) ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ, ಅವರು ಗೂಳಿಯೊಂದಿಗೆ ಓಡುತ್ತವೆ. ಪುಲಿಕುಲಂ ಮತ್ತು ಕಂಗಯಂ ತಳಿಯ ಎತ್ತುಗಳನ್ನು ಈ ಕ್ರೀಡೆಗೆ ಬಳಸುತ್ತಾರೆ. ಉತ್ಸವದಲ್ಲಿ ಗೆಲ್ಲುವ ಎತ್ತುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ,(ಏಜನ್ಸೀಸ್).